Republic Day 2022: ದೆಹಲಿಯಲ್ಲಿ ಮಿಂಚಲಿದ್ದಾಳೆ ಮೈಸೂರಿನ ಕುವರಿ
ಗಣರಾಜ್ಯೋತ್ಸವದ ದಿನ ರಾಜ್ಯ ಮುನ್ನಡೆಸುವ ಯುವತಿ, ಟೀ ಅಂಗಡಿ ಮಾಲೀಕನ ಮಗಳು.
ನವದೆಹಲಿ: ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದ ವೇಳೆ ನಡೆಯುವ ಪರೇಡ್‌ನಲ್ಲಿ ಮೈಸೂರಿನ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ NCC ನೇತೃತ್ವ ವಹಿಸಲಿದ್ದಾರೆ.
ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ನಡೆಸುತ್ತಿರುವ ಪ್ರತಾಪ್ ಸಿಂಗ್ ಪುತ್ರಿಯಾಗಿರುವ ಪ್ರಮೀಳಾ ಕುನ್ವರ್ (Pramila Kunwar), ಮಹಾರಾಣಿ ಕಾಲೇಜಿನಲ್ಲಿ (Maharani's College) ಬಿಎಸ್‌ಸಿ ವಿದ್ಯಾರ್ಥಿನಿಯಾಗಿದ್ದಾರೆ.
[[{"fid":"227817","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ- ಬೆಂಗಳೂರು: ಪ್ರತಿಷ್ಟಿತ ಕಾಲೇಜಿನ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವನ ಬಂಧನ
ವಿವಿ ಮೊಹಲ್ಲಾ ನಿವಾಸಿಯಾಗಿರುವ ಪ್ರಮೀಳಾ 2018ರ ದಸರಾ ಮೆರವಣಿಗೆಯಲ್ಲೂ NCC ನೇತೃತ್ವ ವಹಿಸಿದ್ದರು. ಈಗಾಗಲೇ ದೆಹಲಿಯಲ್ಲಿ ರಿಹರ್ಸಲ್‌ಗಳು ನಡೆಯುತ್ತಿವೆ. ವಿಜಯ್ ಚೌಕ್ನಿಂದ ಇಂಡಿಯಾ ಗೇಟ್ ವರೆಗಿನ ರಾಜ್ಪಥ್ ಮಾರ್ಗದಲ್ಲಿ ಪಥಸಂಚಲನ ರಿಹರ್ಸಲ್ ನಡೆಸಲಾಗುತ್ತಿದೆ.
ಲಸಿಕೆ ಪಡೆಯದ ಜನರಿಗೆ ಈವೆಂಟ್‌ಗೆ ಹಾಜರಾಗಲು ಅನುಮತಿಯಿಲ್ಲ:
ಗಣರಾಜ್ಯೋತ್ಸವ ಪರೇಡ್ 2022 (Republic Day Parade 2022) ಗಾಗಿ ದೆಹಲಿ ಪೊಲೀಸರು ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, 'ಇನ್ನೂ ಲಸಿಕೆ ಪಡೆಯದ ಜನರು ಹಾಗೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಈವೆಂಟ್‌ಗೆ ಹಾಜರಾಗಲು ಅನುಮತಿಸಲಾಗುವುದಿಲ್ಲ'.
ಇದನ್ನೂ ಓದಿ- ಬಿರಿಯಾನಿಯನ್ನೂ ಹಿಂದಿಕ್ಕಿದ ಮಸಾಲಾ ದೋಸೆ.. ಫುಡ್ ಡೆಲಿವರಿ ಆ್ಯಪ್ಗಳಲ್ಲಿ ಇದೇ 'ಬೆಸ್ಟ್ ಸೆಲರ್'
ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಇಚ್ಚಿಸುವವರು "ಎರಡೂ ಡೋಸ್ ಕೊರೊನಾವೈರಸ್ ಲಸಿಕೆಗಳನ್ನು ಪದೆದಿರುವುದು ಅವಶ್ಯಕ. ಇದಲ್ಲದೆ ಸಂದರ್ಶಕರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ತರಲು ವಿನಂತಿಸಲಾಗಿದೆ" ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.