ಬೆಂಗಳೂರು : ರಾಜ್ಯಕ್ಕೆ  ಮುಂಗಾರು ಮಾರುತಗಳು ಒಂದು ದಿನ ಮುನ್ನವೇ ರಾಜ್ಯಕ್ಕೆ ಪ್ರವೇಶ ಮಾಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಶನಿವಾರ ಉತ್ತರ ಒಳನಾಡಿಗೆ ಸಹ ಮುಂಗಾರು(Monsoon) ಪವೇಶವಾಗಿದೆ. ಜೂನ್ 6ರಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.


ಇದನ್ನೂ ಓದಿ : ಲಸಿಕೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ


ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡಪಿಯಲ್ಲಿ ಧಾರಾಕಾರ ಮಳೆ(Heavy Rainfall)ಯಾಗುವ ನಿರೀಕ್ಷೆ ಇದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ ರಾತ್ರಿಯೂ ಹಲವು ಬಡಾವಣೆಗಳಲ್ಲಿ ಮಳೆಯಾಗಿದೆ.


ಇದನ್ನೂ ಓದಿ : COVID-19 Package : ರಾಜ್ಯ ಸರ್ಕಾರದಿಂದ ಕಟ್ಟಡ ಕಾರ್ಮಿಕರ ಖಾತೆಗೆ ₹ 3 ಸಾವಿರ ಹಣ ರಿಲೀಸ್!


ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಯಾದಗಿರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್(Yellow Alert) ಘೋಷಣೆ ಮಾಡಲಾಗಿದೆ.
ಶನಿವಾರ ಕುಂದಾಪುರದಲ್ಲಿ 9 ಸೆಂಮೀ ಪಣಂಬೂರು 7, ಬೀದರ್ 5, ಬೆಂಗಳೂರು ಮತ್ತು ಮಂಡ್ಯದಲ್ಲಿ 4 ಸೆಂಮೀ ಮಳೆಯಾಗಿದೆ.


ಇದನ್ನೂ ಓದಿ : Karnataka Lockdown Relaxation : ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಸುಳಿವು ನೀಡಿದ ಸಿಎಂ ಬಿಎಸ್‌ವೈ!


ನೆಲಮಂಗಲ, ಚಿಂತಾಮಣಿ, ಮೂಡುಬಿದರೆಯಲ್ಲಿ 3 ಸೆಂಮೀ ಮಳೆ(Rainfall)ಯಾಗಿದೆ. ಕಮಲಾಪುರ, ಕಡೂರು, ಚಿತ್ರದುರ್ಗ, ಚನ್ನಗಿರಿ ಮತ್ತು ಭಾಗಮಂಡಲದಲ್ಲಿ 1 ಸೆಂಮೀ ಮಳೆಯಾಗಿದೆ.


ಇದನ್ನೂ ಓದಿ : PUC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ದ್ವಿತೀಯ PUC ಫಲಿತಾಂಶಕ್ಕೆ SSLC ಅಂಕವೂ ಪರಿಗಣನೆ!


ಕರಾವಳಿ ಭಾಗ(Coastal Area)ದಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ನೈಋತ್ಯ ಮುಂಗಾರು ಈ ವರ್ಷ ವಾಡಿಕೆಯಷ್ಟು ಮಳೆ ಸುರಿಸಲಿದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ : Heavy Rainfall : ಇನ್ನೆರಡು ದಿನ ರಾಜ್ಯದೆಲ್ಲೆಡೆ ಭಾರೀ ಮಳೆ : ಕರಾವಳಿ ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.https://zeenews.india.com/kannada/karnataka/slow-vaccination-is-a-testament-to-the-failure-of-the-government-says-d-k-shivakumar-47071