ಮೂಡಾ ಹಗರಣ : ಮೈಸೂರಿಗೆ ಪಾದಯಾತ್ರೆ; ಸಿದ್ದು ಇಕ್ಕಟ್ಟು!
ಮೂಡ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಲು ತೀರ್ಮಾನಿಸಿರುವ ಬಿಜೆಪಿ, ಜನರ ಗಮನ ಸೆಳೆದು ಸರ್ಕಾರ ವಿರುದ್ಧ ಕಹಳೆ ಮೊಳಗಿಸಲು ಕಸರತ್ತು ನಡೆಸಿದೆ.
ಬೆಂಗಳೂರು: ಮೈಸೂರು ನಾಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರ ಪತ್ನಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ತನ್ನ ಪ್ರತಿಭಟನೆಯ ತೀವ್ರತೆಯನ್ನ ಹೆಚ್ಚಿಸಲು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ (Padayatre From Bangalore to Mysore) ಮಾಡಲು ನಿರ್ಧರಿಸಿದೆ.
29 ಜುಲೈ ಸೋಮವಾರ, ವಿಪಕ್ಷ ನಾಯಕ ಆರ್ ಅಶೋಕ (Opposition leader R Ashoka), ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BJP State President B Y Vijayendra), ಮಾಜಿ ಸಚಿವ ಸುನಿಲ್ ಕುಮಾರ್ ಸೇರಿದಂತೆ ಮೈಸೂರು ಭಾಗದ ನಾಯಕರನ್ನ ಒಳಗೊಂಡು ಬೃಹತ್ ಪಾದಯಾತ್ರೆ ಮಾಡಲು ಕಮಲ ಪಡೆ ತೀರ್ಮಾನ ಮಾಡಿದೆ. ಇನ್ನು ಅಂತಿಮ ಹಂತದ ತಯಾರಿ ನಡೆಯುತ್ತಿದ್ದು, ಸೋಮವಾರ ಅಥವಾ ಮಂಗಳವಾರ ಪಾದಯಾತ್ರೆ ಮಾಡಲು ನಿರ್ಧಾರ ಮಾಡಬೇಕಿದೆ.
ಇದನ್ನೂ ಓದಿ- ಸರ್ಕಾರಿ ಮಾಂಟೆಸ್ಸರಿ ತರಗತಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ
ಜಿಲ್ಲೆಗಳಿಗೆ ಭೇಟಿ : ಜನರ ಗಮನ ಸೆಳೆದು ಸರ್ಕಾರ ವಿರುದ್ಧ ಕಹಳೆ
ಇನ್ನು ಈ ಪಾದಯಾತ್ರೆಗೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಹೋಗದೆ, ಚನ್ನಪಟ್ಟಣ, ಮಂಡ್ಯ ಮೂಲಕ ಒಳರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಜನರ ಗಮನ ಸೆಳೆಯುವ ಯೋಜನೆಯನ್ನ ಬಿಜೆಪಿ ರೂಪಿಸಿದೆ.
ಇದನ್ನೂ ಓದಿ- 2028ಕ್ಕೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಹೇಶ್
ಒಂದು ವಾರ ಈ ಪಾದಯಾತ್ರೆ ಮಾಡಲು ಚರ್ಚೆ ನಡೆಯುತ್ತಿದ್ದು, ಜೆಡಿಎಸ್ ಪಕ್ಷದ ಸಾತ್ ಬಗ್ಗೆ ಇನ್ನು ತೀರ್ಮಾನ ಆಗಬೇಕು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.