ಕಲಬುರಗಿ : ಕ್ಷಮೆ ಕೇಳಲು ನಾವೇನು ಅಪರಾಧ ಮಾಡಿದಿವಾ? ಅಂತಹ ದೊಡ್ಡ ತಪ್ಪು ಮಾಡಿದಿವಾ? ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎನ್ನುವ ಹಕ್ಕು ನಮ್ಮದಿದೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿದರು. 


COMMERCIAL BREAK
SCROLL TO CONTINUE READING

ಸಭೆಯಲ್ಲಿ ಯಾರು ಕ್ಷಮೆ ಕೇಳಿದರು ಗೊತ್ತಿಲ್ಲ, ನಾನಂತೂ ಕ್ಷಮೆ ಕೇಳಿಲ್ಲ ಕೇಳಲ್ಲ. ನಮ್ಮ ಬೇಡಿಕೆ ಪ್ರಕಾರ ನಾಯಕರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಆ ಸಭೆಯಲ್ಲಿ ಮುಕ್ತವಾಗಿ ಚರ್ಚೆಯಾಗಿದೆ. ನಮಗೆ ಸಮಾಧಾನವಾಗಿದೆ. ಕ್ಷಮೆ ಕೇಳುವಂತ ಹೇಡಿತನ ನನ್ನಲ್ಲಿಲ್ಲ ಎಂದರು. 


ಇದನ್ನೂ ಓದಿ: ಗೃಹಲಕ್ಷ್ಮಿ-ಶಕ್ತಿ ಯೋಜನೆಯಿಂದ ಅತ್ತೆ-ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ: ಬಿಜೆಪಿ


ನನ್ನ ಆತ್ಮ ಗೌರವಕ್ಕೆ ಧಕ್ಕೆ ಬಂದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಹೋಗ್ತೀನಿ ಅನ್ನೋ ಮಾತನ್ನ ಸಭೆಯಲ್ಲಿ ಹೇಳಿದ್ದೇನೆ. ಕೆಲವು ಸಚಿವರ ನಡವಳಿಕೆ ಅವರ ವರ್ತನೆ ಕೆಲವು ಶಾಸಕರಿಗೆ ಬೇಸರವಾಗಿತ್ತು. ಸಚಿವರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. 


ಗ್ಯಾರಂಟಿಗಳ ಘೋಷಣೆಯಿಂದ ಹಣದ ಭಾರ ಸರ್ಕಾರದ ಮೇಲೆ ಜಾಸ್ತಿಯಾಗಿದೆ ಈ ವರ್ಷದ ಪ್ರಾರಂಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸ್ವಲ್ಪ ಕಡಿಮೆ ಬರುತ್ತದೆ ಮುಂದಿನ ವರ್ಷದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡುವುದಾಗಿ ಸಿಎಂ ಹೇಳಿದ್ದಾರೆ ಎಂದು ಹೇಳಿದರು. 


ಇದನ್ನೂ ಓದಿ: ಕೆಪಿಎಸ್‍ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.