MP Sumalatha : ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ : ಎಂಪಿ ಸುಮಲತಾ ಸ್ಪಷ್ಟನೆ
ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ, ಈಗ ಈ ಪ್ರಸ್ತಾಪ ಇಲ್ಲ.
ಮಂಡ್ಯ : ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ರೆ, ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ಕಳೆದ ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ ಕಾರಣದಿಂದ ಮುಖಂಡರನ್ನು ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಮುಖಂಡರು ಹಿಂದೆ ಫಂಡ್ ಬಗ್ಗೆ ಕೇಳಿದ್ರು. ಈ ಬಗ್ಗೆ ಪ್ರಸ್ತಾಪ ಮಾಡಲು ಅವರನ್ನು ಸಭೆ ಕರೆದಿದ್ದೇನೆ. ಈ ಸಭೆ ಬಿಜೆಪಿ ಸೇರುವ ಬಗ್ಗೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : Sumalatha Ambareesh : 'ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನೆಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ'
ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ, ಈಗ ಈ ಪ್ರಸ್ತಾಪ ಇಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಜನರು ಏನು ಅಭಿಪ್ರಾಯ ಹೇಳಿದ್ದಾರೆ ಅದನ್ನು ಹೇಳಲ್ಲ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ನಾನು ಏನು ಹೇಳಲ್ಲ. ಎಲ್ಲರೂ ಸ್ವತಂತ್ರರು ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ ಎಂದರು.
ಅಭಿಷೇಕ್ ಚುನಾವಣೆ ಸ್ಪರ್ಧೆ ಆತನಿಗೆ ಬಿಟ್ಟಿದ್ದು. ಸಿನಿಮಾಗೆ ಬಾ ಎಂದು ನಾವು ಹೇಳಿಲ್ಲ, ರಾಜಕೀಯ ಬಗ್ಗೆನೂ ನಾವು ಹೇಳಲ್ಲ. ಇದು ಆತನ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಬಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.