ಮೈಸೂರು: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ಮುಂದೂಡಲಾಗಿದ್ದ ನಾಡಹಬ್ಬ ದಸರಾ ಗಜಪಯಣ ಕಾರ್ಯಕ್ರಮಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 29ರಂದು ಆನೆಗಳು ಮೈಸೂರಿನತ್ತ ಹೆಜ್ಜೆ ಹಾಕಲಿವೆ.


COMMERCIAL BREAK
SCROLL TO CONTINUE READING

ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಪಾಲ್ಗೊಳ್ಳಲಿರುವ 12 ಆನೆಗಳ ಪೈಕಿ ಮೊದಲ ತಂಡದಲ್ಲಿ 6 ಆನೆಗಳು ಆಗಸ್ಟ್ 29 ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿಯ ನಾಗಾಪುರ ಗಿರಿಜನ ಆಶ್ರಮ ಶಾಲೆ ಆವರಣದಿಂದ ಮೈಸೂರಿನತ್ತ ಪಯಣ ಆರಂಭಿಸಲಿವೆ. ಈ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ಬಳ್ಳೆ ಆನೆ ಶಿಬಿರದಿಂದಲೂ, ಬಲರಾಮ, ಅಭಿಮನ್ಯು, ವರಲಕ್ಷ್ಮಿ, ಕಾವೇರಿ, ವಿಜಯ ಆನೆಗಳು ತಿತಿಮತಿ ಶಿಬಿರದಿಂದಲೂ ಆಗಮಿಸಲಿವೆ.


ಈಗಾಗಲೇ ಅರಣ್ಯ ಇಲಾಖೆ ಗಜಪಯನಕ್ಕೆ ಸಿದ್ಧತೆ ನಡೆಸಿದ್ದು, ಮೈಸೂರು ಜಿಲ್ಲಾಡಳಿತ ಕೂಡ ಆನೆಗಳನ್ನು ಸ್ವಾಗತಿಸಲು ಸಿದ್ಧತೆಗೆ ಮುಂದಾಗಿದೆ.