ಹುಬ್ಬಳ್ಳಿ: ಇದು ಎನ್‌ಡಿಎಗೆ ಕೊನೆಯ ಚುನಾವಣೆ‌ ಆಗಿದ್ದು  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಂತ್ಯ ಆಗುತ್ತದೆ ಎಂದು ಶಾಸಕ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯಾ ಪ್ರಸಾದ್ ಭವಿಷ್ಯ ನುಡಿದರು.


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಶಾಸಕ ಹಾಗೂ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯಾ ಪ್ರಸಾದ್,  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೋಲುತ್ತಾರೆ. ಕಳೆದ 9 ವರ್ಷಗಳ ಅಧಿಕಾರವಧಿಯಲ್ಲಿ ಇಡಿ, ಐಟಿಯಂತಹ ಸಂಸ್ಥೆಗಳನ್ನು ಕೈ ಗೊಂಬೆಯಾಗಿ ಕೆಲಸ ಮಾಡುವಂತಹ ಕೆಲಸ ಆಗಿದೆ. ಇದು ಬಹಳ ದಿನ ನಡಿಯಲ್ಲ ಎಂದರಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಬಹಳ ದಿನ ಮನ್ನಣೆ ಸಿಗೋಲ್ಲ. ಇದರಿಂದಾಗಿ ಜನರಿಗೂ ಸಹ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಂತ್ಯ ಆಗುತ್ತದೆ ಎಂದರು. 


ಈ ಸಂದರ್ಭದಲ್ಲಿ ಬಿಜೆಪಿಯವರು ಕಾಂಗ್ರೆಸ್ ನಾಯಕರ ಖಾತೆಗಳನ್ನು ಸೀಜ್ ಮಾಡಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಅಬ್ಬಯ್ಯಾ ಪ್ರಸಾದ್, ಇವರಿಗೆಲ್ಲ ಯಾವಾಗ ಯಾವಾಗ ಚುನಾವಣೆ ಬರುತ್ತದೆಯೋ, ಅಂತಹ ಸಂದರ್ಭದಲ್ಲಿ ಕೀಳು ಮಟ್ಟದ ರಾಜಕೀಯ ಮಾಡುತ್ತಾರೆ. ಇವರ 9 ವರ್ಷಗಳ ಅಧಿಕಾರಾವಧಿಯಲ್ಲಿ ಇದನ್ನು ಎಲ್ಲರೂ ಗಮನಿಸಿದ್ದೀರಿ ಎಂದು ಹೇಳಿದರು. 


ಇದನ್ನೂ ಓದಿ- ವಕೀಲರ ಪ್ರತಿಭಟನೆ; ರಾಜಕೀಯ ಬಿಟ್ಟು ಚರ್ಚೆ ಮಾಡಿದರೆ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ: ಡಿಸಿಎಂ


ಇವರಲ್ಲಿ (ಬಿಜೆಪಿಯವರಲ್ಲಿ)  ಯಾವ ಸಂಸದರೂ ಮತ್ತು ಮಂತ್ರಿಗಳು ಭ್ರಷ್ಟರಿಲ್ಲ. ಯಾವ ಇಡಿ, ಐಟಿ ರೈಡ್ ಆದ್ರೂ ಸಹ ಅದು ಕಾಂಗ್ರೆಸ್ ನಾಯಕರ ಮೇಲಷ್ಟೇ ಆಗುತ್ತದೆ. ಕಾಂಗ್ರೆಸ್ ಮೇಲೇನೆ ದಬ್ಬಾಳಿಕೆ ಆಗ್ತಾ ಇದೆ. ಬಹುಶಃ ಇದೊಂದು ಕಾಲಚಕ್ರ ನಡೀಬೇಕು ನಡೀತಾ ಇದೆ. ಒಂದು ದಿನ ಅಂತ್ಯ ಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 


ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷರಾಗಿ ಮೂರನೇ ಬಾರಿಗೆ ಎ.‌ಎಂ.ಹಿಂಡಸಗೇರಿ ಆಯ್ಕೆ! 
ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆ ದೊಡ್ಡದಾದ ಸಂಸ್ಥೆ ಅಧ್ಯಕ್ಷರಾಗಿ ಮಾಜಿ ಸಚಿವ  ಎ.‌ಎಂ.ಹಿಂಡಸಗೇರಿ ಮೂರನೇ ಬಾರಿಗೆ ಆಯ್ಕೆಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾಸಕ  ಅಬ್ಬಯ್ಯಾ ಪ್ರಸಾದ್, ನಮ್ಮ ನಾಯಕರಾದಂತಹ ಎ.ಎಂ ಹಿಂಡಸಗೇರಿ ಅಂಜುಮನ್  ಸಂಸ್ಥೆಯ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿ ಒಂದು ದೊಡ್ಡ ರೀತಿಯಲ್ಲಿ ಜಯಗಳಿಸಿದ್ದಾರೆ. ಅಂಜುಮನ್ ಸಂಸ್ಥೆಗೆ ತನ್ನದೇ ಆದಂತಹ ಇತಿಹಾಸ ಇದೆ.  ಈ ಸಂಸ್ಥೆ ಶೈಕ್ಷಣಿಕವಾಗಿ ಸಮಾಜಿಕವಾಗಿ ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡ್ತಾ ಇದೆ. ಅಂತಹ ಸಂಸ್ಥೆಗೆ ಅಧ್ಯಕ್ಷರಾಗಿ  ಎ.‌ಎಂ.ಹಿಂಡಸಗೇರಿ 3 ನೇ ಬಾರಿ ಆಯ್ಕೆಯಾಗಿದ್ದಾರೆ. ಇದು  ಅವರ ಜನಪರ ಕಾರ್ಯಕ್ಕೆ ಮಾದರಿ ಆಗಿದೆ. ಬಹಳ ದೊಡ್ಡ ಮಟ್ಟದಲ್ಲಿ ರಾಜಕೀಯದಲ್ಲಿ ಗುರುತಿಸಿ ಕೊಂಡವರು ಈ ಸಂಸ್ಥೆಗೆ ಆಯ್ಕೆ ಆದಂತವರಿಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 


ಇದನ್ನೂ ಓದಿ- ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದ ಆರ್.ಅಶೋಕ್: ಪೂರಕ ಅಂಕಿ-ಅಂಶಗಳ ದಾಖಲೆ ಒದಗಿಸಿದ


ಈ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಪಾಲು ಕೂಡ ಇದೆ. ಇನ್ನು ಯಶಸ್ವಿಯಾಗಿ ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗ್ತಾರೆ ಎಂದ ಅವರು ನಾನು ಕೂಡ ಈ ಭಾಗದ ಶಾಸಕನಾಗಿ  ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಸಂಪೂರ್ಣವಾಗಿ ಈ ಸಂಸ್ಥೆಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.