ಬಳ್ಳಾರಿ: ಚುನಾವಣೆಯಿಂದ ಹಿಂದೆ ಸರಿದ ನನ್ನ ಮಗ ಒಬ್ಬ ಹೇಡಿ. ಇಂಥ ಕೆಲಸ ಯಾರೂ ಮಾಡಬಾರದು ಎಂದು ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ತಂದೆ, ಹಿರಿಯ ಕಾಂಗ್ರೆಸ್ಸಿಗ ಲಿಂಗಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ರಾಮನಗರ ಉಪ ಚುನಾವಣಾ ಕಣದಿಂದ ಹಿಂದೆ ಸರಿದು ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹೇಳಿಕೆ ನೀಡಿದ್ದರು. ಅಲ್ಲದೆ, ಬಿಜೆಪಿ ವಿರುದ್ಧ ವಾಗ್ದಾಳಿ ಕೂಡಾ ನಡೆಸಿದ್ದರು.


ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್ ತಂದೆ ಲಿಂಗಪ್ಪ ಅವರು, 'ಇಂಥಹ ರಾಜಕಾರಣ ಯಾರೂ ಮಾಡಬಾರದು. ಇದು ಹೇಸಿಗೆ, ಅಸಹ್ಯ. ನನಗೆ ತೀವ್ರ ನೋವು ತಂದಿದೆ. ನಾನು ಬಿಜೆಪಿಗೆ ಸೇರ್ಪಡೆಯಾಗಬೇಡ ಎಂದು ಮಗನಿಗೆ ಮೊದಲೇ ಹೇಳಿದ್ದೆ, ಆದರೂ ಹೋಗಿದ್ದ. ನಾವಿಬ್ಬರು ಒಂದೇ ಮನೆಯಲ್ಲಿದ್ದೇವೆ, ಯಾಕೆ ಹೀಗೆ ಮಾಡಿದ ಎಂದು ಗೊತ್ತಿಲ್ಲ, ಕೇಳುತ್ತೇನೆ' ಎಂದಿದ್ದಾರೆ.