Sumalatha Ambareesh : `ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನೆಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ`
ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ.
ಮಂಡ್ಯ : ಅಜಯ್ ದೇವಗನ್, ಸುದೀಪ್ ಕನ್ನಡ-ಹಿಂದಿ ಭಾಷೆ ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ. ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ. ನಮ್ಮ ಭಾಷೆಗೆ ನಮ್ಮದೆ ಆದಂತಹ ಗೌರವ ಇದೆ. ನಾವು ಎಲ್ಲಾ ಭಾಷೆಯನ್ನ ಗೌರವಿಸುತ್ತೇವೆ. ಆದ್ರೆ ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಬಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ
ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವಿನ ‘ರಾಷ್ಟ್ರ ಭಾಷೆ’ ಕುರಿತ ಟ್ವೀಟ್ ಮಾತುಕತೆ ಇದೀಗ ದೊಡ್ಡಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ದೇಶಾದ್ಯಂತ ಅನೇಕರು ಸುದೀಪ್ಗೆ ಬೆಂಬಲ ಸೂಚಿಸಿದ್ದು, ಹಲವರು ಅಜಯ್ ದೇವಗನ್ ಪರ ನಿಂತಿದ್ದಾರೆ. ಇಬ್ಬರೂ ಸ್ಟಾರ್ ನಟರೂ ಈ ವಿಚಾರದ ಮಾತುಕತೆಯನ್ನು ಅಲ್ಲಿಗೆಯೇ ನಿಲ್ಲಿಸೋಣ ಎಂದು ಹೇಳಿದ್ದರೂ ಕೂಡ ಟ್ವಿಟರ್ನಲ್ಲಿ ಈ ಕುರಿತ ಹಲವು ಅಂಶಗಳು ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ : ಭಾರತ ಬಹು ಭಾಷೆಗಳ ತೋಟ-ಸಂಸ್ಕೃತಿಗಳ ಬೀಡು ಇದನ್ನು ಕದಡುವ ಪ್ರಯತ್ನ ಬೇಡ- ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.