ಮಂಡ್ಯ : ಗಾಳಿಯಲ್ಲಿ ಗೂಂಡು ಹಾರಿಸಿದ್ರೆ ಅವರಿಗೆ ಯಾಕೆ ಅಷ್ಟು ಬಿಸಿ ಮುಟ್ಟುತ್ತೆ? ಗಿಲ್ಟ್ ಫೀಲ್ ಇರೋದ್ರಿಂದ ಎಂಎಲ್ಎಗಳು ರಿಯಾಕ್ಟ್ ಆಗ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಎಂಎಲ್ಎಗಳ ವಿರುದ್ದ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ಮಳವಳ್ಳಿಯ ಬಂಡೂರು ಗ್ರಾಮದಲ್ಲಿ ಎಂಎಲ್ಎಗಳಿಂದ ಕಮಿಷನ್ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದೆ ಸುಮಲತಾ, ಕಳಪೆ ಕಾಮಗಾರಿಗಳು ಹಲವಾರು ಕಡೆ ಕಂಡು ಬಂದಿವೆ. ಇದರ ಬಗ್ಗೆ ಒಬ್ಬರು ಯಾರು ಫೈಟ್ ಮಾಡಲು ಸಾದ್ಯವಿಲ್ಲ. ಈ ಸಿಸ್ಟಮ್ ಬದಲಾಯಿಸಲು ಸಾಧ್ಯವಿಲ್ಲ. ಹೋರಾಟ ಮಾಡಲೇ ಬೇಕು ನಾವು ಸಣ್ಣ ರೀತಿಯಲ್ಲಿ ಮಾಡ್ತಿದ್ದೇವೆ. ಗಾಳಿಯಲ್ಲಿ ಗೂಂಡು ಹಾರಿಸಿದ್ರೆ ಅವರಿಗೆ ಯಾಕೆ ಅಷ್ಟು ಬಿಸಿ ತಟ್ಟುತ್ತಿದೆ? ನಾನು ಯಾರ ಹೆಸರನ್ನ ಪ್ರಸ್ತಾಪ ಮಾಡಿಲ್ಲ. ಕಮಿಷನ್ ದಂಧೆ ನಡೆಯುತ್ತಿದೆ ಅಂತ ಹೇಳಿದ್ದೇನೆ. ಯಾಕೆ ಅವರು ಹೆಗಲು ಮುಟ್ಟಿಕೊಂಡು ನೋಡ್ತಿದ್ದಾರೆ? ಆ ಮಾತಿಗೆ ಯಾಕೆ ಅಷ್ಟು ಫೀಲಿಂಗ್ ಹಾಗಿದೆ ಅವರಿಗೆ? ಗಿಲ್ಟ್ ಫೀಲ್ ಇರೋದ್ರಿಂದ ಅವರು ರಿಯಾಕ್ಟ್ ಆಗುತ್ತಿದ್ದಾರೆ. ಕಾಂಟ್ರಾಕ್ಟ್ ಅಸೋಸಿಯೇಷನ್ ಹೆಡ್ ಪೋನ್ ಮಾಡಿದ್ರು. ನೀವು ಈ ಮಾತನ್ನ ಧೈರ್ಯವಾಗಿ ಹೇಳಿದ್ದಿರಿ ನಿಮಗೆ ಅಭಿನಂದನೆ. ನಾವು ನಿಮ್ಮ ಜೊತೆ ಇದ್ದೇವೆ, ಬಂದು ಮಾತನಾಡುತ್ತೇವೆ. ಕಿರುಕುಳ ಕೊಟ್ಟು ಪ್ರಾಣ ಹಿಂಡುತ್ತಿದ್ದಾರೆ ಅನ್ನೋದನ್ನ ಹೇಳುತ್ತೇವೆ. ನಿಮಗೆ ತೊಂದರೆಯಾಗಬಾರದು ಅಂತ ಸಧ್ಯಕ್ಕೆ ಸುಮ್ಮನೆ ಇರಿ ಅಂತ ಹೇಳಿದ್ದೇನೆ ಎಂದರು.


ಇದನ್ನೂ ಓದಿ : ನೀವು ರಸ್ತೆಬದಿ ಸಿಮ್ ಖರೀದಿಸುತ್ತಿರಾ? ಹಾಗಾದ್ರೆ ಈ ಖತರ್ನಾಕ್ ಸ್ಟೋರಿ ಓದಲೇ ಬೇಕು


ಇನ್ನು ಮುಂದುವರೆದು ಮಾತನಾಡಿದ ಅವರು, ನಾನು ಎಂಪಿ ನಾನು ಮಾತನಾಡ್ತೇನೆ. ನನ್ನ ಹೇಳಿಕೆಗೆ ಸಂಪೂರ್ಣವಾಗಿ ಸಫರ್ ಆಗಿದ್ದರೆ ಅವರು ನನಗೆ ಸಪೋರ್ಟಿವ್ ಆಗಿದ್ದಾರೆ. ಕಮಿಷನ್ ಎಷ್ಟು ಪರ್ಸೆಂಟ್ ಅದು ಸೀಕ್ರೆಟ್ ಹಾಗಿ ನಡೆಯುತ್ತಿದೆ. ಗುದ್ದಲಿ ಪೂಜೆ ಮಾಡೋಕೆ ಬರಲ್ಲ, ಅದಕ್ಕೂ ಗಲಾಟೆ ಮಾಡ್ತಿರಾ? ಕೇಂದ್ರ ಸರ್ಕಾರದ ಯೋಜನೆ ಪ್ರೋಟೊಕಾಲ್ ಪ್ರಕಾರ ಎಂಪಿ, ಎಂಎಲ್ಎ ಬರಬೇಕು‌. ಅದಕ್ಕೂನು ನಾವು ಬರಲ್ಲ ಅಂತಾರೆ. ಇದರಿಂದ ಜನ ಏನಾಗಬೇಕು, ಅಭಿವೃದ್ಧಿ ಕೆಲಸಗಳು ಹಲವು ಇದ್ದಾವೆ. ಅಭಿವೃದ್ಧಿ ಕೆಲಸಕ್ಕೂ ಅಡೆತಡೆ ಮಾಡುದ್ರೆ ಜನ ಎಲ್ಲಿಗೆ ಹೋಗ್ತಾರೆ. ಜನ ನಿಮ್ಮಗೆ ಜವಾಬ್ದಾರಿ ಕೊಟ್ಟಿರೋದು ಯಾಕೆ? ಜನ ಎಚ್ಚೆತ್ತುಕೊಳ್ಳಬೇಕು‌, ಚುನಾವಣೆ ಬರ್ತಿದೆ ಯೋಚನೆ ಮಾಡಿ ಎಂದು ಜನತೆಗೆ ಹಿಂಬಾಗಿಲಿನಿಂದ ತಿವಿದಿದ್ದಾರೆ.


ಇದನ್ನೂ ಓದಿ : ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕಾರ್ಮಿಕರ ಕೈಯಿಂದ ಮಲ ಸ್ವಚ್ಛತೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.