ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್..! ಭದ್ರತೆ ಕೊಟ್ರೆ ಹೆಸರು, ವಿಡಿಯೋ ರಿಲೀಸ್...
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಮುನಿರತ್ನ ಜೈಲು ಪಾಲಾಗಿದ್ದಾರೆ. ಆದ್ರೆ ಅವರ ವಿರುದ್ಧದ ಆರೋಪಗಳು ಮಾತ್ರ ನಿಂತಿಲ್ಲ.. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಕೇಸ್ ನಲ್ಲಿ ಮಾಜಿ ಸಿಎಂಗಳ ಹೆಸರು ಸದ್ಯ ಕೂಡ ತಳಕು ಹಾಕಿಕೊಂಡಿದೆ. ಸಂತ್ರಸ್ಥೆ ಸಿಡಿಸಿದ ಹೊಸ ಬಾಂಬ್ ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದೆ.
ಬೆಂಗಳೂರು : ನನ್ನನ್ನ ಎರಡನೇ ಮಹಡಿಗೆ ಮುನಿರತ್ನ ಕರೆದುಕೊಂಡು ಹೋದ್ರು.. ದಿವಾನ್ ಕಾಟ್ ಮೇಲೆ ಕೂರಿಸಿ ಸಹಕರಿಸುವಂತೆ ಕೇಳಿಕೊಂಡ್ರು.. ಒಪ್ಪದಿದ್ದಾಗ ಬೆದರಿಸಿ ದಿವಾನ್ ಕಾಟ್ ಮೇಲೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ರು ಎಂದು ಆರೋಪಿಸಿರುವ ಮಹಿಳೆ ಪೊಲೀಸ್ ಅಧಿಕಾರಿಗಳಿಂದ ಹಿಡಿದು ಪಕ್ಷದ ಮುಖಂಡರುಗಳು ಸೇರಿದಂತೆ ಮಾಜಿ ಸಿಎಂಗಳ ಖಾಸಗಿ ವಿಡಿಯೋ ಮಾಡಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ..
ಹೌದು.. ಮಾಜಿ ಸಚಿವ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ಥ ಮಹಿಳೆ ಅವರ ವಿರುದ್ಧ ಮತ್ತಷ್ಟು ಆರೋಪಗಳ ಸುರಿಮಳೆಯನ್ನೇಗೈದಿದ್ದಾಳೆ. ಮಾಜಿ ಕಾರ್ಪೋರೇಟರ್ ಮಂಜುಳಾ ವಾಸುದೇವ್ ಮೂಲಕ ಪರಿಚಯವಾದ ಮುನಿರತ್ನ ತನನ್ನ ಎರಡನೇ ಫ್ಲೋರ್ ಕರೆದುಕೊಂಡು ಹೋಗಿದ್ರು. ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ರು..ಅದೇ ಖಾಸಗಿ ವಿಡಿಯೋ ತೋರಿಸಿ ಬೇರೆ ಬೇರೆ ಪ್ರಭಾವಿ ವ್ಯಕ್ತಿಗಳ ಖಾಸಗಿ ವೀಡಿಯೊ ಸೆರೆ ಹಿಡಿಬೇಕು ಅಂತಾ ಬೆದರಿಕೆ ಹಾಕಿದ್ರು ಎಂದು ಆರೋಪಿಸಿದ್ದಾಳೆ. ಅಷ್ಟೇ ಅಲ್ಲ.. ಬೇರೆ ಬೇರೆ ಮಹಿಳೆಯರನ್ನ ಬಳಸಿಕೊಂಡು ಪೊಲೀಸ್ ಅಧಿಕಾರಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಯೆಸ್.. ಕೇವಲ ರಾಜಕೀಯ ಮುಖಂಡರು ಮಾತ್ರವಲ್ಲ.. ಇಬ್ಬರು ಮಾಜಿ ಸಿಎಂಗಳ ಖಾಸಗಿ ಕ್ಷಣಗಳ ವಿಡಿಯೋ ಸೆರೆ ಹಿಡಿದಿಟ್ಟುಕೊಂಡಿರುವ ಮುನಿರತ್ನ ಅದನ್ನ ತೋರಿಸಿ ಬೆದರಿಸಿದ್ದಾರೆ ಎಂದು ಸಂತ್ರಸ್ಥ ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅದೇ ವಿಡಿಯೊ ಇಟ್ಟುಕೊಂಡು ಮಂತ್ರಿಯಾಗಿದ್ದು ಅಂತಾ ಹೇಳಿಕೊಂಡಿದ್ದರಂತೆ. ಹಾಗಾದ್ರೆ ಆ ಇಬ್ಬರು ಮಾಜಿ ಸಿಎಂಗಳು ಯಾರು ಅನ್ನೋ ಚರ್ಚೆ ಸದ್ಯ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ.
ಸದ್ಯ ಪ್ರಕರಣ ತನಿಖೆ ನಡೆಸ್ತಿರುವ ಎಸ್ಐಟಿ ಗೆ ಎಲ್ಲಾ ಮಾಹಿತಿ ನೀಡಿರೋದಾಗಿ ಹೇಳಿರುವ ಮಹಿಳೆ ಸಮಯ ಬಂದಾಗ ವಿಡಿಯೋ ರಿಲೀಸ್ ಮಾಡೋದಾಗಿಯೂ ಹೇಳಿದ್ದು ಸಂಚಲನ ಸೃಷ್ಟಿಸಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.