ಬೆಂಗಳೂರು: ಜೆಡಿಎಸ್ ಕಾರ್ಯಕರ್ತರಿಗೆ ಸಂಸದ ಪ್ರತಪ್ ಸಿಂಹ ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ಲೈವ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಕೊಡಗು ಪ್ರವಾಹ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜಿಲ್ಲ ಉಸ್ತುವಾರಿ ಸಚಿವ ಸಾ.ರಾ.ಅಮಹೇಶ್ ಮತ್ತು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರೊಂದಿಗೆ ದರ್ಪದಿಂದ ನಡೆದುಕೊಂಡರು ಎಂಬ ಆರೋಪಗಳಿಗೆ ಫೇಸ್ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಸಂಸದ ಪ್ರತಾಪ್ ಸಿಂಹ ಅವರು, ಫೇಸ್ಬುಕ್ ಪೇಜ್ ಗಳಲ್ಲಿ ಜೆಡಿಎಸ್ ಬೆಂಬಲಿಗರು ಹೊಲಸು ಪದಗಳನ್ನು ಬಳಸಿ ಇಡೀ ಒಕ್ಕಲಿಗ ಸಮುದಾಯಕ್ಕೇ ಅವಮಾನ ಮಾಡುತ್ತಿದ್ದಾರೆ. ಇದರಿಂದ ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದಿಲ್ಲ. ಇಂತಹ ಪದಗಳನ್ನು ಮುಂದೆ ಬಳಕೆ ಮಾಡಬೇಡಿ ಅಂತ ಸಲಹೆ ನೀಡಿದ್ದಾರೆ.


"ಹೆಸರಿನ ಮುಂದೆ ಆ ಗೌಡ, ಈ ಗೌಡ ಎಂದು ಹೆಸರು ಇಟ್ಟುಕೊಳ್ಳುತ್ತೀರಾ. ಬಾಯಿ ತೆಗೆದ್ರೆ ಅಕ್ಕ-ಅಮ್ಮ ಎಂದು ಹೊಲಸು ಶಬ್ದಗಳನ್ನು ಫೇಸ್ ಬುಕ್ ಅಲ್ಲಿ ಬೈಯ್ಯ ಬೇಡಿ. ಆ ರೀತಿ ಬೈಯಲೂ ನಮಗೂ ಬರುತ್ತೆ. ಗೌಡ ಎಂದು ಹೆಸರಿಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಾ ಇದ್ದೀರಿ. ಅದರಲ್ಲೂ ಈ ಜೆಡಿಎಸ್ ಬೆಂಬಲಿಗರು ಈ ರೀತಿ ಪದಗಳನ್ನು ಮಾಡುತ್ತಾರೆ. ಬೇರೆ ಅವರ ಬಗ್ಗೆ ಈ ರೀತಿಯ ಕೆಟ್ಟ ಪದಗಳನ್ನು ಬಳಕೆ ಮಾಡೋದನ್ನ ನಿಲ್ಲಿಸಿ" ಅಂತ ಹೇಳಿದ್ದಾರೆ.


"ಜೆಡಿಎಸ್ ಬೆಂಬಲಿಗರು ಫೇಸ್ ಬುಕ್ ಅಲ್ಲಿ ನಡೆಸುಕೊಳ್ಳುತ್ತಿರೋದು ಇಡೀ ಒಕ್ಕಲಿಗ ಸಮಾಜ ತಲೆ ತಗ್ಗಿಸುವಂತದ್ದಾಗಿದೆ. ನಿಮಗೆ ಬೇರೆ ಭಾಷೆ ಬರಲ್ವಾ. ಮನೆಯಲ್ಲಿ ಅಪ್ಪ-ಅಮ್ಮ ಇದೇ ಕಲಿಸಿರೋದಾ? ಸೆಂಟ್ರಲ್ ಮಿನಿಸ್ಟರ್ ಏನೋ ವ್ಯತ್ಯಾಸ ಆಗಿರಬಹುದು. ಸಾತನೂರಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಯಾಕೆ ಕರೆದುಕೊಂಡು ಬಂದಿದ್ರು ಅನ್ನೋದು ಮರೆತು ಹೋಯ್ತಾ? ಬೋಧನೆ ಕೊಡೋದು ಬಿಟ್ಟು, ಕೊಡಗು ಸಂಕಷ್ಟದಲ್ಲಿ ಇದೆ. ಅವರಿಗೆ ಸಹಾಯ ಮಾಡುವ ಕೆಲಸ ಮಾಡಿ. ಅಧಿಕಾರ ನಡೆಸುವವರ ಹತ್ತಿರ ಡಿಸೇನ್ಸಿ ಇದೆ. ಬೆಂಬಲಿಗರ ಹತ್ತಿರ ಮಾತ್ರ ಡಿಸೇನ್ಸಿ ಇಲ್ಲ. ಸಾ.ರಾ.ಮಹೇಶ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘನೆ ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುವ ಬಗ್ಗೆ ಗಮನ ಹರಿಸಿ" ಅಂತ  ಜೆಡಿಎಸ್ ಬೆಂಬಲಿಗರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 


ಅಷ್ಟೇ ಅಲ್ಲದೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೂ ಕೆಲವು ಕಿವಿ ಮಾತುಗಳನ್ನು ಹೇಳಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ಫೇಸ್ಬುಕ್ ಲೈವ್'ನಲ್ಲಿ ಹೇಳಿದ್ದೇನು ಎಂಬುದನ್ನು ನೀವೇ ಒಮ್ಮೆ ನೋಡಿ...