ಬೆಂಗಳೂರು :ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ  ರಣದೀಪ್ ಸಿಂಗ್ ಸುರ್ಜೆವಲ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಧಿಕಾರ ದುರ್ಬಳಿಕೆ ಆರೋಪಕ್ಕೆ ಕೈ ಸರ್ಕಾರ ಗುರಿಯಾಗಿದೆ.ಮಂಗಳವಾರ ಬೆಳಿಗ್ಗೆ ಶಾಂಗ್ರಿಲಾ ಹೋಟೆಲ್ ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುರಜೆವಾಲ ಪಾಲ್ಗೊಂಡಿದ್ದು, ಅಧಿಕಾರಿಗಳ ಸಭೆಯಲ್ಲಿ ಸುರ್ಜೆವಾಲಾ ಅವರಿಗೆ ಏನು ಕೆಲಸ? ಎಂದು ವಿಪಕ್ಷಗಳು ಕೆಂಡ ಕಾರುತ್ತಿವೆ.


COMMERCIAL BREAK
SCROLL TO CONTINUE READING

ಬಿಜೆಪಿ ಗರಂ :


ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ #ATMSarkara ದ ಗೌಪ್ಯ ಸಭೆಯ ರಹಸ್ಯವೇನು...?ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ..? ಇದು 85% ಡೀಲ್‌ ಫಿಕ್ಸಿಂಗ್ ಸಭೆಯೇ..? ಉತ್ತರಿಸಿ ಮಾನ್ಯ @siddaramaiah, @DKShivakumar ಅವರೇ... ಎಂದು ಟ್ವೀಟ್ ಮಾಡಿ ಪ್ರಶ್ನಿಸಿವೆ.


ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? :ಯತ್ನಾಳ್ ಪ್ರಶ್ನೆ 


ಇದು ಯಾವ ಸಭೆ? ಕಾಂಗ್ರೆಸ್ ಪಕ್ಷದ ಉಸ್ತುವಾರಿ ನಡೆಸುವ ಸಭೆಯಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿಗಳಿಗೆ ಏನು ಕೆಲಸ? ಬಿಬಿಎಂಪಿ ಚುನಾವಣೆಗೆ ಸಂಗ್ರಹ ಮಾಡಲು ಸೂಚಿಸಿದ್ದಾರೆಯೇ? ಬಿಬಿಎಂಪಿ ವಾರ್ಡ್ ಮರುವಿಂಗಡಣೆಯನ್ನು ಸುರ್ಜೆವಾಲರವರ ನೇತೃತ್ವದಲ್ಲಿ ಮಾಡುತ್ತಿದ್ದೀರಾ? ಇಂತಹ ಸಭೆಗಳಲ್ಲಿ ಯಾವ ಅನುಮತಿಯೊಂದಿಗೆ ಈ ಅಧಿಕಾರಿಗಳು ಪಾಲ್ಗೊಂಡಿದ್ದಾರೆ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ ಕಾಂಗ್ರೆಸ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.