ಮೈಸೂರು: ಆನ್​ಲೈನ್(​Online Love) ಮೂಲಕ ಪರಿಚಯವಾಗಿದ್ದ ಒಡಿಶಾ ಮೂಲದ ಯುವತಿಯನ್ನು ಮೈಸೂರು ನಗರದ ಯುವಕನೊಬ್ಬ ಪ್ರೀತಿಸಿ ಮದುವೆಯಾಗಿದ್ದ. ಇದೀಗ ಯುವತಿಯ ಕುಟುಂಬಸ್ಥರು ಯುವತಿಯನ್ನು ಒಡಿಶಾಗೆ ಪೊಲೀಸರ ಮೂಲಕ ವಾಪಸ್ ಕರೆದೊಯ್ದಿದ್ದು, ಯುವಕ ತನ್ನ ಹೆಂಡತಿಗಾಗಿ ಕೋರ್ಟ್​ ಮೊರೆ ಹೋಗಲು ಮುಂದಾಗಿದ್ದಾನೆ.


COMMERCIAL BREAK
SCROLL TO CONTINUE READING

ಮೈಸೂರು(Mysuru) ನಗರದ ಉದಯಗಿರಿ ಬಡಾವಣೆಯ ನಿವಾಸಿ ಮಹಮ್ಮದ್​ ಅಖಿಬ್​ ಮತ್ತು ಒಡಿಶಾದ ಪ್ರಿಯಾತ್ ರಾವತ್​ ಪ್ರೀತಿಸಿ ಮದುವೆಯಾದವರು. ಯುವತಿ ಕುಟುಂಬಸ್ಥರು ದಿಢೀರ್ ಆಕೆಯನ್ನು ಕರೆದುಕೊಂಡು ಒಡಿಶಾಗೆ ತೆರಳಿದ್ದಾರೆ. ಪೊಲೀಸರು ಮತ್ತೆ ಯುವತಿಯನ್ನು ವಾಪಸ್​ ಕರೆದುಕೊಂಡು ಬರುವುದಾಗಿ ತಿಳಿಸಿದ್ದರು. ಆದರೆ ಈಗ ಯುವತಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲವೆಂದು ಯುವಕ ಮಹಮ್ಮದ್​ ಅಖಿಬ್​ ಅಳಲು ತೋಡಿಕೊಂಡಿದ್ದಾನೆ.


ಇದನ್ನೂ ಓದಿ: ಕೋಲಾರದ ಬೆಮೆಲ್ ಕಾರ್ಖಾನೆ ಖಾಸಗಿಯವರಿಗೆ ಹಸ್ತಾಂತರ ಇಲ್ಲ: ಸಚಿವ ಮುರುಗೇಶ್ ನಿರಾಣಿ


ಅಖಿಬ್​ಗೆ ಒಡಿಶಾ(Odisha)ದ ಯುವತಿ ಪ್ರಿಯಾತ್​ ರಾವತ್​ 1 ವರ್ಷದ ಹಿಂದೆ ಆನ್​ಲೈನ್​ ಗೇಮ್​ ಆಡುವ ವೇಳೆ ಪರಿಚಯವಾಗಿತ್ತು. ಬಳಿಕ ಇವರಿಬ್ಬರು ಪರಸ್ಪರ ಪ್ರೀತಿಸಿದ್ದರು. ಯುವಕ ಅನ್ಯ ಕೋಮಿನವನಾದ ಕಾರಣ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧಿಸಿದ್ದರು. ಬಳಿಕ ಅಖಿಬ್​ ಒಡಿಶಾಗೆ ಹೋಗಿ ಯುವತಿಯನ್ನು ಯಾರಿಗೂ ತಿಳಿಸದೇ ಕರೆದುಕೊಂಡು ಬಂದಿದ್ದಾನೆ.


ಅಖಿಬ್​ ಮತ್ತು ರಾವತ್​ ಫೆಬ್ರವರಿ 13ರಂದು ಮದುವೆಯಾಗಿದ್ದಾರೆ. ಇತ್ತ ಒಡಿಶಾದಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ವಿವಾಹದ ಬಳಿಕ ಯುವತಿ ತನ್ನ ಮನೆಗೆ ಕರೆ ಮಾಡಿ ತಾನು ಮೈಸೂರಿನ ಯುವಕನೊಂದಿಗೆ ಮದುವೆಯಾಗಿದ್ದಾಗಿ ತಿಳಿಸಿದ್ದಾಳೆ. ಇದರಿಂದ ಪೋಷಕರು ಕೆರಳಿದ್ದಾರೆ.


ಇದನ್ನೂ ಓದಿ: 12 ಲಕ್ಷ ಸಾಫ್ಟ್ವೇರ್ ಎಂಜಿನಿಯರುಗಳ ಬಲದಿಂದ ಬೆಂಗಳೂರಿಗೆ ಸಿಲಿಕಾನ್ ಸಿಟಿ ಹಿರಿಮೆ


ಇದೀಗ ಪೋಷಕರು ಒಡಿಶಾ ಪೊಲೀಸರ ಮುಖಾಂತರ ಇಲ್ಲಿನ ಉದಯಗಿರಿ ಠಾಣೆ ಪೊಲೀಸರ(Udayagiri Police Station) ಸಹಾಯ ಪಡೆದು ಯುವತಿಯನ್ನು ಕರೆದೊಯ್ದಿದ್ದಾರೆ. ಅಲ್ಲದೇ ಮತ್ತೆ ಆ ಯುವತಿಯನ್ನು ವಾಪಸ್​ ಕರೆ ತರಲಾಗುವುದು ಎಂದು ಅಖಿಬ್​ಗೆ ಭರವಸೆ ನೀಡಿದ್ದರಂತೆ. ಆದರೆ ಈವರೆಗೂ ಯುವತಿಯ ಸಂಪರ್ಕ ಸಿಕ್ಕಿಲ್ಲವೆಂದು ಆತ​ ದೂರಿದ್ದಾನೆ.


ತನ್ನ ಹೆಂಡತಿಯನ್ನು ವಾಪಸ್​ ಕರೆಸಬೇಕು ಎಂದು ಒತ್ತಾಯಿಸಿರುವ ಯುವಕ, ಒತ್ತಾಯಪೂರ್ವಕವಾಗಿ ತನ್ನ ಪತ್ನಿಯನ್ನು ಕರೆದೊಯ್ದ ಉದಯಗಿರಿ ಮತ್ತು ಒಡಿಶಾ ಪೊಲೀಸರ ವಿರುದ್ಧ ಕೋರ್ಟ್​ಗೆ ದೂರು ನೀಡಲು ನಿರ್ಧರಿಸಿದ್ದಾನಂತೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.