ಲೋಕಸಭಾ ಸಾರ್ವತ್ರಿಕ ಚುನಾವಣೆ ಬಿಸಿಲಿನ ಬೇಗೆಯ ಮಧ್ಯೆ ಮತ್ತಷ್ಟು ಕಾವನ್ನ ಏರಿಸಿದೆ. ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಂದ ಮತಬೇಟೆ ಕೂಡ ಬಿರುಸಾಗಿ ಸಾಗಿದೆ. ಈ ಹಂತದಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆಯು ಮತದಾರನ ಮಹತ್ತರವಾದ ವಿವೇಚನೆ. ಸರಳ, ಸಂಯಮ, ಸಮರ್ಥ ಮತ್ತು ಸ್ಪಂದನೆವುಳ್ಳ ಸಂಸದರನ್ನ ಆರಿಸಿ ಕಳಿಸಬೇಕಾಗಿರೋದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಕುರಿತು ಜೀ ಕನ್ನಡ ನ್ಯೂಸ್‌ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ನಿಮ್ಮ ನಿಮ್ಮ ಸಂಸತ್‌ ಕ್ಷೇತ್ರಗಳಲ್ಲಿ ಕಾಡುತ್ತಿರುವ ಸಮಸ್ಯೆ, ಜನರ ನೋವುಗಳು, ಹಿಂದೆ ಗೆದ್ದಿರೋ ಪಕ್ಷ ಮತ್ತು ನಾಯಕರ ಸಾಧನೆ, ಜಾತಿವಾರು ಶಕ್ತಿ ಹೇಗೆ ಪ್ರಭಾವ ಬೀರಲಿದೆ..? ನಿರ್ಣಾಯಕ ಸಾಮಾಜಿಕ ಅಂಶ ಹಾಗೂ ಕ್ಷೇತ್ರದ ಭೌಗೋಳಿಕ ಹಿನ್ನೆಲೆ ಹೇಗಿದೆ..? ಅಭ್ಯರ್ಥಿಗಳ ಗೆಲುವಿಗೆ ಮತದಾರನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ನಿಮ್ಮ ಮುಂದಿಡುವ ಕಾರ್ಯಕ್ರಮವೇ ಕ್ಷೇತ್ರ ಪರಿಚಯ


COMMERCIAL BREAK
SCROLL TO CONTINUE READING

ಬಿಜೆಪಿ-ಜೆಡಿಎಸ್​ ಮೈತ್ರಿಯಿಂದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಖತ್‌ ಕಾವೇರಿದೆ. ಇವಾಗ ಕಮಲ ಹಾಗೂ ಕೈ ಗಳ ನಡುವೆ ನೇರ ಪೈಪೋಟಿ ಶುರುವಾಗಿದೆ. ಸಿಎಂ ತವರು ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ಒಡೆಯರ್ ಹಾಗೂ‌ ಸಿಎಂ ಸಿದ್ದರಾಮಯ್ಯ ಆಪ್ತ ಎಂ.ಲಕ್ಷ್ಮಣ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಸಿದ್ದರಾಮಯ್ಯ ವರ್ಚಸ್ಸು ಹಾಗೂ ಮಹಾರಾಜರ ಸರಳತೆ ಹಾಗೂ ಮೋದಿ ನಾಮಬಲದ ನಡುವೆ‌ ಈ ಚುನಾವಣೆ ನಡೆಯಲಿದೆ.


ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಹಾರಾಜ ಯದುವೀರ್ ಒಡೆಯರ್ ಬಿಜೆಪಿ ಹಾಗೂ ಜಾತ್ಯತೀತ ಜನತಾದಳ ಮೈತ್ರಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್​ನಿಂದ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್​ಗೆ ಟಿಕೆಟ್ ಸಿಕ್ಕಿದೆ. ಲಕ್ಷ್ಮಣ್​ ಒಕ್ಕಲಿಗ ಸಮುದಾಯದ ವ್ಯಕ್ತಿ. ಬಿಜೆಪಿಯಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್​ ಕೈ ತಪ್ಪಿದ್ದರಿಂದ ಈ ಬಾರಿ ಲಕ್ಷ್ಮಣ್​​ ಅವರನ್ನು ಒಕ್ಕಲಿಗ ಜನಾಂಗ ಕೈ ಹಿಡಿಯಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್​ನದ್ದಾಗಿದೆ. ಮೋದಿ ನಾಮಬಲ ಹಾಗೂ ರಾಜರ ಜನಪ್ರಿಯತೆಯಿಂದ ಮತಗಳು ಸಿಗುವ ಲೆಕ್ಕಾಚಾರದಿಂದ ಬಿಜೆಪಿ ಈ ಬಾರಿ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದೆ.


ಮೈಸೂರು-ಕೊಡಗು ಕ್ಷೇತ್ರ ಪರಿಚಯ:


2023ರ ಅಸೆಂಬ್ಲಿ ಚುನಾವಣೆ  
1. ಕೃಷ್ಣರಾಜ : ಶ್ರೀವತ್ಸ-ಬಿಜೆಪಿ
 (ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 7213 ಮತಗಳ ಗೆಲುವು)
2. ಹುಣಸೂರು : ಹರೀಶ್‌ ಗೌಡ-ಜೆಡಿಎಸ್
 (ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 2412 ಮತಗಳ ಗೆಲುವು)
3. ಚಾಮುಂಡೇಶ್ವರಿ : ಜಿ.ಟಿ.ದೇವೇಗೌಡ-ಜೆಡಿಎಸ್
 (ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 25,500 ಮತಗಳ ಗೆಲುವು)
4. ಪಿರಿಯಾಪಟ್ಟಣ : ಕೆ.ವೆಂಕಟೇಶ್‌-ಕಾಂಗ್ರೆಸ್
 (ಜೆಡಿಎಸ್ ಅಭ್ಯರ್ಥಿ ವಿರುದ್ಧ 19,675 ಮತಗಳ ಗೆಲುವು)
5. ಚಾಮರಾಜನಗರ : ಪುಟ್ಟರಂಗಶೆಟ್ಟಿ-ಕಾಂಗ್ರೆಸ್
  (ಬಿಜೆಪಿ ಅಭ್ಯರ್ಥಿ ವಿರುದ್ದ 7535 ಮತಗಳ ಗೆಲುವು)
6. ನರಸಿಂಹರಾಜ : ತನ್ವೀರ್‌ ಸೇಠ್‌-ಕಾಂಗ್ರೆಸ್
  (ಬಿಜೆಪಿ ಅಭ್ಯರ್ಥಿ ವಿರುದ್ದ 31,120 ಮತಗಳ ಗೆಲುವು)
7. ಮಡಿಕೇರಿ    : ಡಾ.ಮಂಥರ್‌ಗೌಡ-ಕಾಂಗ್ರೆಸ್
 (ಬಿಜೆಪಿ ಅಭ್ಯರ್ಥಿ ವಿರುದ್ದ 4402 ಮತಗಳ ಗೆಲುವು)
8. ವಿರಾಜಪೇಟೆ : ಎ.ಎಸ್‌.ಪೊನ್ನಣ್ಣ-ಕಾಂಗ್ರೆಸ್
 (ಬಿಜೆಪಿ ಅಭ್ಯರ್ಥಿ ವಿರುದ್ದ 4291 ಮತಗಳ ಗೆಲುವು)


ಕ್ಷೇತ್ರವಾರು ಮತದಾರರ ಸಂಖ್ಯೆ


ಕ್ಷೇತ್ರ                  ಪುರುಷರು         ಮಹಿಳೆಯರು  
ಮಡಿಕೇರಿ           115159           121394
ವಿರಾಜಪೇಟೆ         113319            116266
ಪಿರಿಯಾಪಟ್ಟಣ       98447                98764
ಹುಣಸೂರು          122284                124208
ಚಾಮುಂಡೇಶ್ವರಿ      171090                174196
ಕೃಷ್ಣರಾಜ          124419                131168
ಚಾಮರಾಜ          124897                129996
ನರಸಿಂಹರಾಜ      147505            159043
ಒಟ್ಟು             1017120                1055035



ಮತದಾರರ ಮಾಹಿತಿ 


ಪುರುಷರು : 10,17,120
ಮಹಿಳೆಯರು    : 10,55,035
ಲಿಂಗತ್ವ ಅಲ್ಪ ಸಂಖ್ಯಾತರು : 182
ಒಟ್ಟು ಮತದಾರರು : 20,72,337


ಕಳೆದ ಎರಡು ಬಾರಿ ಕ್ಷೇತ್ರವನ್ನು ಗೆದ್ದುಕೊಂಡಿದ್ದ ಬಿಜೆಪಿ, ಈಗ ಹ್ಯಾಟ್ರಿಕ್ ಸಾಧನೆಯ ಕಡೆಗೆ ನೇರವಾದ ದೃಷ್ಟಿಯನ್ನ ಹಾಯಿಸಿದೆ. ಬಿಜೆಪಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪಿದೆ. ಆದರೆ, ಬಿಜೆಪಿ ಜೊತೆ ನೇರವಾಗಿ ಜಾತ್ಯತೀತ ಜನತಾದಳ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಒಕ್ಕಲಿಗ ಮತದಾರರು ಯಾರ ಪರ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್​ ಅವರ ಸರಳತೆ, ರಾಜಮನೆತನವು ಮೈಸೂರಿಗೆ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಪಕ್ಷಕ್ಕೆ ನೆರವಾಗುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಲಕ್ಷ್ಮಣ್ ಒಕ್ಕಲಿಗ ಸಮುದಾಯದವರಾಗಿದ್ದು, ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಜನತೆಗೆ ಪರಿಚಿತರಾಗಿದ್ದಾರೆ. ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಎಲ್ಲ ಸಮುದಾಯದ ಜನರು ಬೆಂಬಲ ನೀಡುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕಿದೆ.


ನಿರ್ಣಾಯಕ ಸಾಮಾಜಿಕ ಅಂಶಗಳು
ಮತದಾರನಿಗೆ ಕನೆಕ್ಟಿಂಗ್ ವಿಷಯ
* ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ನಗರಿ ಪಟ್ಟಗಳಿಸುವುದು
* ವಿವಿಧೆಡೆಗೆ ವಿಮಾನ ಸೇವೆ ಮತ್ತಷ್ಟು ಬಲ ತುಂಬುವುದು
* ಕೈಗಾರಿಕಾ ಸೆಕ್ಟರ್‌ಗಳ ಸ್ಥಾಪನೆಗೆ ಆದ್ಯತೆ ನೀಡುವುದು
* ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ
* ದಶಪಥ ರಸ್ತೆಯ ಸರ್ವಿಸ್ ರಸ್ತೆ ಪೂರ್ಣ ಮಾಡುವುದು
* ಶಿಕ್ಷಣಕ್ಕೆ ಮತ್ತಷ್ಟು ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ
* ಜಿಲ್ಲೆಗೆ ಬಂಡವಾಳ ಹೂಡಿಕೆದಾರರನ್ನ ಕರೆತರಬೇಕು


ಮತದಾರರ ಮಂಥನ
* ಒಕ್ಕಲಿಗ ಮತಗಳ ಪ್ರಾಬಲ್ಯ ಮತ್ತು ನಿರ್ಣಾಯಕ
* ಯಾರನ್ನು ಬೆಂಬಲಿಸುತ್ತಾರೋ ಅವರ ಗೆಲುವು ಸುಲಭ
* ಬ್ರಾಹ್ಮಣ ಹಾಗೂ ಲಿಂಗಾಯತ ಮತ ಬಹುತೇಕ ಬಿಜೆಪಿಗೆ
* ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲು ಸಂಭವ
* ಮಹಾರಾಜರ ಸ್ಪರ್ಧೆ ಎಂಬ ಕಾರಣಕ್ಕೆ ವಿಭಜನೆ 
* ಶೇ.10 ರಿಂದ 15ರಷ್ಟು ಮತಗಳು ವಿಭಜನೆ ಸಾಧ್ಯತೆ
* ದಲಿತ ಮತಗಳು ಕೂಡ ಕಾಂಗ್ರೆಸ್‌-ಬಿಜೆಪಿ ಮಧ್ಯೆ ಹಂಚಿಕೆ
* ಕುರುಬ ಮತಗಳು ಕಾಂಗ್ರೆಸ್ ಪರವಾಗಿದೆ
* ಕಾಂಗ್ರೆಸ್ ಅಭ್ಯರ್ಥಿಗೆ ಒಕ್ಕಲಿಗ ಮತಗಳು ಆಧಾರ
* ಎಲ್ಲಾ ಸಮುದಾಯಕ್ಕೂ ಯದುವೀರ್ ಒಡೆಯರ್ ಪ್ರಿಯ


ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿ ಮಹಾರಾಜ ಯದುವೀರ್ ಒಡೆಯರ್ ಪದ ಹೆಚ್ಚು ಮತದಾರರ ಒಲವು ವ್ಯಕ್ತವಾಗಿದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಯಾವುದೇ ಬ್ಲಾಕ್ ಮಾರ್ಕ್ ಇಲ್ಲ, ಎಲ್ಲರೊಟ್ಟಿಗೆ ಬೆರೆತ್ತಿದ್ದಾರೆ. ಸರಳ ಮತ್ತು ಸರ್ವ ಜನಾಂಗದ ಶಾಂತಿಪ್ರಿಯರು ಅಂತ ಹೇಳಲಾಗ್ತಿದೆ. ಈ ಕಡೆ ಲಕ್ಷ್ಮಣ್ ಕೂಡ ಹೊಸಬರಾಗಿದ್ದು ಈಗಾಗಲೇ ರಾಜಕೀಯದ ಏಳುಬೀಳು ಕಂಡಿದ್ದಾರೆ.. ಅಸಲಿಗೆ ಮೈಸೂರು-ಕೊಡಗು ಕ್ಷೇತ್ರ ಈ ಹಿಂದಿನಿಂದಲೂ ಕಾಂಗ್ರೆಸ್‌ ಭದ್ರಕೋಟೆ. ಯಾವ ಪಕ್ಷದಿಂದ ಯಾರೆಲ್ಲರೂ ಗೆದ್ದಿದ್ದರು ಅಂತ ನೋಡೋಣ..


ಈ ಹಿಂದಿನ ಸಂಸದರು
- 1952 :ಗುರುಪಾದಸ್ವಾಮಿ-ಕಿಸಾನ್ ಮಜದ್ದೂರ್ ಪಾರ್ಟಿ
- 1957, 1962:ಎಂ.ಶಂಕರಯ್ಯ- ಕಾಂಗ್ರೆಸ್
- 1967, 1971 :ತುಳಸಿ ದಾಸಪ್ಪ -ಕಾಂಗ್ರೆಸ್‌
- 1980 : ರಾಜಶೇಖರ್‌ಮೂರ್ತಿ - ಕಾಂಗ್ರೆಸ್
- 1984, 89, 96 :ಶ್ರೀಕಂಠದತ್ತ ನರಸಿಂಹರಾಜ ಒಡೆಯರ್-ಕಾಂಗ್ರೆಸ್‌
- 1998, 2004 : C.H.ವಿಜಯಶಂಕರ್ - ಬಿಜೆಪಿ
- 2009 : H.ವಿಶ್ವನಾಥ್‌, ಕಾಂಗ್ರೆಸ್
- 2014, 2019 : ಪ್ರತಾಪ್ ಸಿಂಹ-ಬಿಜೆಪಿ


ಜಾತಿವಾರು ಲೆಕ್ಕಾಚಾರ 
ಒಕ್ಕಲಿಗ : 5.5 ಲಕ್ಷ
ದಲಿತರು : 3.20 ಲಕ್ಷ
ಮುಸ್ಲಿಂ : 2 ಲಕ್ಷ
ಕುರುಬರು : 2.30 ಲಕ್ಷ
ಲಿಂಗಾಯತ : 1.90 ಲಕ್ಷ
ಬ್ರಾಹ್ಮಣ    : 1.40 ಲಕ್ಷ
ಕೊಡವ :    1.10 ಲಕ್ಷ,
ನಾಯಕ : 2 ಲಕ್ಷ
ಇತರ : 1.5 ಲಕ್ಷ


ಮೈಸೂರು -ಕೊಡಗು ಲೋಕಸಭಾ ಕ್ಷೇತ್ರವು 8 ಕ್ಷೇತ್ರಗಳನ್ನ ಒಳಗೊಂಡಿದ್ದು ಐವರು ಕಾಂಗ್ರೆಸ್‌ ಐವರು ಶಾಸಕರನ್ನ ಹೊಂದಿದೆ. ಅದೇ ರೀತಿ ಇಬ್ಬರು ಜೆಡಿಎಸ್‌ ಶಾಸಕರಿದ್ರೆ ಓರ್ವ ಬಿಜೆಪಿ ಶಾಸಕರು 2023ರ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿದ್ದಾರೆ.. ಇದೆಲ್ಲದರ ನಡುವೆ ಈಗಾಗಲೇ ನಾಲ್ಕು ಬಾರಿ ರಾಜವಂಶಸ್ಥ ದಿವಗಂತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಇಲ್ಲಿ ಗೆದ್ದಿರೋದನ್ನ ಸ್ಮರಿಸಲೆಬೇಕು. ಆ ಟೈಮ್ನಲ್ಲಿ ಮಹಾರಾಜರು ಕಾಂಗ್ರೆಸ್ ಪಕ್ಷದ ಉಮೇದುವಾರರು ಆಗಿದ್ದರು. ಈ ಬಾರಿ ಮೈಸೂರು ರಾಜವಂಶಸ್ಥರೇ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ..


ಚುನಾವಣಾ ಹಿನ್ನೋಟ


2014ರ ಸೆಣಸಾಟ
* ಬಿಜೆಪಿ : ಪ್ರತಾಪ್‌ ಸಿಂಹ, ಗೆಲುವು
* ಪಡೆದ ಪತ : 5,03908   (ಶೇ.43.45)
* ಕಾಂಗ್ರೆಸ್‌ : ಎಚ್.ವಿಶ್ವನಾಥ್‌, ಸೋಲು
* ಪಡೆದ ಮತ : 4,72300  (ಶೇ.40.72)
* ಗೆಲುವಿನ ಅಂತರ : 31,608 ಮತಗಳು


ಚುನಾವಣಾ ಹಿನ್ನೋಟ 
2019ರ ಸೆಣಸಾಟ   (sub head)
* ಬಿಜೆಪಿ : ಪ್ರತಾಪ್‌ ಸಿಂಹ, ಗೆಲುವು
* ಪಡೆದ ಮತ : 688,974  (ಶೇ.52.27)
* ಕಾಂಗ್ರೆಸ್‌ : ಸಿ.ಎಚ್‌.ವಿಜಯಶಂಕರ್‌, ಸೋಲು
* ಪಡೆದ ಮತ : 5,50,327  (ಶೇ.41.75)
* ಗೆಲುವಿನ ಅಂತರ : 1,38,647 ಮತಗಳು


ಒಟ್ನಲ್ಲಿ ಮೈಸೂರು ಹಾಗೂ ಚಾಮರಾಜನಗರ ಸಂಸತ್‌ ಕ್ಷೇತ್ರ ಆಡಳಿತರೂಢ ಕಾಂಗ್ರೆಸ್‌ ಸರ್ಕಾರಕ್ಕೆ ಪ್ರತಿಷ್ಠೆಯಾಗಿದೆ. ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಪಕ್ಷವನ್ನ ಗೆಲ್ಲಿಸಿಕೊಂಡು ಬರಬೇಕಿದೆ. ಹೀಗಾಗಿ ಪ್ರಚಾರ ಸಭೆಯಲ್ಲಿ ಸಿಎಂ ಸ್ಥಾನದಲ್ಲಿ ಇರಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ ಇಲಿರಬೇಕು ಅಂದ್ರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆ‍ಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಹಳೆ ಮೈಸೂರು ಭಾಗ ಕಾಂಗ್ರೆಸ್‌ ಪಕ್ಷಕ್ಕೆ ಹೇಗೆ ಪ್ರತಿಷ್ಠೆಯೋ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೂ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.


ಅಭ್ಯರ್ಥಿಗಳ ಪ್ಲಸ್ ಅಂಡ್ ಮೈನಸ್


ಕಾಂಗ್ರೆಸ್


ಕ್ಷೇತ್ರದ ಜನರಿಗೆ ಅಷ್ಟಾಗಿ ಪರಿಚಯ ಇಲ್ಲ.
ಮೈತ್ರಿ ಅಭ್ಯರ್ಥಿ ಎದುರಾಳಿಯಾದ ಕಾರಣ ಒಕ್ಕಲಿಗ ಮತಗಳ ವಿಗಂಡಣೆ.
ಕ್ಷೇತ್ರದಲ್ಲಿ ಸ್ವಂತ ವರ್ಚಸ್ಸು ಕಡಿಮೆ
ಪಕ್ಷದ ಮುಖಂಡರ ಸ್ಪಂದನೆ ಕಡಿಮೆ.
ಆರ್ಥಿಕವಾಗಿ ಸದೃಢನಲ್ಲದ ವ್ಯಕ್ತಿ.
ಕೇವಲ ಸುದ್ದಿಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿರೋ ವ್ಯಕ್ತಿ.
ಜನ ಬೆಂಬಲ ಕಡಿಮೆ.


ಪ್ಲಸ್


ಕಾಂಗ್ರೆಸ್ ಗ್ಯಾರೆಂಟಿ ಯೋಜನೆ ಕೈ ಹಿಡಿಯೋ ಸಾಧ್ಯತೆ.
ಸಿಎಂ ಸಿದ್ದರಾಮಯ್ಯರ ಆಪ್ತ
ಈಗಾಗಲೇ ಮೂರು ಬಾರಿ ಸಿದ್ದರಾಮಯ್ಯ ಆಗಮನ.
ಒಕ್ಕಲಿಗ ಎಂಬ ಪ್ಲೇ ಕಾರ್ಡ್ ಬಳಕೆ.
ಸಾಮಾನ್ಯ ವ್ಯಕ್ತಿ, ಎಂಬ ಮಾತು ಬಳಕೆ.
ಪ್ರತಾಪ್ ಸಿಂಹ ಟೀಕಿಸಿ ಒಂದಷ್ಟು ಹೆಸರು.
ಕಾಂಗ್ರೆಸ್ ಪಕ್ಷ ಅಧಿಕಾರಿದಲ್ಲಿರುವುದು.
ಸಿಎಂ ತವರು ಕ್ಷೇತ್ರ' ಲೋಕಸಭಾ ವ್ಯಾಪ್ತಿಯಲ್ಲಿ 5 ಕ್ಷೇತ್ರ ಕೈ ಪಾಲು.


ಯದುವೀರ್ ಒಡೆಯರ್‌ಗೆ ಇದು ಮೊದಲ ಚುನಾವಣೆ. ಆದರು ಈ ಚುನಾವಣೆಯಲ್ಲಿ ಯದುವೀರ್ ಅವ್ರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. ಈ ನಡುವೆ ಮುನಿಸು ಹೊಂದಿದ್ದ ಪ್ರತಾಪ್ ಸಿಂಹ ಕೂಡ ಮುನಿಸು ಮರೆತು ಪಕ್ಷದ ಅಣತಿಯಂತೆ ಯದುವೀರ್ ಒಡೆಯರ್‌ಗೆ ಸಹಕಾರ ನೀಡ್ತಿದ್ದಾರೆ. ಇತ್ತ ಜನರು ಕೂಡ ಯದುವೀರ್.ಗೆ ಅಪಾರ ಬೆಂಬಲ ಸೂಚಿಸಿದ್ದಾರೆ.


ಯದುವೀರ್ ಮೈನಸ್


ರಾಜಕೀಯದ ಬಗ್ಗೆ ಮಾಹಿತಿ ಗೊತ್ತಿಲ್ಲ.
ಅತ್ಯಂತ ಕಡಿಮೆ ಅವಧಿಯಲ್ಲೇ ರಾಜಕೀಯಕ್ಕೆ ಎಂಟ್ರಿ.
ಪಕ್ಷದಲ್ಲೇ‌ ಕೆಲ ವ್ಯಕ್ತಿಗಳಿಂದ ಒಂದಷ್ಟು ಮುನಿಸು.


ಯದುವೀರ್ ಪ್ಲಸ್


ಮಹಾರಾಜರು ಅನ್ನೋ ಗೌರವ ಜನರಿಗೆ ಇರೋದು.
ಮಹಾರಾಜರ ಖುಣ ಇದೆ ಎನ್ನುವ ಜನರು.
ಜೆಡಿಎಸ್ ಜೊತೆ ಮೈತ್ರಿ ಒಕ್ಕಲಿಗ ಮತಗಳ ಪ್ಲಸ್
ಇಬ್ಬರು ಜೆಡಿಎಸ್ ಶಾಸಕರ ಪ್ರಾಬಲ್ಯ
ಈಗಾಗಲೇ ಕ್ಷೇತ್ರದಲ್ಲಿ 10 ವರ್ಷ ಬಿಜೆಪಿ ಸಾಧನೆ.
ಅದ್ಭುತ ಅಭಿವೃದ್ಧಿ ಕಾರ್ಯ ಮಾಡಿರೋ ಪ್ರತಾಪ್ ಸಿಂಹ.
ಮೋದಿ ನಾಮಬಲ, ಪ್ರತಾಪ್ ಸಿಂಹ ಅಭಿವೃದ್ಧಿ
ಮಹಾರಾಜರು ಅನ್ನೋ ವಿಚಾರ ಇಡೀ ಕ್ಷೇತ್ರಕ್ಕೆ ಗೊತ್ತಿರೋದು.
ಸಣ್ಣ ಪುಟ್ಟ ಕಾರ್ಯಕರ್ತರು ಕೂಡ ಮಹಾರಾಜರಿಗೆ ಬೆಂಬಲ
ಯದುವೀರ್‌ಗೆ ಆರ್ ಎಸ್ ಎಸ್ ಬಲ ಬಿಜೆಪಿ ಶಕ್ತಿ
ಎದುರಾಳಿ ಮಹಾರಾಜರ ಬಗ್ಗೆ ಮಾತಾನಾಡಲು ಸಹ ಹಿಂಜರಿಕೆ.
ಎಲ್ಲಿ ಮಾತಾಡಿದ್ರೆ ರಾಜಮನೆತನಕ್ಕೆ ಅವಮಾನ ಎಂಬ ಆತಂಕ.
ಸಿಎಂರಿಂದಲು ಎದುರಾಳಿ‌ ಬಗ್ಗೆ ಮಾತಾಡದಂತೆ ಸೂಚನೆ.
ಸಲಿಸಾಗಿ ಮತಬೇಟೆ ಮಾಡುತ್ತಿರೋ ಯದುವೀರ್ ಒಡೆಯರ್.


ಒಟ್ಟಾರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ರಂಗೇರಿದೆ. ಒಂದು ಕಡೆ ಸಾಮಾನ್ಯ ವ್ಯಕ್ತಿ ಮತ್ತೊಂದೆ‌ ಮೈಸೂರು ಕಟ್ಟಿದ ರಾಜವಂಶಸ್ಥರ ಕುಡಿ. ಈ ನಡುವೆ ಗೆಲುವು ಯಾರಿಗೆ ಎಂಬ ಲೆಕ್ಕಾಚಾರ ಇನ್ನು ನಡೆಯುತ್ತಿದ್ದು ಯಾರ ಕೈ ಮೇಲಾಗುತ್ತೆ ಎಂದು ಕಾದು ನೋಡಬೇಕಿದೆ.


ಸುರೇಶ್ ಎನ್. ಜೀ ಕನ್ನಡ ನ್ಯೂಸ್ ಮೈಸೂರು 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.