ಮಂಗಳೂರು: ದುಬೈನಲ್ಲಿ ನವೆಂಬರ್ 4 ರಿಂದ 6ರವರೆಗೆ ನಡೆಯಲಿರುವ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಹೆಸರಿನ 'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ದುಬೈ ಕಲ್ಚರಲ್ ಅಂಡ್ ಸೈಂಟಿಫಿಕ್ ಅಸೋಸಿಯೇಶನ್ ಆಯೋಜಿಸಿರುವ ಈ ಸ್ಪರ್ಧೆಯು ದುಬೈನ ಅಲ್ ಮಮ್ಜಾರ್ನಲ್ಲಿ ನಡೆಯಲಿದೆ. ಸುಮಾರು 6 ತಿಂಗಳ ಕಾಲ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಹಾವ್ವಾ ಅವರನ್ನು ಆಯ್ಕೆ ಮಾಡಿದೆ. 


ಯುಎಇಯ ಸ್ಥಾಪಕ ಅಧ್ಯಕ್ಷ ಶೈಖ್ ಝಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಪತ್ನಿ ಶೈಖಾ ಫಾತಿಮಾ ಬಿನ್ತ್ ಮುಬಾರಕ್ ಅವರ ಹೆಸರಿನ್ನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇವರು 'Mother of UAE' ಎಂದೇ ಹೆಸರಾಗಿದ್ದಾರೆ. 2016ರ ನವಂಬರ್​​​​​​​​ನಲ್ಲಿ ಪ್ರಾರಂಭವಾದ ಹೋಲಿ ಕುರಾನ್ ಪ್ರಶಸ್ತಿಗೆ ವಿಶ್ವದ ನಾನಾ ದೇಶಗಳ ಕುರಾನ್ ಕಂಠ ಪಾಠ ಮಾಡಿರುವ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಾರೆ. ವಿಜೇತರಿಗೆ ಸುಮಾರು 2.50 ಲಕ್ಷ ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿಯನ್ನು ಯುಎಇ ಸರ್ಕಾರ ನೀಡಲಿದೆ.