ಬೆಂಗಳೂರು: ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರ್ಕಾರದ ಆಯುಷ್ಯದ ಕುರಿತು ಮಾತನಾಡಿದ್ದ ವೀಡಿಯೋ ಬಗ್ಗೆ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಪ್ರತಿಕ್ರಿಯಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ವೀಡಿಯೋಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.


COMMERCIAL BREAK
SCROLL TO CONTINUE READING

ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಮೈತ್ರಿ ಸರ್ಕಾರ  ಸುಭದ್ರವಾಗಿದೆ. ಇದನ್ನು ಅಸ್ಥಿರಗೊಳಿಸಲು ಕೆಲವು ಶಕ್ತಿಗಳು ರಾತ್ರಿ-ಹಗಲು‌ ಶ್ರಮಿಸುತ್ತಿವೆ. ನನ್ನ ಖಾಸಗಿ ಸಂಭಾಷಣೆಯ ವಿಡಿಯೋದ ಹಿಂದಿನ-ಮುಂದಿನ ಭಾಗಗಳನ್ನು ಕತ್ತರಿಸಿ ಪ್ರಸಾರ ಮಾಡಿರುವುದು ಪತ್ರಿಕಾಧರ್ಮ ಅಲ್ಲ. ಇದನ್ನು ನಂಬಿ ಮೈತ್ರಿ ಪಕ್ಷಗಳ ನಾಯಕರು ಪ್ರತಿಕ್ರಿಯಿಸಬಾರದು, ನಿರ್ಲಕ್ಷಿಬೇಕು ಎಂದು ಮೈತ್ರಿ ಪಕ್ಷಗಳ ನಾಯಕರಿಗೆ ಸಿದ್ದು ಕರೆ ನೀಡಿದ್ದಾರೆ.



ಇದರ ಬೆನ್ನಲ್ಲೇ ಇನ್ನೊಂದು ಟ್ವೀಟ್ ಮಾಡಿರುವ ಮಾಜಿ ಸಿಎಂ, ನನ್ನ ಖಾಸಗಿ ಸಂಭಾಷಣೆಯ ಎಡಿಟೆಡ್ ವಿಡಿಯೋ ಬಗ್ಗೆ ಶುಕ್ರವಾರದ ವರೆಗೆ ನಾನು ಪ್ರತಿಕ್ರಿಯಿಸಿರಲೇ ಇಲ್ಲ. ಹೀಗಿರುವಾಗ ಯು ಟರ್ನ್- ಹಿ ಟರ್ನ್ ಪ್ರಶ್ನೆ ಎಲ್ಲಿದೆ? ಅದು ದುರುದ್ದೇಶದಿಂದ ಕೂಡಿದ ಎಡಿಟೆಡ್ ವಿಡಿಯೊ. ಅದರ ಹಿಂದೆ‌ ಯಾರಿದ್ದರು ಎನ್ನುವುದನ್ನು ಶೀಘ್ರ ಪತ್ತೆ ಮಾಡಲಾಗುವುದು ಎಂದಿದ್ದಾರೆ.