ಬೆಂಗಳೂರು: ರಾಜ್ಯದಲ್ಲಿ ಯಾರೇ ಸಿಎಂ ಆಗಬೇಕು ಎಂದರೂ ಸಹ ನಮ್ಮ ಸಮುದಾಯದ ಅವಶ್ಯಕತೆ ಇದೆ. ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸ್ವತಃ ಸಿಎಂ ಗಡುವು ನೀಡಿದ್ದರೂ ಸಹ ಧಮ್ಕಿ ಹಾಕಿ ಮೀಸಲಾತಿ ಕೇಳಿದ್ರು ಎಂದು ಮಂತ್ರಿಯೊಬ್ಬರು ಹೇಳಿದ್ದಾರೆ. ಆದರೆ ನಾವೇನು ಧಮ್ಕಿ ಹಾಕಿಲ್ಲ. ತಾಯಿಯಾಣೆ ಮಾಡಿದ್ದೇನೆ ಮೀಸಲಾತಿ ಕೊಡ್ತೀನಿ ಎಂದು ಹೇಳಿದ್ದೀರಿ. ಆದರೆ ಆ ಮಾತಿನಲ್ಲಿ ನೀವು ನಿಂತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bengaluru Crime : ಆರು ತಿಂಗಳ ಹಿಂದೆ ನಾಪತ್ತೆಯಾದ ನೇಪಾಳಿ ಮಹಿಳೆ ಅಸ್ಥಿಪಂಜರವಾಗಿ ಪತ್ತೆ 


ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾನಾಡಿದ ಅವರು, “ಅಂದು ಸೇರಿದ ಜನವನ್ನು ಚದುರಿಸಬೇಕಾದ್ರೆ ಗೋಲಿಬಾರ್ ಆಗಬೇಕಿತ್ತು. ಕಾನೂನು ಕೈಗೆ ತೆಗೆದುಕೊಳ್ಳಲಿಲ್ಲ. ಇಡೀ ಕರ್ನಾಟಕದಲ್ಲಿ ಹರಿದುಹಂಚಿಹೋದ ಸಮುದಾಯ ಪಂಚಮಸಾಲಿ ಸಮುದಾಯ. ಉಳಿದ ಸಮುದಾಯ ಹೇಗೆ ಮೀಸಲಾತಿ ಲಾಭ ಪಡೆದಿದ್ಯೋ, ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೆ ನೀಡಬೇಕು ಎಂದು ಬಸವಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ಮಾಡಿದ್ದರು” ಎಂದರು.


“ದೆಹಲಿ ಹೈಕಮಾಂಡ್ ನ್ನು ಹೆದರಿಸಿಯೋ, ಬೆದರಿಸಿಯೋ ಬೇರೆ ಸಮುದಾಯದವರು ಮೀಸಲಾತಿ ಪಡೆದುಕೊಂಡರು. ಸಮುದಾಯವನ್ನು ಒಡೆಯುವ ಕುತಂತ್ರದ ಕೆಲಸವಾಯಿತು. ಅನೇಕ ವರ್ಷಗಳಿಂದ ನಾವು ಹೋರಾಟ ಮಾಡಿಕೊಂಡು ಸಂಘಟನೆಯಾಗಿದ್ದೇವೆ. ಕೆಲವರು ನಾವೇ ಲೀಡರ್ ಅಂತ ಹೇಳ್ತಾರೆ, ಲೀಡರ್ ಯಾರು ಅಂತ‌ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಎಲೆಕ್ಷನ್ ಬಂದ್ರೆ ಎಲ್ಲಾ ಗೊತ್ತಾಗಲಿದೆ” ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಉಳಿಸಿಕೊಂಡವರಿಗೆ ಗುಡ್‌ ನ್ಯೂಸ್. !


“ನಮ್ಮ ಸಿಸಿ ಪಾಟೀಲ್ ದೆಹಲಿಗೆ ಹೋದಾಗ ರಾಷ್ಟ್ರೀಯ ಅಧ್ಯಕ್ಷ ನಡ್ಡಾರವರು ನೀವು ಪಂಚಮಸಾಲಿನಾ ಅಂತ ಕೇಳಿದರಂತೆ. ಪಂಚಮಸಾಲಿಯನ್ನು ಪ್ರಧಾನಿ ಮೋದಿ ಕಿವಿಗೆ ಮುಟ್ಟಿಸುವ ಕೆಲಸವಾಗಿದೆ. ನಮ್ಮ ಸ್ವಾಮೀಜಿ ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿದ್ದಾರೆ. ಯತ್ನಾಳ್‌ಗೆ ನೋಟಿಸ್, ಯತ್ನಾಳ್ ಕಠಿಣ ಕ್ರಮ ಹಾಗೇ ಹೀಗೆ ಎಂದು ಮಾಧ್ಯಮದಲ್ಲಿ ಬಂತು. ನನಗೆ ನೋಟಿಸ್ ಕೊಟ್ಟಿರೋದನ್ನ ತೋರಿಸಿ ನೋಡೋಣ. ನೋಟಿಸ್ ಕೊಟ್ಟಿರೊದನ್ನ ತೋರಿಸಿದ್ರೆ 10 ಲಕ್ಷ ಕೊಡ್ತೀನಿ” ಎಂದು ಸವಾಲೆಸೆದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.