ಬೆಂಗಳೂರು: ಕಾಂಗ್ರೆಸ್‌ನವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಸಣ್ಣ ವಿಷಯವನ್ನೂ ಅವರು ದೊಡ್ಡದು ಮಾಡ್ತಾರೆ ಎಂದು ದೋಸೆ ತಿಂದ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಾನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ನನ್ನ ಕ್ಷೇತ್ರದ ಬೊಮ್ಮನಹಳ್ಳಿಯ ಎರಡು ಕಡೆ ಬಿಟ್ಟರೆ ಎಲ್ಲಿಯೂ ಸಮಸ್ಯೆಯಾಗಿಲ್ಲ. ಅಲ್ಲದೆ, ಮಳೆ ಪ್ರವಾಹ ನಿರ್ವಹಣೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ‌ ಬದ್ದವಾಗಿದೆ. ನಾನು ಕೂಡ ಮಳೆ ಸಂತ್ರಸ್ತರ ನೆರವಿಗೆ ಧಾವಿಸಿದ್ದೇನೆ. ನಾನು ಯಾವುದೋ ಒಂದು ಹೋಟೆಲ್ ಉದ್ಘಾಟನೆಗೆ ಹೋಗಿದ್ದನ್ನು ಟ್ರೋಲ್ ಮಾಡಿದ್ದು ಸರಿಯಲ್ಲ ಎಂದು ಕಾಂಗ್ರೆಸ್‌ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಎರಡು ದಿನ ಮುಂದುವರಿಯಲಿದೆ ಮಳೆ, ಕರಾವಳಿಯಲ್ಲಿ ಆರೆಂಜ್ ಅಲರ್ಟ್


ಅಲ್ಲದೆ, ನಾನು ನನ್ನ ಕ್ಷೇತ್ರದಲ್ಲಿ ದೋಸೆ ಅಂಗಡಿ ಉದ್ಘಾಟನೆ ಮಾಡಿದೆ, ಅದು ನನ್ನ ಕರ್ತವ್ಯ. ಎಲೆಕ್ಟ್ರಿಕ್ ಬಸ್ ಉದ್ಘಾಟನೆ ಇತ್ತು ಅಂದ್ರೆ ಅದಕ್ಕೂ ಹೋಗ್ತಿನಿ. ಗಣಪತಿ ಇಟ್ಟಿದ್ರೆ ಅಲ್ಲಿಗೂ ಹೋಗ್ತಿನಿ, ಒಬ್ಬ ಜನ ಪ್ರತಿನಿಧಿಯಾಗಿ ನಾನು ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. 


ಕಾಂಗ್ರೆಸ್ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ಹೀಗಾಗಿ ಅವರು ಬೆಂಗಳೂರನ್ನು ಹಾಳು ಮಾಡುವ ದೃಷ್ಟಿಯಿಂದ ಇದನ್ನು ಮಾಡುತ್ತಿದ್ದಾರೆ. ಟ್ರೋಲ್‌ಗಳಿಗೆ, ಕಾಂಗ್ರೆಸ್ ಪಾರ್ಟಿಗೆ ಉತ್ತರ ಕೊಟ್ಟು ಗೌರವ ಕಳೆದುಕೊಳ್ಳುವ ಕೆಲಸ ನಾನು ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು.


ಕಳೆದ ಕೆಲದಿನಗಳ ಹಿಂದೆ ಬೆಂಗಳೂರು ಮಳೆಗೆ ನಲುಗುತ್ತಿರುವಾಗ ಸಂಸದ ತೇಜಸ್ವಿ ಸೂರ್ಯ ದೋಸೆ ತಿನ್ನುತ್ತಿದ್ದಾರೆ ಎಂದು ಹೇಳಿ ಫೋಟೋ ಒಂದನ್ನು ರಾಜ್ಯ ಕಾಂಗ್ರೆಸ್‌ ಹಂಚಿಕೊಂಡಿತ್ತು. ಅಲ್ಲದೆ, ಟ್ರೋಲರ್ಸ್‌ಗಳಿಗೂ ಇದು ಆಹಾರವಾಗಿತ್ತು. ಸದ್ಯ ಇದೇಲ್ಲದಕ್ಕೂ ತೇಜಸ್ವಿ ಸೂರ್ಯ ಅವರು ಉತ್ತರ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.