ಮೈಸೂರು ದಸರಾ ಮಹೋತ್ಸವದಲ್ಲಿ ಮಿಂಚಿದ ಸ್ಥಬ್ದ ಚಿತ್ರಗಳು
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.ಸಾಯಂಕಾಲ ನಿಗದಿತ ಸಮಯದಲ್ಲಿ ಅರೆಮನೆಯ ಮುಂಬಾಗದಿಂದ 8ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಅರ್ಜುನ ಹೊತ್ತು ಸಾಗಲಿದ್ದಾನೆ.
ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿದರು.ಸಾಯಂಕಾಲ ನಿಗದಿತ ಸಮಯದಲ್ಲಿ ಅರೆಮನೆಯ ಮುಂಬಾಗದಿಂದ 8ನೇ ಬಾರಿಗೆ ಚಿನ್ನದ ಅಂಬಾರಿಯಲ್ಲಿ ನಾಡದೇವಿ ಚಾಮುಂಡೇಶ್ವರಿಯನ್ನು ಅರ್ಜುನ ಹೊತ್ತು ಸಾಗಲಿದ್ದಾನೆ.
ಮೆರವಣಿಗೆಯಲ್ಲಿ ಎಲ್ಲ ರಾಜ್ಯದ ಎಲ್ಲ ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ನಿರ್ಮಿಸಿರುವ ಸ್ಥಬ್ದ ಚಿತ್ರಗಳು ಗಮನ ಸೆಳೆದಿವೆ.ಭಾರತೀಯ ಯೋಧರು ನಡೆಸಿದ ಏರ್ ಸ್ಟ್ರೈಕ್ ನ ಸ್ತಬ್ಧಚಿತ್ರ ,ಆದಿಕವಿ ಪಂಪ, ಮೈಸೂರು ಸಂಸ್ಥಾನವನ್ನು ಆಳಿದ ಅರಸರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಸ್ತಬ್ಧಚಿತ್ರ .ಅತಿವೃಷ್ಟಿಯನ್ನು ನೆನಪಿಸುವ ಹಾಗು ಹೆಲಿಕಾಪ್ಟರ್ ನಲ್ಲಿ ಮತ್ತು ದೋಣಿಯಲ್ಲಿ ನಡೆಸಿದ ಕಾರ್ಯಾಚರಣೆಯನ್ನು ನೆನಪಿಸುವ ಚಿತ್ರ ,ಹಂಪಿಯನ್ನು ನೆನಪಿಸುವ ಚಿತ್ರ ಹೀಗೆ ಹಲವು ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಇನ್ನೊಂದೆಡೆ ಮೈಸೂರಿನ ರಾಜಮನೆತನದ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ವಡೆಯರ್ ಅವರು ಇಂದು ವಿಜಯ ದಶಮಿ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ 'ಶಮಿ' ಮರಕ್ಕೆ ಧಾರ್ಮಿಕ ವಿಧಿಗಳನ್ನು ಸಲ್ಲಿಸಿದರು ಮತ್ತು ಪ್ರಾರ್ಥನೆ ಸಲ್ಲಿಸಿದರು.ದಸರಾ ಆಚರಣೆಯ ಅಂಗವಾಗಿ ಇಂದು ಮೈಸೂರು ಅರಮನೆಯಲ್ಲಿ 'ವಜ್ರಮುಷ್ಠಿ ಕಾಳಗವನ್ನು (ಸಮರ ಕಲೆಗಳ ಪ್ರಾಚೀನ ರೂಪ) ಆಯೋಜಿಸಲಾಗಿತ್ತು.