ಬೆಂಗಳೂರು :ತಮ್ಮ ಆರೋಗ್ಯ ರಕ್ಷಣೆಗೆ, ಭವಿಷ್ಯಕ್ಕೆ ಹೇಗೆ ವಿಮೆ ಬಹು ಮುಖ್ಯವೋ,ಹಾಗೇ ರೈತರ ಬೆಳೆಗೂ ವಿಮೆ ಮುಖ್ಯ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಬೆಂಗಳೂರಿನ ಜಯನಗರದಲ್ಲಿ ಸ್ಕೈಲೈಟ್ ಮ್ಯಾನೇಜ್ಮೆಂಟ್ ಸರ್ವಿಸಸ್ ನ ನೂತನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಮಾತನಾಡಿದ ಸಚಿವರು,ರಾಜ್ಯದಲ್ಲಿ ಶೇ.98% ರಷ್ಟು ಬೆಳೆವಿಮೆಯನ್ನು ಸರ್ಕಾರವೇ ಭರಿಸಲಿದ್ದು, ಉಳಿದ ಕೇವಲ ಶೇ 2% ವಿಮೆ ಭರಿಸುವುದಕ್ಕೂ ರೈತರು ಯೋಚಿಸುತ್ತಾರೆ.ಬಹಳ ಕಡಿಮೆ ಪ್ರಮಾಣದಲ್ಲಿ ರೈತರು  ಬೆಳೆ ವಿಮೆ ನೊಂದಾಯಿಸುತ್ತಾರೆ.ಎಲ್ಲಾ ರೈತರು ಬೆಳೆ ವಿಮೆ ನೊಂದಾಯಿಸುವಂತಾಗಬೇಕು.ತಮ್ಮ ಆರೋಗ್ಯ ರಕ್ಷಣೆಗೆ ಹೇಗೆ ವಿಮೆ ಮಾಡಿಸುತ್ತಾರೋ,ಹಾಗೇ ಬೆಳೆಗೂ ವಿಮೆ ಮಾಡಿಸಬೇಕು ಎಂದು ಚಲುವರಾಯಸ್ವಾಮಿ ಕರೆ ನೀಡಿದರು.


ಇದನ್ನೂ ಓದಿ : ಯಡಿಯೂರಪ್ಪ ಬಂಧನ ವಾರಂಟ್ ವಿಚಾರದಲ್ಲಿ ರಾಜಕೀಯ ಇಲ್ಲ- ಸಚಿವ ಎಂ.ಬಿ. ಪಾಟೀಲ


ಕಳೆದ ಸಾಲಿನಲ್ಲಿ ಬೆಳೆ ವಿಮೆ ನೊಂದಾಯಿಸಿದ 19 ಲಕ್ಷ ರೈತರಿಗೆ ಸುಮಾರು 1,700 ಕೋಟಿ ಯಷ್ಟು ಬೆಳೆ ವಿಮೆ ಪ್ರಸ್ತಾವನೆಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದು ತಿಳಿಸಿದರು‌‌‌‌.


ಸ್ಕೈಲೈಟ್ ಮ್ಯಾನೇಜ್ಮೆಂಟ್ ಸರ್ವಿಸಸ್ ಸಂಸ್ಥೆ ಕೂಡಾ ರೈತರ ವಿಮಾ ವಲಯಗಳಲ್ಲಿ ಗುರುತಿಸಿಕೊಂಡು, ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಪ್ರಾರಂಭವಾಗುತ್ತಿರುವುದು ಶ್ಲಾಘನೀಯ ಎಂದು ಸಚಿವರು ತಿಳಿಸಿದರು.


ಇದನ್ನೂ ಓದಿ : ಚುನಾವಣೆ ಸೋಲು ಅರಗಿಸಿಕೊಳ್ಳಲಾಗದೆ ಬಿಎಸ್ ವೈ ವಿರುದ್ದ ರಾಜಕೀಯ ವೈಷಮ್ಯ :ಕಾಂಗ್ರೆಸ್ ವಿರುದ್ಧ ಪ್ರಲ್ಹಾದ ಜೋಶಿ ಆಕ್ರೋಶ


ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಶಾಸಕ, ಹಾಗೂ ಚಾಮುಂಡೇಶ್ವರಿ ವಿದ್ಯುತ್ ಕಂಪನಿ ನಿಗಮ ಮಂಡಳಿ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಸಮಾಜ ಸೇವಕಿ ರೇವತಿ ಕಾಮತ್, ಹಾಗೂ ಸ್ಕೈಲೈಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕ ಕನಕ ಸರ್ಕಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.