ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಂದ ಸಂತ್ರಸ್ತರ ನೆರವಿಗೆ ಒಟ್ಟು 120.30 ಕೋಟಿ ರೂ. ದೇಣಿಗೆ ನೀಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮುಜರಾಯಿ ಇಲಾಖೆ ಸಚಿವ ರಾಜಶೇಖರ ಪಾಟೀಲ್ ದೇವಸ್ಥಾನದ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ‌ ನೀಡಿದ್ದು, ಕೂಡಲೇ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಣ ಜಮಾ ಮಾಡುವಂತೆ ಸೂಚಿಸಿದೆ. ಮುಜರಾಯಿ ಇಲಾಖೆಗೆ ಒಳಪಡುವ ಒಟ್ಟು 81 ದೇವಸ್ಥಾನಗಳಿಂದ ದೇಣಿಗೆ ನೀಡಲಾಗುತ್ತಿದೆ.


ಯಾವ ದೇವಸ್ಥಾನದಿಂದ ಎಷ್ಟು ಅನುದಾನ?


  • ಮೈಸೂರಿನ ಚಾಮುಂಡೇಶ್ವರಿ, ನಂಜನಗೂಡು ‌ಶ್ರೀಕಂಠೇಶ್ವರ ದೇವಾಲಯಗಳಿಂದ ತಲಾ 1 ಕೋಟಿ ರೂಪಾಯಿ ‌ನೆರವು.

  • ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ- 3 ಕೋಟಿ ರೂಪಾಯಿ ನೆರವು.

  • ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನ- 1 ಕೋಟಿ 

  • ದುರ್ಗಾ ಪರಮೇಶ್ವರಿ ದೇವಾಲಯ-50 ಲಕ್ಷ ರೂ.

  • ಕನಕಪುರದ ಕಬ್ಬಾಳಮ್ಮ ದೇವಸ್ಥಾನ- 25 ಲಕ್ಷ ರೂ.

  • ಕಟೀಲು ದುರ್ಗಾಪರಮೇಶ್ವರಿ ದೇವಾಲಯ - 75 ಲಕ್ಷ ರೂ.

  • ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ - 50 ಲಕ್ಷ ರೂ.

  • ಘಾಟಿ ಸುಬ್ರಮಣ್ಯ - 50 ಲಕ್ಷ ರೂ.

  • ಬನಶಂಕರಿ ದೇವಾಲಯ - 50 ಲಕ್ಷ ರೂ.

  • ಕೊಪ್ಪಳದ ಹುಲಿಗೆಮ್ಮ ದೇವಾಲಯ 50 ಲಕ್ಷ ರೂ.

  • ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣ ದೇವಾಲಯ- 25 ಲಕ್ಷ ರೂ.

  • ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯ- 25 ಲಕ್ಷ ರೂ. 

  • ಗಂಜಾಂನ ನಿಮಿಷಾಂಬ ದೇವಾಲಯ- 25 ಲಕ್ಷ ರೂ.