ಬೆಂಗಳೂರು: ಬಂಡಾಯ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜ್ ಅವರನ್ನು ಗರುಡ‌ಚಾರ್ ಪಾಳ್ಯದಲ್ಲಿರುವ ನಿವಾಸದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ರಾಜೀನಾಮೆ ನಿರ್ಧಾರ ಬದಲಾಯಿಸುವಂತೆ ಕೇಳಿಕೊಂಡಿದ್ದಾರೆ.ಇದಕ್ಕೆ ಎಂ.ಟಿ.ಬಿ ನಾಗರಾಜ್ ಕೂಡ  ಸಮ್ಮತಿಸಿದ್ದಾರೆ ಎನ್ನಲಾಗಿದೆ.



COMMERCIAL BREAK
SCROLL TO CONTINUE READING

ಎಂ.ಟಿ.ಬಿ.ನಾಗರಾಜ್ ಅವರನ್ನು ಭೇಟಿಯಾದ ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ "ನಾವು ಒಟ್ಟಿಗೆ ಬದುಕಬೇಕು ಮತ್ತು ಒಟ್ಟಿಗೆ ಸಾಯಬೇಕು, ಏಕೆಂದರೆ ನಾವು ಪಕ್ಷಕ್ಕಾಗಿ 40 ವರ್ಷಗಳ ಕಾಲ ಕೆಲಸ ಮಾಡಿದ್ದೇವೆ, ಪ್ರತಿ ಕುಟುಂಬದಲ್ಲಿ ಏರಿಳಿತಗಳಿವೆ. ನಾವು ಎಲ್ಲವನ್ನೂ ಮರೆತು ಮುಂದೆ ಸಾಗಬೇಕು. ಎಂಟಿಬಿ ನಾಗರಾಜ್ (ಬಂಡಾಯ ಶಾಸಕ) ಅವರು ನಮ್ಮೊಂದಿಗೆ ಇರುತ್ತಾರೆ ಎಂದು ಭರವಸೆ ನೀಡಿದ್ದಕ್ಕೆ ಸಂತೋಷವಾಗಿದೆ" ಎಂದು ಹೇಳಿದರು. 



ಇನ್ನೊಂದೆಡೆಗೆ ಡಿಕೆಶಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಟಿ.ಬಿ.ನಾಗರಾಜ್ " ಪರಿಸ್ಥಿತಿ ಆಗ ನಾವು ರಾಜೀನಾಮೆ ಸಲ್ಲಿಸುವಂತೆ ಮಾಡಿತ್ತು, ಆದರೆ ಈಗ ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರು ಬಂದು ರಾಜೀನಾಮೆ ಹಿಂಪಡೆಯುವಂತೆ ವಿನಂತಿಸಿಕೊಂಡರು, ನಾನು ಕೆ ಸುಧಾಕರ್ ರಾವ್ ಅವರೊಂದಿಗೆ ಮಾತನಾಡುತ್ತೇನೆ ಮತ್ತು ನಂತರ ಏನು ಮಾಡಬೇಕೆಂದು ನೋಡುತ್ತೇನೆ, ಹಲವಾರು ದಶಕಗಳಿಂದ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ "ಎಂದು ಹೇಳಿದರು.