Inspirational Story : ದೇಶಸೇವೆಗಾಗಿ IAS ಆಗ್ಬೇಕು- ಪಿಎಂ ಮೋದಿ ಭೇಟಿಯ ಕನಸು ಹೊತ್ತ ಈ ವಿಶೇಷ ಬಾಲಕಿ!
ಹೌದು ವಿಶ್ವದಲ್ಲೆಡೆ ಹೆಸರುವಾಸಿ ನಾಯಕರಾಗಿರುವ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗೋದೆ ಇವಳ ಕನಸು.. ಸಧ್ಯ ನಾಗರಭಾವಿಯ ಆರ್ಚಿಡ್- ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ.
ಬೆಂಗಳೂರು : ಸಾಧಿಸುವ ಛಲ, ಅದಕ್ಕಾಗಿ ಸತತ ಯತ್ನ.. ದೈಹಿಕವಾಗಿ ನ್ಯೂನ್ಯತೆ ಇದ್ರೂ, ಅಛಲವಾದ ಗುರಿಯಿಟ್ಟುಕೊಂಡಿದ್ದಾಳೆ 8 ನೇ ತರಗತಿಯ ಈ ಬಾಲಕಿ ಪಿಎಸ್.ಜೋತ್ಸ್ನಾ...
ಹೌದು ವಿಶ್ವದಲ್ಲೆಡೆ ಹೆಸರುವಾಸಿ ನಾಯಕರಾಗಿರುವ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗೋದೆ ಇವಳ ಕನಸು.. ಸಧ್ಯ ನಾಗರಭಾವಿಯ ಆರ್ಚಿಡ್- ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಓದುತ್ತಿದ್ದಾಳೆ.
ಲಾಕ್ಡ್- ನೀ ಸಿಂಡ್ರೋಮ್ ಎನ್ನುವ ಕಾಲಿನ ಸಮಸ್ಯೆಯಿಂದಾಗಿ, ಸರಿಯಾಗಿ ನಡೆಯಲಾಗದೆ ಕಷ್ಟಪಡುತ್ತಾಳೆ. ಹುಟ್ಟುತ್ತಲೇ ಬ್ರೈನ್ ಡ್ಯಾಮೇಜ್ ನಿಂದಾಗಿ, ಆಮ್ಲಜನಕದ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದರಿಂದ ಎರಡೂ ಕಾಲಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಹುಟ್ಟುತ್ತಲೇ ಉಂಟಾದ ಆರೋಗ್ಯ ಸಮಸ್ಯೆಯಿದ್ದರೂ, ವಿದ್ಯೆಗೆ ಇದ್ಯಾವುದೂ ಅಡ್ಡಿಯಾಗದಂತೆ ಉತ್ತಮವಾಗಿ ಓದುತ್ತಿದ್ದಾಳೆ. ತಂದೆ-ತಾಯಿಯರ ವಿಶೇಷವಾದ ಬೆಂಬಲ ಹಾಗೇ ಪ್ರೋತ್ಸಾಹದಿಂದ ತನ್ನ ಕೆಲಸಗಳನ್ನು ತಾನೇ ಮಾಡುವಷ್ಟು ಜೋತ್ಸ್ನಾ ಸದೃಢಳಾಗಿದ್ದಾಳೆ.
[[{"fid":"239262","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ : DKS v/s Ramya: ‘ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ...!’
ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ
ಜೋತ್ಸ್ನಾಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಬಹುದೊಡ್ಡ ಕನಸಿದೆ. ನಾನು ಅತಿದೊಡ್ಡ ಅಭಿಮಾನಿ ಎನ್ನುವ ಜೋತ್ಸ್ನಾ, ನಾನಷ್ಟೇ ಅಲ್ಲ ನನ್ನ ಇಡೀ ಕುಟುಂಬ ಅವರ ಅಭಿಮಾನಿ ಎನ್ನುತ್ತಾಳೆ. ಅವಕಾಶ ಸಿಕ್ಕರೆ ಭೇಟಿಯಾಗ್ಬೇಕು ಎಂಬ ಕನಸು ಹೊತ್ತಿದ್ದಾಳೆ.
ಐಎಎಸ್ ಆಗುವ ಕನಸು
ದೇಶಸೇವೆಗಾಗಿ ಉತ್ತಮವಾಗಿ ಓದಿ ಐಎಎಸ್ ಹುದ್ದೆಯೇರ್ಬೇಕು ಎಂಬ ಕನಸು ಹೊತ್ತಿದ್ದಾಳೆ. ಇದಕ್ಕಾಗಿ ಓದುವ ತಯಾರಿ, ವಿಷಯಗಳ ಮಾಹಿತಿ ಸಂಗ್ರಹ ಈಗದಿಂದಲೇ ಸಿದ್ಧತೆ ನಡೆಸಿದ್ದಾಳೆ. ಜೋತ್ಸ್ನಾ ತನ್ನ ವಿದ್ಯಾಭ್ಯಾಸದೊಂದಿಗೆ ಆರೋಗ್ಯ ಸಮಸ್ಯೆ ಸರಿಪಡಿಸಲೂ ಪ್ರತಿನಿತ್ಯ ಪ್ರಯತ್ನ ಮುಂದುವರಿಸಿದ್ದಾಳೆ.
[[{"fid":"239263","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಲಾಕ್ಡ್-ನೀ ಸಮಸ್ಯೆಗೆ ಎಲ್ಲಾ ವೈದ್ಯರು ಫಿಸಿಯೋಥೆರಪಿಯನ್ನೇ ಸೂಚಿಸುತ್ತಾರೆ. ಹೀಗಾಗಿ ಕಳೆದ ಹನ್ನೆರಡು ವರ್ಷದಿಂದಲೂ ಥೆರಪಿಯನ್ನು ಪಡೆಯುತ್ತಿದ್ದಾಳೆ. ಆದ್ರೆ ಕೊರೊನಾ ಸಮಯದಲ್ಲಿ ಫಿಸಿಯೋಥೆರಪಿಗೂ ಅಡ್ಡಿಯಾಗಿತ್ತು. ಇದೀಗ ಮತ್ತೆ ಪ್ರತಿದಿನವೂ ಫಿಸಿಯೋಥೆರಪಿ ಮಾಡಿಸಿಕೊಂಡು, ಶಾಲೆಗೂ ಹೋಗುತ್ತಿದ್ದಾಳೆ.
ಆದ್ರೆ ತನ್ನ ಕನಸು, ಸಾಧನೆಗೆ ಆರೋಗ್ಯ ಸಮಸ್ಯೆ ಅಡ್ಡಿಯಾಗದಂತೆ, ಮೆಟ್ಟಿನಿಂದ ಛಲಬಿಡದೆ ತನ್ನ ಪ್ರಯತ್ನ ಮುಂದುವರಿಸಿದ್ದಾಳೆ. ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪೂರ್ತಿಯಾಗಿದ್ದಾಳೆ.
ಇದನ್ನೂ ಓದಿ : ಮಳೆ ಲೆಕ್ಕಿಸದೆ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಂದ ಅನಿರ್ಧಿಷ್ಠಾವಧಿ ಧರಣಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.