VIP Wedding: ಕಾಂಗ್ರೆಸ್ ನಾಯಕ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪುತ್ರ ಹಾಗೂ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪುತ್ರಿಯ ಮದುವೆ ದಿನಾಂಕ ಫಿಕ್ಸ್‌ ಆಗಿದೆ. ಈ ಬಗ್ಗೆ ಸ್ವತ: ವಿಶ್ವನಾಥ್ ಅವರೇ ಹೇಳಿಕೊಂಡಿದ್ದು, ತಮ್ಮ ಮಗಳ ಮದುವೆ ದಿನಾಂಕವನ್ನು ವೇದಿಕೆ ಮೇಲೆ ನೂರಾರು ಜನರ ಸಮ್ಮುಖದಲ್ಲಿ ಪ್ರಸ್ತಾಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಕಾಂಗ್ರೆಸ್ ನಾಯಕ ಬೈರತಿ ಸುರೇಶ್ ಹಾಗೂ ಬಿಜೆಪಿ ನಾಯಕ ಎಸ್‌.ಆರ್.ವಿಶ್ವನಾಥ್ ಬೀಗರಾಗುತ್ತಿದ್ದಾರೆ. ಮಕ್ಕಳಿಗೆ ಮದುವೆ ಮಾಡುವ ಮೂಲಕ ʼಕೈʼ ಹಾಗೂ ʼಕಮಲʼ ಒಂದಾಗುತ್ತಿದೆ. ವಿಶ್ವನಾಥ್ ಅವರ ಪುತ್ರಿಯನ್ನು ಬೈರತಿ ಸುರೇಶ್ ಪುತ್ರ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಹೇಳಿಕೊಂಡಿರುವ ವಿಶ್ವನಾಥ್, ಮದುವೆ ದಿನಾಂಕವನ್ನೂ ಸಹ ಘೋಷಿಸಿದ್ದಾರೆ. ಈಗಾಗಲೇ ಮದುವೆ ದಿನಾಂಕ ನಿಗದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 


ಇದನ್ನೂ ಓದಿ: ಯಾರೋ ಮಾಡಿದ ತಪ್ಪಿಗೆ ಸಿಎಂ ರಾಜೀನಾಮೆ ಯಾಕೆ?


ಸುರೇಶ್ ಪುತ್ರ ಸಂಜಯ್ ಹಾಗೂ ವಿಶ್ವನಾಥ್ ಪುತ್ರಿ ಅಪೂರ್ವ ಇಬ್ಬರು ಕಾಲೇಜು ಸ್ನೇಹಿತರು. ಸಂಜಯ್ ಹಾಗೂ ಅಪೂರ್ವ ಇಬ್ಬರು ಮಲ್ಲೇಶ್ವರಂನ ವಿದ್ಯಾಮಂದಿರದಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಇಬ್ಬರ ನಡುವೆ ಕಾಲೇಜು ದಿನಗಳಲ್ಲೇ ಸ್ನೇಹವಿತ್ತು. ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ. ಇದೀಗ ಈ ಇಬ್ಬರ ಪ್ರೇಮವು ಮದುವೆ ಹಂತಕ್ಕೆ ಬಂದಿದ್ದು, ಉಭಯ ಕುಟುಂಬಸ್ಥರ ಸಮ್ಮತಿ ಮೇರೆಗೆ ಮದುವೆ ನಿಶ್ಚಯವಾಗಿದೆ. 


ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಶ್ವನಾಥ್‌ ಅವರು, ʼಬೈರತಿ ಸುರೇಶ್ ಅವರ ಪುತ್ರ ನನ್ನ ಅಳಿಯನಾಗುತ್ತಿದ್ದಾನೆ. ೨೦೨೫ರ ಫೆಬ್ರವರಿ 7ರಂದು ಅರಮನೆ ಮೈದಾನ ಗೇಟ್ ನಂಬರ್ 1ಮತ್ತು 2ರಲ್ಲಿ ಮದುವೆ ಸಮಾರಂಭ ನಡೆಯಲಿದ್ದು, 9ನೇ ತಾರೀಖು ಮದುವೆ ಊಟ ಇರುತ್ತದೆ. ಯಾರೂ ಸಹ ಮಿಸ್ ಮಾಡ್ಬೇಡಿ. ತಮ್ಮ ಆಶೀರ್ವಾದ ನಮ್ಮ ಮಕ್ಕಳ ಮೇಲೆ ಇರಬೇಕುʼ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಿ ಆದೇಶ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.