ಹಾಸನ : ಶಾಸಕರಾದ ರಾಮಸ್ವಾಮಿ ಹಾಗೂ ಶಿವಲಿಂಗೇಗೌಡ ಜೆಡಿಎಸ್ ನಿಂದ ದೂರ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಜಿಲ್ಲೆಯ ಅರಕಲಗೂಡು ತಾಲೂಕಿನ ಮಲ್ಲಿತಿಮ್ಮನಹಳ್ಳಿ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ರಾಮಸ್ವಾಮಿಯವರು ನಮ್ಮ ಕುಟುಂಬದ ಅಣ್ಣ ಇದ್ದ ಹಾಗೆ. ನಾವು ಅವರ ಮುಂದೆ ಹುಡುಗರು.  ನಾನು ಸಭೆಯಲ್ಲಿಯೇ ಹೇಳಿದ್ದೇನೆ. ಅವರು ರಾಜಕಾರಣ ಮಾಡಬೇಕಾದ್ರೆ ನಾವಿನ್ನೂ ರಾಜಕಾರಣಕ್ಕೆ ಬಂದಿರಲಿಲ್ಲ. ಅವರು ಪಕ್ಷ ಬಿಟ್ಟು ಹೋಗ್ತೇನೆ ಅಂತಾ ಎಲ್ಲಾದ್ರೂ ಹೇಳಿದ್ದಾರಾ. ಅವರು ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದವರು. ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡು ಬಂದವರು. ಅವರು ಪ್ರತಿನಿತ್ಯ ಯಾರನ್ನೋ‌ ಓಲೈಸಿಕೊಂಡು ಅವರ ಸ್ಥಾನಮಾನಗಳಿಗೆ ಕೆಲಸ ಮಾಡಿದವರಲ್ಲ. ರಾಮಸ್ವಾಮಿಯವರ ನೇಚರೇ ಬೇರೆ. ದಯವಿಟ್ಟು ಬೇರೆಯವರಿಗೂ ಅವರಿಗೂ ಕಂಪೇರ್ ಮಾಡಬೇಡಿ. ನೀವು ಯಾಕೆ ಊಹೆ ಮಾಡ್ಕೋತೀರಿ. ರಾಮಸ್ವಾಮಿಯವರ ರಾಜಕಾರಣಕ್ಕೂ ಬೇರೆಯವರ ರಾಜಕಾರಣಕ್ಕೂ ವ್ಯತ್ಯಾಸ ಇದೆ ಎಂದರು.


ಇದನ್ನೂ ಓದಿ : ಡಿಕೆಶಿಗೆ ಹುಟ್ಟುಹಬ್ಬದ ಕೇಕ್ ತಿನ್ನಿಸದ ಪ್ರಿಯಾಂಕಾ ಗಾಂಧಿ: ಬಿಜೆಪಿ ವ್ಯಂಗ್ಯ


ಅರಸೀಕೆರೆ ಶಿವಲಿಂಗೇಗೌಡ್ರದಾ ಹೇಳ್ತಿದ್ದೀರಲ್ಲ. ಅವರೂ ನಾಳೆ ನಮ್ಮ ಜೊತೆಗೇ ಇರಬಹುದು. ಶಿವಲಿಂಗೇಗೌಡ್ರು ಕೂಡಾ ಬಿಟ್ಟೂಗ್ತಿನಿ ಅಂತಾ ಹೇಳಿದ್ದಾರಾ. ಸ್ಥಳಿಯವಾಗಿ ರಾಜಕಾರಣಕ್ಕೆ ಅವರ ಭದ್ರತೆಗಾಗಿ ಓಡಾಡಿಕೊಂಡರಬಹುದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಮುಂದಿನ ದಿನಗಳು ಇವಕ್ಕೆಲ್ಲಾ ಉತ್ತರ ಕೊಡುತ್ತದೆ. ರಾಮಸ್ವಾಮಿ ಅಣ್ಣ ಅವರು ಎಲ್ಲಿ ಬಿಟ್ಟು ಹೋಗ್ತಿ ಅಂತಾ ಹೇಳಿದ್ದಾರೆ. ಅವರು ಅವರ ಪಾಡಿಗೆ ಅವರ ರಾಜಕಾರಣ ಮಾಡಿಕೊಂಡಿದ್ದಾರೆ. ಅವರು ಅಧಿಕಾರಕ್ಕಾಗಿ ಹುಡಿಕಿಕೊಂಡು ಯಾರ ಮನೆ ಬಾಗಿಲಿಗೂ ಹೋದವರಲ್ಲ. ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುವುದು ಬೇಡ ಎಂದು ಹೇಳಿದರು.


ಇದನ್ನೂ ಓದಿ : ಪಠ್ಯಪುಸ್ತಕಗಳನ್ನು ‘ಪಕ್ಷಪುಸ್ತಕʼಗಳನ್ನಾಗಿಸುವ ಹುನ್ನಾರಕ್ಕೆ ಧಿಕ್ಕಾರ: ಎಚ್‌ಡಿಕೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.