ಬೆಂಗಳೂರು: 'ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕು, ಜೊತೆಗೆ ಆ ಕೆಲಸ ವಾಸ್ತವಕ್ಕೆ ಹತ್ತಿರವಾಗಿ ಇರಬೇಕು' ಹಾಗಾದರೆ ಮಾತ್ರ ಜನ ಒಪ್ಪಿಕೊಳ್ಳುವುದು. ಈಗ ಬೆಂಗಳೂರು (Bengaluru) ‌ಮಹಾನಗರಕ್ಕೆ ಕುಡಿಯುವ ನೀರುಣಿಸಲು (Drinking Water) ಮೇಕೆದಾಟು ಬಳಿ ಅಣೆಕಟ್ಟು (Mekedatu Project) ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ (Congress) ನಡೆಸುತ್ತಿರುವ ಪಾದಯಾತ್ರೆಯಲ್ಲಿ (Padayatra) ಇಂಥದೊಂದು ವಿಶಿಷ್ಟ ಬೆಳವಣಿಗೆ ಕಂಡುಬರುತ್ತಿದೆ. ಅಂಥ ವಿಶಿಷ್ಟ ವ್ಯಕ್ತಿಯೇ ಸೈಯದ್ ಅಹಮದ್ ಹುಸೇನ್ (Sayad Ahamad Hussen).


COMMERCIAL BREAK
SCROLL TO CONTINUE READING

ನೀವು ಪಾದಯಾತ್ರೆಯ ದೃಶ್ಯಗಳನ್ನು, ಚಿತ್ರಗಳನ್ನು ನೋಡಿರುತ್ತೀರಿ.‌ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ (Siddaramaiah), ಡಿ.ಕೆ. ಶಿವಕುಮಾರ್ (DK Shivakumar), ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಮತ್ತಿತರರನ್ನು ಕಂಡಿದ್ದೀರಿ. ಅಲ್ಲದೆ ಎರಡನೇ ಹಂತದ ದಂಡಿ‌ ದಂಡಿ ನಾಯಕರು, ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರನ್ನು ಕಂಡಿರುತ್ತೀರಿ. ಹಾಗೆಯೇ 'ಒಂದು ಬಿದರಿನ ಎರಡು ಕಡ್ಡಿಗೆ ಎರಡು ಬಿಂದಿಗೆಗಳನ್ನು ಕಟ್ಟಿಕೊಂಡು, ಅವುಗಳಲ್ಲಿ ನೀರನ್ನು ತುಂಬಿಕೊಂಡು' (ಇದನ್ನು ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರಲ್ಲಿ ಕರೆಯಲಾಗುತ್ತದೆ) ಅರ್ಥಾತ್ ಹೊತ್ತುಕೊಂಡು ಬರುತ್ತಿರುವ ಸೈಯದ್ ಅಹಮದ್ ಹುಸೇನ್ ಅವರನ್ನು ಮಿಸ್ ಮಾಡಿರುವ ಚಾನ್ಸೇ ಇಲ್ಲ. 



ಏಕೆಂದರೆ 'ಮೇಕೆದಾಟು ಪಾದಯಾತ್ರೆ' (
Mekedatu Padayatre)ಯಲ್ಲಿ ಸೈಯದ್ ಅಹಮದ್ ಹುಸೇನ್ ಈಗ ಹೈಲೈಟ್. ಇವರೊಂದಿಗೆ ಕೆಲಹೊತ್ತು ಡಿ.ಕೆ. ಶಿವಕುಮಾರ್ ಕೂಡ ಹೆಜ್ಜೆ ಹಾಕಿದ್ದಾರೆ. ಸೈಯದ್ ಅಹಮದ್ ಹುಸೇನ್ ಗ್ರಾಮಗಳಿಗೆ ಬಂದಾಗ ಅಲ್ಲಿನ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದ್ದಾರೆ. ನಾಯಕರು ಮತ್ತು ಕಾರ್ಯಕರ್ತರು ಸೈಯದ್ ಅಹಮದ್ ಹುಸೇನ್ ಬಳಿ ಬಂದು 'ನಮ್ಮ ನೀರು ನಮ್ಮ ಹಕ್ಕು' ಎಂದು ಜೈಕಾರ ಮೊಳಗಿಸಿದ್ದಾರೆ.


ಇದನ್ನೂ ಓದಿ- Mekedatu Issue: ಕೈ ನಾಯಕರ ವಿರುದ್ಧ FIR ದಾಖಲು; ಆರೋಪ ಸಾಬೀತಾದರೆ ದಂಡದ ಜತೆ 3 ರಿಂದ 6 ತಿಂಗಳ ಸೆರೆವಾಸ


ಹುಸೇನ್ ನೀರು ಹೊರುತ್ತಿರುವುದೇಕೆ?
ಸೈಯದ್ ಅಹಮದ್ ಹುಸೇನ್ (Syed Ahmed Hussein) ಅವರು ಮೇಕೆದಾಟು ಬಳಿ‌ ಹರಿಯುತ್ತಿರುವ ಕಾವೇರಿ ನದಿಯಿಂದ ಬಿಂದಿಗೆಗಳಿಗೆ ನೀರು ತುಂಬಿಕೊಂಡು ಬೆಂಗಳೂರಿನವರೆಗೂ ಹೊತ್ತು ತರುತ್ತಿದ್ದಾರೆ. ಇವರ ಉದ್ದೇಶ 'ಹಿಂದೆ ಇದೇ ರೀತಿ ನೀರನ್ನು ಹೊತ್ತು ತರುವ ಪರಿಸ್ಥಿತಿ ಇತ್ತು. ನಂತರ ಸುಧಾರಣೆ ಆಯಿತು. ಈಗ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಇದೇ ರೀತಿಯಲ್ಲಿ ನೀರು ಹೊರಬೇಕಾದ ಪರಿಸ್ಥಿತಿ ಬಂದೊದಗಬಹುದು' ಎಂದು ಅರಿವು ಮೂಡಿಸುವುದು. 'ನಮ್ಮ ನೀರು ನಮ್ಮ ಹಕ್ಕು' ಮಾತ್ರವಲ್ಲ, ಅದು 'ನಮ್ಮ ಅರಿವು' ಕೂಡ ಆಗಬೇಕು ಎಂಬುದು ಸೈಯದ್ ಅಹಮದ್ ಹುಸೇನ್ ಆಶಯ. ಹೀಗೆ 'ನಮ್ಮ ನೀರು ನಮ್ಮ ಹಕ್ಕು' ಎಂಬ ಘೋಷಣೆಗಳ ನಡುವೆ ನೀರಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸೈಯದ್ ಅಹಮದ್ ಹುಸೇನ್ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


[[{"fid":"226902","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":"ನಮ್ಮ ನೀರು, ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಅರಿವು ಕೂಡ ಎನ್ನುತ್ತಿರುವ ಸೈಯದ್ ಅಹಮದ್ ಹುಸೇನ್"},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":"ನಮ್ಮ ನೀರು, ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಅರಿವು ಕೂಡ ಎನ್ನುತ್ತಿರುವ ಸೈಯದ್ ಅಹಮದ್ ಹುಸೇನ್"}},"link_text":false,"attributes":{"title":"ನಮ್ಮ ನೀರು, ನಮ್ಮ ಹಕ್ಕು ಮಾತ್ರವಲ್ಲ, ನಮ್ಮ ಅರಿವು ಕೂಡ ಎನ್ನುತ್ತಿರುವ ಸೈಯದ್ ಅಹಮದ್ ಹುಸೇನ್","class":"media-element file-default","data-delta":"1"}}]]


ಸೈಯದ್ ಅಹಮದ್ ಹುಸೇನ್ ಯಾರು?
ಇಷ್ಟೆಲ್ಲಾ ಹೇಳಿದ ಮೇಲೆ ಯಾರಿದು ಸೈಯದ್ ಅಹಮದ್ ಹುಸೇನ್? ಅವರ ಹಿನ್ನೆಲೆ ಏನು? ಎಂಬ ಕುತೂಹಲ ಹುಟ್ಟುವುದು ಸಹಜ. ಕೃಷಿ ಕುಟುಂಬದಿಂದ ಬಂದ ಸೈಯದ್ ಅಹಮದ್ ಹುಸೇನ್ ಉನ್ನತ ವ್ಯಾಸಂಗದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ''ಇನ್ಸೈಟ್ ಎಜುಕೇಶನ್ ಟ್ರಸ್ಟ್' ಮೂಲಕ‌ ಸಹಸ್ರಾರು ಮಂದಿಗೆ ಶಿಕ್ಷಣ ನೀಡುತ್ತಿದ್ದಾರೆ. ಜೊತೆಗೆ ಸಾರ್ವಜನಿಕ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಸೈಯದ್ ಹುಸೇನ್ ಅವರನ್ನು ಮೊದಲು ಗುರುತಿಸಿದ್ದು ಐಪಿಎಸ್ ಸಾಂಗ್ಲಿಯಾನ. ಅವರೊಂದಿಗೆ ಕಾಂಗ್ರೆಸ್ ಸೇರಿದ ಸೈಯದ್ ಅಹಮದ್ ಹುಸೇನ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ KSTDC ಅಧ್ಯಕ್ಷರಾಗಿ ಕೂಡ‌ ಕೆಲಸ ಮಾಡಿದ್ದಾರೆ. ಮುಂದೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ- "ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ"- ಗೃಹ ಸಚಿವ ಆರಗ ಜ್ಞಾನೇಂದ್ರ


ಮೇಕೆದಾಟು ಏಕೆ ಮಹತ್ವದ್ದು?
ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ನೀರಿನ ಸಮಸ್ಯೆ ಬಹಳ ದೊಡ್ಡ ಮಟ್ಟದಲ್ಲಿದೆ. ಅದರಲ್ಲೂ ಬೆಂಗಳೂರಿನ ಹೊರವಲಯದಲ್ಲಂತೂ ನೀರಿನ ಸಮಸ್ಯೆ ತಾರಕಕ್ಕೇ ಏರಿದೆ. ಇದೇ ಕಾರಣಕ್ಕೆ ಹಿಂದೆ ರಾಜ್ಯ ಸರ್ಕಾರ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ‌ ಮೇಕೆದಾಟು ಯೋಜನೆ ಜಾರಿ‌ ಮಾಡಲು ಪ್ರಯತ್ನಿಸುತ್ತಿಲ್ಲ ಎಂದು ಕಾಂಗ್ರೆಸ್ 'ಮೇಕೆದಾಟು ಬಳಿ ಬೇಗನೇ ಅಣೆಕಟ್ಟು ನಿರ್ಮಿಸುವಂತೆ ಒತ್ತಾಯಿಸಲು 'ನಮ್ಮ‌ ನೀರು ನಮ್ಮ ನಡಿಗೆ' ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.