ರಾಯಚೂರು: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ವಿಧಾನಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನ ಕೇಂದ್ರಬಿಂದುವಾಗಿದ್ದು, ಅದರಲ್ಲೂ ಕಾಂಗ್ರೆಸ್ ವಲಯದಲ್ಲಿ ಬಿಸಿ‌ಬಿಸಿ ತಾಣವಾಗಿ‌ ಮಾರ್ಪಡಾಗಿದೆ.ಪ್ರಥಮ ದರ್ಜೆಯ ಗುತ್ತಿಗೆದಾರ ಮುಜೀಬುದ್ದೀನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ‌ ನಂತರವಂತೂ ನಗರ ಕೇಂದ್ರದ‌ ರಾಜಕೀಯ ಹೈಕಮಾಂಡ್ ಗಮನ ಸೆಳೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ"


ರಾಜ್ಯದ ರಾಜಕಾರಣದಲ್ಲಿ ಒಂದು ರೀತಿಯ ಬೆಳವಣಿಗೆ ನಡೆಯುತ್ತಿದ್ದರೆ ನಗರ ಕ್ಷೇತ್ರದಲ್ಲಿ ಮಾತ್ರ ಎಲ್ಲರ ಬಾಯಿಯಲ್ಲಿ ಮುಜೀಬುದ್ದೀನ್ ಕೈ ಸೇರ್ಪಡೆ ‌ಕುರಿತಂತೆ ಚರ್ಚೆಗಳು ಜೋರಾಗಿ ನಡೆದಿವೆ.ಕೆಪಿಸಿಸಿಯ ಉಪಾಧ್ಯಕ್ಷ ಎನ್.ಎಸ್.ಬೋಸರಾಜು ಅವರಿಗೆ ತಲೆನೋವಿಗೆ ಕಾರಣವಾಗಿದ್ದರೆ, ಮಾಜಿ ಶಾಸಕ ಸಯ್ಯದ್ ಯಾಸೀನ್ ರಿಗೆ ಆತಂಕಕ್ಕೆ ಈಡು ಮಾಡಿದೆ.ನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಯಕವಾಗಿರುವುದರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಅಲ್ಪಸಂಖ್ಯಾತ ನಾಯಕರಿಗೆ ಟಿಕೇಟ್ ನೀಡಬೇಕೆಂಬ ನಿಯಮ ಈ ಬಾರಿ ಸಡಲಿವಾಗಲಿದೆ ಎಂಬ ಅಂದಾಜು ತಲೆಕೆಳಗಾಗುವ ಸಾಧ್ಯತೆ ಇದೆ.


ಮಾಜಿ ಶಾಸಕ ಸಯ್ಯದ್ ಯಾಸೀನ್ ರ ಅನಾರೋಗ್ಯ, ವಯಸ್ಸಿನ ಕಾರಣ, 2023ರ ಟಿಕೇಟ್ ಕೈತಪ್ಪಲು ಕಾರಣವಾಗಲಿದೆ ಎಂಬ ಮಾತುಗಳಿವೆ. ಎನ್.ಎಸ್.ಬೋಸರಾಜು ಅವರ ಕಾರ್ಯವೈಖರಿಯ ಬಗ್ಗೆ ಅಲ್ಪಸಂಖ್ಯಾತ ಸಮುದಾಯದಲ್ಲಿ ಅಸಮಾಧಾನವಿದೆ. ಅಲ್ಪಸಂಖ್ಯಾತರಿಗೆ ವಂಚಿಸುತ್ತಾರೆ ಎಂಬ ಆರೋಪಗಳು ಟಿಕೇಟ್ ತಪ್ಪಲು ಮುಖ್ಯ ಕಾರಣವಾದರೂ ಕೂಡ 2023ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದರೆ ಅಧಿಕಾರ ಚುಕ್ಕಾಣಿ ಹಿಡಿದು ಮಂತ್ರಿ ಪದವಿ ಕೊಡುವ ಸಾಧ್ಯತೆಯೂ ಇದೆ.ಈ ಹಿನ್ನೆಲೆಯಲ್ಲಿ ಬೋಸರಾಜು ಅವರಿಗೆ ಕೊನೆ ಗಳಿಗೆ ನಗರ ಕ್ಷೇತ್ರಕ್ಕೆ ಟಿಕೇಟ್ ನೀಡಲ್ಲ ಎಂಬ ಸುದ್ದಿ ಕೈ ಹೈಕಮಾಂಡ್ ಆಪ್ತಮೂಲಗಳು ತಿಳಿಸಿವೆ.


ಇದನ್ನೂ ಓದಿ : Maharashtra Political Crisis : ಉದ್ಧವ್ ಠಾಕ್ರೆಗೆ ಓಪನ್ ಚಾಲೆಂಜ್ ಹಾಕಿದ ಏಕನಾಥ್ ಶಿಂಧೆ!


ಜನಬಲ ಮತ್ತು ಸಮಾಜ ಸೇವೆ ಚಟುವಟಿಕೆಗಳನ್ನು ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್, ಮುಜೀಬುದ್ದೀನ್ ಅವರಿಗೆ ಸೂಚನೆ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಹೇಳಿದೆ ಎನ್ನಲಾಗಿದೆ.ಆದಾಗ್ಯೂ, ಟಿಕೇಟ್ ಪಡೆಯುವ ಶ್ರಮ ಇರಲಿ ಎಂದು ಖರ್ಗೆ, ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಅವರಿಗೆ ಭೇಟಿಯಾಗಿ ಟಿಕೇಟ್ ನೀಡುವಂತೆ ಮನವಿ ಮಾಡಿರುವ ಕಾಂಗ್ರೆಸ್ ಮುಖಂಡ ಮುಜೀಬುದ್ದೀನ್, ಮತ್ತೆ ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಭಿ ನಡೆಸಿದ್ದಾರೆ ಎನ್ನಲಾಗಿದೆ.


ಇನ್ನೂ ಸುಮಾರು 11 ತಿಂಗಳು ಚುನಾವಣೆಗೆ ಬಾಕಿ ಇರುವಾಗ ಈ ರೀತಿಯ ಮನವರಿಕೆಯ ಪ್ರಕ್ರಿಯೆ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಆತಂಕ ಉಂಟು ಮಾಡಿದ್ದು ಸತ್ಯ.ಯಾದಗಿರಿ, ರಾಯಚೂರು ನಗರ ಕ್ಷೇತ್ರದಲ್ಲಿ ಒಂದು ಕ್ಷೇತ್ರವಾದರೂ ಮುಸ್ಲಿಂ ಸಮುದಾಯದ ನಾಯಕರಿಗೆ ನೀಡಲೇಬೆಂಬ ನಿಯಮವಿದೆ.ಯಾದಗಿರಿ ಕ್ಷೇತ್ರಕ್ಕೆ ರಾಜ್ಯಸಭೆಯ ನಾಯಕರಾದ ಖರ್ಗೆ ಅವರ ಆಪ್ತರಿಗೆ ಟಿಕೇಟ್ ಅಂತಿಮ ಸಾಧ್ಯತೆ ಇದ್ದು.ರಾಯಚೂರು ನಗರ ಕ್ಷೇತ್ರ ಮುಸ್ಲಿಂ ಸಮುದಾಯದ ನಾಯಕರ ಹುಡುಕಾಟದಲ್ಲಿ ತೊಡಗಿದಾಗ ಮುಜೀಬುದ್ದೀನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಈ ಭಾಗದಲ್ಲಿ ಪಕ್ಷಕ್ಕೆ ವರವಾಗಲಿದೆ ಎನ್ನಲಾಗುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.