ಧ್ವಜ ತೆಗೆದಿರುವುದು ಪೊಲೀಸ್ ಕೃತ್ಯವಲ್ಲ, ಕಾಂಗ್ರೆಸ್ನ ಪಿತೂರಿ: ಎನ್.ಮಹೇಶ್ ಆರೋಪ
Hanuma Dhwaja Row: ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಎಷ್ಟು ಜನರನ್ನು ಬಂಧಿಸುತ್ತೀರಿ ಬಂಧಿಸಿ ನೋಡೋಣ ಅಂಥಾ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆ ನೀತಿ ಸಂಹಿತೆ ಜಾರಿಯಾಗುವ ತನಕ ನಿಲ್ಲಲ್ಲವೆಂದು ಎನ್.ಮಹೇಶ್ ಎಚ್ಚರಿಕೆ ನೀಡಿದರು.
ಚಾಮರಾಜನಗರ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆಗೆದಿರುವುದು ಪೊಲೀಸ್ ಕೃತ್ಯವಲ್ಲ, ಇದು ಕಾಂಗ್ರೆಸ್ ಪಕ್ಷದ ಪಿತೂರಿಯಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಆರೋಪಿಸಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕೆರೆಗೋಡಿನಲ್ಲಿ ನಡೆದಿರುವುದು ಅಮಾನವೀಯ ಘಟನೆಯಾಗಿದೆ. ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆದೇ ಧ್ವಜ ಹಾಕಲಾಗಿತ್ತು. ಆದರೆ ಅದನ್ನು ರಾತ್ರೋರಾತ್ರಿ ಇಳಿಸುವ ಅಗತ್ಯ ಏನಿತ್ತು? ಧ್ವಜವನ್ನು ತೆಗೆದದ್ದು ತಪ್ಪು, ಆ ತಪ್ಪನ್ನು ಒಪ್ಪಿಕೊಳ್ಳಿ ಅಂಥಾ ಕೇಳಿದರೇ ಅರೆಸ್ಟ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಎಷ್ಟು ಜನರನ್ನು ಬಂಧಿಸುತ್ತೀರಿ ಬಂಧಿಸಿ ನೋಡೋಣ ಅಂಥಾ ಇಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಪ್ರತಿಭಟನೆ ನೀತಿ ಸಂಹಿತೆ ಜಾರಿಯಾಗುವ ತನಕ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮಳೆ, ಬೆಳೆ ಹಾಗೂ ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ
ಕಾಂಗ್ರೆಸ್ ಸರ್ಕಾರದ ಕೇಡುಗಾಲ ಇದು, ಕೊನೆಯ ಕಾಲ. ನಮ್ಮ ದೇವರನ್ನು ಅವಮಾನ ಮಾಡಿ, ನಮ್ಮನ್ನು ತಡೆಯಬಹುದು ಎಂದು ಸಿಎಂ ಸಿದ್ದರಾಮಯ್ಯ ಅಂದುಕೊಂಡಿದ್ದರೇ ಅದು ಸಾಧ್ಯವಿಲ್ಲ. ನಮ್ಮ ಹೋರಾಟ ನೀತಿ ಸಂಹಿತೆ ಜಾರಿಯಾಗುವ ತನಕ ಇರಲಿದೆ ಎಂದು ಕಿಡಿಕಾರಿದರು.
14 ಬಜೆಟ್ ಮಂಡಿಸಿದ್ದಾರೆ ಎನ್ನುವವರು, ರಾಜಕೀಯಕ್ಕೆ ಬಂದು 40 ವರ್ಷ ಆಯ್ತು ಎನ್ನುವವರಿಗೆ ಏಕವಚನ- ಬಹುವಚನ ಗೊತ್ತಾಗಬೇಕಲ್ಲವೇ..? ಅವರದು ಹೊಲಸು ಬಾಯಿ ಎಂದು ಸಿದ್ದರಾಮಯ್ಯ ವಿರುದ್ಧವೇ ಎನ್.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಜನರ ಬಗ್ಗೆ ಗೌರವವಿಲ್ಲ!
ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ದೌರ್ಜನ್ಯದ ಮೂಲಕ ಏನು ಬೇಕಾದರೂ ಮಾಡುತ್ತೇವೆಂದು ತೋರಿಸುತ್ತಿರುವ ಸರ್ಕಾರ ಇದಾಗಿದೆ. ಸಿಎಂ ಸಿದ್ದರಾಮಯ್ಯರಿಗೆ ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲ, ಹೀಗಾಗಿಯೇ ಬಿಜೆಪಿಯಿಂದ ಇಂದು ದೊಡ್ಡ ಪ್ರತಿಭಟನೆ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಬಿಗ್ ಬಾಸ್ ಸ್ವರ್ಧಿ ಡ್ರೋಣ್ ಪ್ರತಾಪ್ ವಿರುದ್ಧ ದೂರು
ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಯಾರಾದರೂ ಏಕವಚನ ಬಳಕೆ ಮಾಡಿದ್ದರೇ ಅವರ ವಿರುದ್ಧ ಕೇಸ್ ಹಾಕಿ ಬಂಧಿಸಲಾಗುತ್ತಿತ್ತು. ಈಗ ಸಿಎಂ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಏಕವಚನದಲ್ಲಿ ಮಾತನಾಡಿರುವುದು ಸರಿನಾ.? ಶೋಷಿತರ ಸಮಾವೇಶದಲ್ಲಿ ಶೋಷನೆ ಮಾಡಿದ್ದಾರೆ, ಸಿದ್ದರಾಮಯ್ಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.