ಬೆಂಗಳೂರು: ಉನ್ನೋ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳು ಇಡೀ ದೇಶವನ್ನು ಬೆಚ್ಚಿ ಬಿಳಿಸಿವೆ, ಇದಕ್ಕೆ ಬೆಂಗಳೂರು ನಗರ ಕೂಡಾ ಹೊರತಲ್ಲ, ಈಗ ಬೆಂಗಳೂರಿನ ನಾಗರಿಕರು ಈ ಎರಡು ಘಟನೆಗಳ ಕುರಿತಾಗಿ ಭಾನುವಾರದಂದು ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ಪ್ರಮುಖವಾಗಿ ಅತ್ಯಾಚಾರಿಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ಒದಗಿಸುವಂತೆ ಹೋರಾಟದಲ್ಲಿ ಆಗ್ರಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರದಂದು 3 ಗಂಟೆಗೆ ಬೆಂಗಳೂರಿನ ಬೀದಿಗಿಳಿದು ಪ್ರತಿಭಟನೆಯಲ್ಲಿ  ಭಾಗವಹಿಸುವಂತೆ  ಕರೆ ನೀಡಲಾಗಿದೆ.  ಆ ಮೂಲಕ ಉತ್ತರ ಪ್ರದೇಶದ ಉನ್ನಾವೋ  ಮತ್ತು ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಅತ್ಯಾಚಾರಗಳಿಗೆ ಪ್ರತಿರೋಧ ಒಡ್ಡಲು ಮತ್ತು ಆರೋಪಿಗಳಿಗೆ  ಶಿಕ್ಷೆ ವಿಧಿಸಲು ವಿವಿಧ ಬ್ಯಾನರ್ಗಳು ಮತ್ತು ಪೋಸ್ಟರ್ಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಸೂಚಿಸಲಾಗಿದೆ.


ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ  ಬಿಜೆಪಿ ಶಾಸಕ ಬಾಗಿಯಾದ ಹಿನ್ನಲೆಯಲ್ಲಿ  ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದಿದ್ದರು,ಅದೇ ರೀತಿಯಾಗಿ  ಕತುವಾ ಪ್ರಕರಣದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯಳಗಿತ್ತು. ಈಗ ಈ ಎರಡು ಪ್ರಕರಣಗಳು  ಜನಾಂಗ, ಧರ್ಮ, ಜಾತಿ, ಸಾಮಾಜಿಕ-ಆರ್ಥಿಕ ಹಿನ್ನೆಲೆಗಳೆಲ್ಲವನ್ನು ಮೀರಿ ಬೆಂಗಳೂರಿನಲ್ಲಿ ಜನರು ಬೀದಿ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. 


ಬೆಂಗಳೂರಿನ ಈ ಚಳವಳಿಯನ್ನು ಈ ರೀತಿ ಹಮ್ಮಿಕೊಳ್ಳಲು ಸೂಚಿಸಲಾಗಿದೆ.


* ನಿಮ್ಮ ನೆರೆಹೊರೆಯ ಬೀದಿಯಲ್ಲಿ  ಪ್ರತಿಭಟನೆಯನ್ನು ನಿರ್ಧರಿಸಿ.


* ಸ್ನೇಹಿತರು, ಕುಟುಂಬ ಮತ್ತು ನೆರೆ ಹೊರೆಯವರಿಗೆ ಕರೆ ಮಾಡಿ ಮತ್ತು ಪ್ರತಿಭಟನೆಯ ಬಗ್ಗೆ ತಿಳಿಸಿ.


* ಉನ್ನಾವೋ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸುವಂತೆ ಪೋಸ್ಟರ್ಗಳನ್ನು ಸಿದ್ದಪಡಿಸಿ .


* ಭಾನುವಾರ (ಏಪ್ರಿಲ್ 15) ರಂದು 3  ಗಂಟೆಗೆ ಆಯ್ಕೆ ಮಾಡಿದ ಆಯ್ಕೆ ಸ್ಥಳದಲ್ಲಿ ಸೇರಿ 


* ಹಾದಿಯಲ್ಲಿ ಈ ಘಟನೆಗಳ ಕುರಿತಾಗಿ ವಿವರಿಸಿ.


*  ಪ್ರತಿಭಟನೆಯ ಫೋಟೋಗಳನ್ನು  ತೆಗೆಯಿರಿ ಮತ್ತು ಹ್ಯಾಶ್ಟ್ಯಾಗ್ #MyStreetMyProtest ನೊಂದಿಗೆ ಅಪ್ಲೋಡ್ ಮಾಡಿ