ತಡರಾತ್ರಿ ಸಿಲಿಕಾನ್ ಸಿಟಿಯಲ್ಲಿ ಅಗ್ನಿ ಅವಘಡ : 30ಕ್ಕೂ ಹೆಚ್ಚು ಆಟೋ ಸುಟ್ಟು ಭಸ್ಮ
Fire Incident in Bangalore : ತಡರಾತ್ರಿ 12 ಗಂಟೆಯ ಸಮಯ. ನಾಯಂಡಹಳ್ಳಿ ಸಮೀಪ ಇರೊ ಗಂಗೊಂಡನಹಳ್ಳಿಯ ವಾಹನ ಪಾರ್ಕಿಂಗ್ ಜಾಗ. ಇದೇ ಜಾಗದಲ್ಲಿ ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣ ಮಾತ್ರದಲ್ಲಿ ಆವರಿಸಿಕೊಂಡ ಬೆಂಕಿಯ ಜ್ವಾಲೆ ಆಟೋ, ಗೂಡ್ಸ್ ವಾಹನ ಸೇರಿದಂತೆ 30 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಕರಕಲು ಮಾಡಿದೆ.
ಬೆಂಗಳೂರು : ಅವ್ರೆಲ್ಲ ಕಷ್ಟಪಟ್ಟು ಜೀವನ ನಡೆಸ್ತಿದ್ದವರು. ಪ್ರತಿ ದಿನ ದುಡಿದು ತಿನ್ನೋರು. ಅವರ ಜೀವನಕ್ಕೆ ಆಟೋಗಳೇ ಆಧಾರವಾಗಿತ್ತು. ಆದ್ರೆ ರಾತ್ರೋ ರಾತ್ರಿ ಸಂಭವಿಸಿದ ಅಗ್ನಿ ದುರಂತಕ್ಕೆ ಮೂವತ್ತು ಕುಟುಂಬಗಳೇ ನಲುಗಿ ಹೋಗಿವೆ. ನಮ್ಮ ಜೀವನಕ್ಕೆ ಮುಂದೇನು ದಿಕ್ಕು ಅಂತಾ ಕಣ್ಣೀರು ಹಾಕ್ತಿದ್ದಾರೆ.
ಧಗ ಧಗಿಸ್ತಿರೊ ಬೆಂಕಿ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳ ಹರ ಸಾಹಸ. ಪಳಯುಳಕೆಯಂತೆ ನಿಂತಿರೊ ವಾಹನಗಳು. ಆಟೋದಲ್ಲಿದ್ದ ಪಾತ್ರೆ, ಬಟ್ಟೆಗಳೆಲ್ಲ ಸುಟ್ಟು ಕರಕಲಾಗಿದ್ರೆ. ಕಣ್ಣೀರು ಹಾಕ್ತಿರೊ ಜನ. ಇದೆಲ್ಲ ಘನಘೋರ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಅಗ್ನಿ ದುರಂತ.
ಇದನ್ನೂ ಓದಿ:ಕೋಟಾ ಶ್ರೀನಿವಾಸ ಪೂಜಾರಿಗೆ ʼಎಣ್ಣೆʼ ಕುಡಿತೀರಾ ಎಂದ ಡಿ.ಕೆ.ಶಿವಕುಮಾರ್!
ಹೌದು... ಅದು ತಡರಾತ್ರಿ 12 ಗಂಟೆಯ ಸಮಯ. ನಾಯಂಡಹಳ್ಳಿ ಸಮೀಪ ಇರೊ ಗಂಗೊಂಡನಹಳ್ಳಿಯ ವಾಹನ ಪಾರ್ಕಿಂಗ್ ಜಾಗ. ಇದೇ ಜಾಗದಲ್ಲಿ ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಕ್ಷಣ ಮಾತ್ರದಲ್ಲಿ ಆವರಿಸಿಕೊಂಡ ಬೆಂಕಿಯ ಜ್ವಾಲೆ ಆಟೋ, ಗೂಡ್ಸ್ ವಾಹನ ಸೇರಿದಂತೆ 30 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಕರಕಲು ಮಾಡಿದೆ. ಅಷ್ಟಕ್ಕೂ ಈ ಪಾರ್ಕಿಂಗ್ ಜಾಗವನ್ನು ರಿಜ್ವಾನ್ ಎನ್ನುವವರು ಬಾಡಿಗೆಗೆ ಪಡೆದು ನಡೆಸಿಕೊಂಡು ಬರ್ತಿದ್ದಾರೆ.
ವಾಹನ ಸವಾರರು ದಿನಕ್ಕೆ 30 ರೂಪಾಯಿ ಕೊಟ್ಟು ವಾಹನ ನಿಲ್ಲಿಸಿ ಮನೆಗೆ ಹೋಗ್ತಾರೆ. ಆದ್ರೆ ನಿನ್ನೆ ವಾಹನ ನಿಲ್ಲಿಸಿ ಮನೆಗೆ ತೆರಳಿದ್ದವರಿಗೆ ಶಾಕ್ ಕಾದಿತ್ತು. ಈ ಪಾರ್ಕಿಂಗ್ ಜಾಗಕ್ಕೆ ಹೊಂದಿಕೊಂಡಂತೆ ಪ್ಲಾಸ್ಟಿಕ್ ಗೋಡೌನ್ ಇದ್ದು ಅದರಿಂದಲೇ ಬೆಂಕಿ ಹೊತ್ತಿಕೊಂಡಿರೊ ಶಂಕೆ ಇದೆ. ಘಟನೆಯಲ್ಲಿ ಪ್ಲಾಸ್ಟಿಕ್ ಗೋಡೌನ್ ಕೂಡ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ:ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಇನ್ನೂ.. ತಮ್ಮ ಆಟೋಗೆ ಬಂದ ಸ್ಥಿತಿ ಕಂಡು ಮಾಲೀಕರು ಕಣ್ಣೀರು ಹಾಕ್ತಿದ್ದಾರೆ. ಈ ಅಟೋದಲ್ಲೇ ಪಾತ್ರೆ, ಬಟ್ಟೆ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ವಿ. ನಮ್ಮ ಕುಟಂಬಕ್ಕೆ ಆಟೋಗಳೆ ದಿಕ್ಕಾಗಿತ್ತು. ಆದ್ರೆ ಈಗ ಅದು ಸುಟ್ಟುಹೋಗಿದ್ದು ನಮ್ಮ ಜೀವನ ಹೇಗೆ. ನನ್ನ ಗಂಡನಿಗೆ ಹೃದಯಾಘಾತ ಆಗಿದ್ರು ಆಟೋದಲ್ಲೇ ದುಡಿತಿದ್ರು. ನನಗು ಅಪಘಾತವಾಗಿ ಕೆಲಸ ಕೂಡ ಮಾಡಲು ಆಗೋದಿಲ್ಲ. ಮನೆಯಲ್ಲಿ ಇಬ್ಬರು ವಿಶೇಷ ಚೇತನ ಮಕ್ಕಳಿದ್ದಾರೆ. ಅವರನ್ನು ಹೇಗೆ ನೋಡಿಕೊಳ್ಬೇಕು ಎಂಬ ಮಹಿಳೆಯ ಗೋಳು ಅಯ್ಯೋ ಅನ್ನುವಂತೆ ಇತ್ತು.
ಸದ್ಯ ನಿರಂತರ ಕಾರ್ಯಾಚರಣೆ ಮೂಲಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇತ್ತ ಆಟೋ ಸುಟ್ಟು ಹೋದ ಮಾಲೀಕರು ದಿಕ್ಕು ತೋಚದಂತಾಗಿದ್ದು. ಸರ್ಕಾರದ ನೆರವಿನ ಕನಸಲ್ಲಿದ್ದಾರೆ. ಸರ್ಕಾರ ಇವರಿಗೆ ನೆರವಾಗುತ್ತಾ ಅನ್ನೋದು ಕಾದುನೋಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.