ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ (Congress Padayatre) ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಲೆಗೆ ಭೇಟಿ ನೀಡಿದ್ದರು. 


COMMERCIAL BREAK
SCROLL TO CONTINUE READING

ಶಾಲಾ ಮಕ್ಕಳ ಜತೆ ಕುಳಿತು ಡಿ.ಕೆ.ಶಿವಕುಮಾರ್  ಫೋಟೋ ತೆಗೆಸಿಕೊಂಡಿದ್ದರು. ಈ ವೇಳೆ ಡಿಕೆಶಿ ಕೋವಿಡ್ ನಿಯಮ ಪಾಲಿಸದೇ ಮಕ್ಕಳ ಜತೆ ಬೆರೆತಿದ್ದಾರೆ ಎಂದು ಆರೋಪಿಸಲಾಗಿದೆ. ಮಾಸ್ಕ್​ ಧರಿಸಿದೇ ಶಾಲಾಮಕ್ಕಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. 


ಕೊರೊನಾ ಭೀತಿಯ ಮಧ್ಯೆ ಕೊವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷರ ವಿರುದ್ಧ  (National Child Rights Protection Commission) ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸುಮೋಟೋ ಕೇಸ್ (Sumoto case) ದಾಖಲಿಸಿಕೊಂಡಿದೆ. 


[[{"fid":"226763","view_mode":"default","fields":{"format":"default","field_file_image_alt_text[und][0][value]":"Letter from the President of the NCPCR ","field_file_image_title_text[und][0][value]":"NCPCR ಅಧ್ಯಕ್ಷರು ಪತ್ರ "},"type":"media","field_deltas":{"1":{"format":"default","field_file_image_alt_text[und][0][value]":"Letter from the President of the NCPCR ","field_file_image_title_text[und][0][value]":"NCPCR ಅಧ್ಯಕ್ಷರು ಪತ್ರ "}},"link_text":false,"attributes":{"alt":"Letter from the President of the NCPCR ","title":"NCPCR ಅಧ್ಯಕ್ಷರು ಪತ್ರ ","class":"media-element file-default","data-delta":"1"}}]]


ಅಲ್ಲದೆ, ಡಿಜಿ- ಐಜಿಪಿ‌ ಪ್ರವೀಣ್ ಸೂದ್​ಗೆ NCPCR ಅಧ್ಯಕ್ಷರು ಪತ್ರ ಬರೆಡಿದ್ದಾರೆ. ಪಾದಯಾತ್ರೆ ವೇಳೆ ವಿಶ್ವೋದಯ ಶಾಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಭೇಟಿ ನೀಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ. 


ನೀರಿಗಾಗಿ ನಡಿಗೆ' (Walk for Water) ಮೇಕೆದಾಟು ಯೋಜನೆ ಶೀಘ್ರ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ. ಕಾಂಗ್ರೆಸ್ ಪಕ್ಷ ಜನವರಿ 9 ರಿಂದ 19 ರ ವರೆಗೆ ಈ ಪಾದಯಾತ್ರೆ ಹಮ್ಮಿಕೊಂಡಿದೆ.


ಪ್ರತಿದಿನ 15 ಕಿಲೋಮೀಟರ್ ವರೆಗೆ ನಡಿಗೆ ಇರಲಿದೆ. ಮಧ್ಯೆ 7 ಕಿಲೋಮೀಟರ್ ಗೆ ವಿಶ್ರಾಂತಿಗೆಂದು ಪಾದಯಾತ್ರೆಗೆ ಬ್ರೇಕ್ ಇರಲಿದೆ. ರಾತ್ರಿ 15 ಕೀಲೋಮೀಟರ್ ಮುಗಿಯುತ್ತಲೇ ಅವತ್ತಿನ ದಿನದ ಪಾದಯಾತ್ರೆ (Congress Mekedatu Padayatre) ಕೊನೆಗೊಳ್ಳಲಿದೆ.


ಇದನ್ನೂ ಓದಿ: Mekedatu Issue: ಕೈ ನಾಯಕರ ವಿರುದ್ಧ FIR ದಾಖಲು; ಆರೋಪ ಸಾಬೀತಾದರೆ ದಂಡದ ಜತೆ 3 ರಿಂದ 6 ತಿಂಗಳ ಸೆರೆವಾಸ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.