Nandini logo on Scotland Jersey : ಟಿ-20 ವಿಶ್ವಕಪ್ ನಲ್ಲಿ ಸ್ಕಾಟ್ಲ್ಯಾಂಡ್-ಐರ್ಲೆಂಡ್ ತಂಡಕ್ಕೆ ನಂದಿನಿ ಪ್ರಾಯೋಜಕತ್ವ ನೀಡಿದೆ. ಇದೀಗ ಸ್ಕಾಟ್ಲೆಂಡ್  ತಂಡದ ಜರ್ಸಿ ಬಿಡುಗಡೆಯಾಗಿದ್ದು, ಸ್ಕಾಟ್ಲೆಂಡ್ ಆಟಗಾರರ ತೋಳಿನಲ್ಲಿ ಕನ್ನಡ ರಾರಾಜಿಸುತ್ತಿದೆ. ಸ್ಕಾಟ್ಲೆಂಡ್ ಜರ್ಸಿ ತೋಳಿನಲ್ಲಿ ನಂದಿನಿ ಬ್ರಾಂಡ್ ನ ಲೋಗೋ ಎದ್ದು  ಕಾಣುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಕೂಡಾ ನಡೆಯುತ್ತಿದೆ. 


COMMERCIAL BREAK
SCROLL TO CONTINUE READING

ಸಪ್ತ ಸಾಗರದಾಚೆಗೂ ಕನ್ನಡದ ಕಂಪು :
T 20 ವಿಶ್ವಕಪ್ ಗೆ ಸ್ಕಾಟ್ಲೆಂಡ್ ತಂಡದ‌ ಜರ್ಸಿ ಬಿಡುಗಡೆಯಾಗಿದ್ದು ,ಟೀ ಶರ್ಟ್ ನಲ್ಲಿ ಕನ್ನಡ ಭಾಷೆಯಲ್ಲಿ ನಂದಿನಿ ಎಂದು ಬರೆಯಲಾಗಿದೆ. ಅಲ್ಲಿ ನಂದಿನಿ ಬ್ರಾಂಡ್ ಲೋಗೋ ಕೂಡಾ ಕಾಣಬಹುದು. ಈ ಮೂಲಕ ಸಪ್ತ ಸಾಗರದಾಚೆಗೂ ಕನ್ನಡದ ಕಂಪು ಚಾಚಿದೆ. ಮೊದಲ ಬಾರಿಗೆ ಅಂತರಾಷ್ಟ್ರೀಯ ತಂಡದಲ್ಲಿ ಕನ್ನಡ  ರಾರಾಜಿಸುತ್ತಿರುವುದರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಇದನ್ನೂ ಓದಿ : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ :ಮುಂದಿನ ನಾಲ್ಕು ದಿನಗಳ ವರೆಗೆ ಜೋರಾಗಿರಲಿದೆ ವರುಣಾರ್ಭಟ


ವಿರೋಧವೂ ಇದೆ : 
ಇನ್ನು ಕರ್ನಾಟಕ ತಂಡ ಬಿಟ್ಟು ಅಂತರಾಷ್ಟ್ರೀಯ ತಂಡಕ್ಕೆ ಕನ್ನಡ ಯಾಕೆ ಎನ್ನುವ ಪ್ರಶ್ನೆ ಕೂಡಾ ಎದ್ದಿದೆ.ಅಂತರಾಷ್ಟ್ರೀಯ ಪ್ರಾಯೋಜಕತ್ವ ನೀಡಿದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ಕೂಡಾ ವ್ಯಕ್ತವಾಗಿದೆ. 


KMF ಹೇಳೋದೇನು?  :
ಕೆಂಎಫ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಪರಿಚಯಕ್ಕೆ ಮುಂದಾಗಿದೆ. ನಂದಿನಿ ಉತ್ಪನ್ನಗಳನ್ನ ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಲು ನಿರ್ಧಾರ ಮಾಡಿದೆ. ಕ್ರಿಕೆಟ್ ಜಾಗತಿಕವಾಗಿ ಹೆಚ್ಚು ಜನಪ್ರಿಯ ಕ್ರೀಡೆ. ಇದನ್ನು 
ಕೋಟ್ಯಾಂತರ ಮಂದಿ ವೀಕ್ಷಿಸುತ್ತಾರೆ. ನಂದಿನಿ ಬ್ರಾಂಡ್ ಹೆಚ್ಚಿನ ಜನರನ್ನು ತಲುಪುವಂತಾಗಲು ಅಂತರಾಷ್ಟ್ರೀಯ ಪ್ರಾಯೋಜಕತ್ವ ನೀಡಲಾಗಿದೆ. 


ಈ ಬಾರಿಯ ಟಿ-20 ವಿಶ್ವಕಪ್ ನಲ್ಲಿ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳ ಪ್ರಾಯೋಜಕತ್ವ ಪಡೆಯಲು ಕೂಡಾ ಪ್ರಯತ್ನ ಮಾಡಲಾಗಿತ್ತು. ಆದರೆ, ಟೆಂಡರ್ ನಲ್ಲಿ ಸ್ಕ್ವಾಟ್ಯಂಡ್ ಮತ್ತು ಐರ್ಲೆಂಡ್‌ ತಂಡಗಳ ಪ್ರಾಯೋಜಕತ್ವ ಲಭ್ಯವಾಗಿದೆ.ಮುಂದಿನ ದಿನದಲ್ಲಿ ಐಪಿಎಲ್ ಮತ್ತು ಏಕದಿನ ವಿಶ್ವಕಪ್ ಕ್ರಿಕೆಟ್, ಒಲಂಪಿಕ್ಸ್ ನಲ್ಲಿ ಪ್ರಾಯೋಜಕತ್ವಕ್ಕೆ ಪ್ಲ್ಯಾನ್ ಮಾಡಲಾಗಿದೆ. 


ಇದನ್ನೂ ಓದಿ :  20 ದಿನ ಕಳೆದ್ರೂ ಭಾರತಕ್ಕೆ ಬರಲಿಲ್ಲ ಪ್ರಜ್ವಲ್ : ಪದೇಪದೇ ಫ್ಲೈಟ್ ಟಿಕೆಟ್ ಕ್ಯಾನ್ಸಲ್


ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ : 
ಈ ನಡುವೆ ನಂದಿನಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ನಾನು ನಂದಿನಿ,ಸ್ಕಾಟ್ಲೆಂಡ್ ಬಂದೀನಿ ಎನ್ನುವುದು ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಸ್ಕಾಟ್ಲೆಂಡ್ ಟೀ ಶರ್ಟ್ ನಲ್ಲಿ ನಂದಿನಿ ಎಂದು ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ ನಾನು ನಂದಿನಿ,ಸ್ಕಾಟ್ಲೆಂಡ್ ಬಂದೀನಿ  ಟ್ರೆಂಡ್ ಆಗುತ್ತಿದೆ. ನೂರಾರು ಕನ್ನಡಿಗರಿಂದ ಸ್ಕಾಟ್ಲ್ಯಾಂಡ್ ಟೀಂ ಟೀ ಶರ್ಟ್ ಶೇರ್ ಕೂಡಾ ಆಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.