ಬೆಂಗಳೂರು: ತಾವು ಭಾಗವಹಿಸುವ ಯಾವುದೇ ಕಾರ್ಯಕ್ರಮವಾಗಲಿ ಅಲ್ಲಿ ಎಂಟಿಬಿ ನಾಗರಾಜ್ ಒಂದೆರಡು ಸ್ಟೆಪ್ ಹಾಕದಿದ್ರೆ ಅಲ್ಲಿ ಅವರ ಉಪಸ್ಥಿತಿ ಅಪೂರ್ಣವೇ ಸರಿ. ಇದೀಗ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನರ್ಹಗೊಂಡಿರುವ ಶಾಸಕ ಎಂಟಿಬಿ ನಾಗರಾಜ್ ಅವರು, ಬಾಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಡ್ಯಾನ್ಸ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಕಾಲೋನಿ ಗಣೇಶ ಉತ್ಸವದಲ್ಲಿ ಭಾಗಿಯಾಗಿದ್ದ ಎಂಟಿಬಿ ನಾಗರಾಜ್ ಅವರು ಅಲ್ಲಿ ನಿಂಬೆಹಣ್ಣು ಡ್ಯಾನ್ಸ್ ಮಾಡಿದ್ದಾರೆ.  ಎರಡು ದಿನಗಳ ಹಿಂದೆ ನಂದಗುಡಿ ಗಣೇಶೋತ್ಸವದಲ್ಲೂ ಎಂಟಿಬಿ ನಾಗರಾಜ್ ಫುಲ್ ಸ್ಟೆಪ್ ಹಾಕಿ ವೈರಲ್ ಆಗಿದ್ದರು. ಇದೀಗ ಬಾಯಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 


ಈ ಹಿಂದೆ ಕೂಡ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ಮಾಡುತ್ತಿದ್ದ ವೇಳೆ ಎಂಟಿಬಿ ನಾಗರಾಜ್ ನಾಗಿಣ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಸಹ ವೈರಲ್ ಆಗಿತ್ತು.