`ಬಿಜೆಪಿ ಹೈಕಮಾಂಡ್‌ಗೆ ಧಮ್, ತಾಕತ್ ಇದ್ರೆ ಬಿಎಸ್ ವೈ ರಾಜೀನಾಮೆ ಪಡೆಯಬೇಕು`
ದೇವರಬೀಸನಹಳ್ಳಿ ಅಕ್ರಮ ಡಿ-ನೋಟಿಫಿಕೇಷನ್ ತನಿಖೆ ಮುಂದುವರಿಯಬೇಕಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಪದತ್ಯಾಗ ಮಾಡಲೇಬೇಕು
ಬೆಂಗಳೂರು: ದೇವರಬೀಸನಹಳ್ಳಿ ಅಕ್ರಮ ಡಿ-ನೋಟಿಫಿಕೇಷನ್ ತನಿಖೆ ಮುಂದುವರಿಯಬೇಕಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಪದತ್ಯಾಗ ಮಾಡಲೇಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ(Ranip Singh Surjewala), ‘ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಹೈಕೋರ್ಟ್ ಚಾಟಿ ಬೀಸಿದ್ದರೂ ಯಡಿಯೂರಪ್ಪ ಅವರು ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆ ಇದೆ,’ ಎಂದು ಪ್ರಶ್ನಿಸಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ : ಕರ್ಫ್ಯೂ ಅವಧಿಯಲ್ಲಿ ದಿಢೀರ್ ಬದಲಾವಣೆ
‘ರಾಜ್ಯದ ತನಿಖಾ ಸಂಸ್ಥೆಗಳು ಮುಖ್ಯಮಂತ್ರಿಗಳ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಇದರಿಂದ ತನಿಖೆ ನಿಷ್ಪಕ್ಷ ಎನಿಸಿಕೊಳ್ಳುವುದಿಲ್ಲ. ಭೂಹಗರಣದಲ್ಲಿ ನ್ಯಾಯಯುತ ತನಿಖೆಯಾಗಿ ತಾರ್ಕಿಕ ಅಂತ್ಯಕಾಣಬೇಕಾದರೆ ವಿಳಂಬ ಮಾಡದೇ ಮುಖ್ಯಮಂತ್ರಿ ಪದತ್ಯಾಗ ಮಾಡಬೇಕು,’ ಎಂದು ಒತ್ತಾಯಿಸಿದ್ದಾರೆ.
ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದೀರಾ : ಸಿಟಿ ರವಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ‘ಯಡಿಯೂರಪ್ಪ ತಕ್ಷಣವೇ ರಾಜೀನಾಮೆ ಸಲ್ಲಿಸದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು,’ಎಂದು ಎಚ್ಚರಿಕೆ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆಯಲ್ಲಿ 990 ಹುದ್ದೆಗಳ ನೇಮಕಾತಿಗೆ ಡಿಸಿಎಂ ಸೂಚನೆ!
‘ಬಿಜೆಪಿ ಹೈಕಮಾಂಡ್‌ಗೆ ಧಮ್, ತಾಕತ್ ಇದ್ದರೆ ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಬೇಕು. ಬದ್ಧತೆ ಇದ್ದಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಪಡೆಯುತ್ತಿದ್ದರು,' ಎಂದರು.
'ನಾನು ಬಂಡೆನೂ ಅಲ್ಲ, ಜಲ್ಲಿನೂ ಅಲ್ಲ: ಕುಮಾರಸ್ವಾಮಿ ಈಗಲೂ ನನ್ನ ಸ್ನೇಹಿತರು'
‘ಸಂಸತ್‌ನಲ್ಲಿ ಇದ್ದಾಗ ಮೋದಿ ಮಾತುಗಳನ್ನು ಕೇಳಿದ್ದೇನೆ. ಅದು ಕೇವಲ ಭಾಷಣವಷ್ಟೇ. ಅವರಿಗೆ ಬದ್ಧತೆ, ನೈತಿಕತೆ ಯಾವುದೂ ಇಲ್ಲ. ನಾನೂ ತಿನ್ನಲ್ಲ, ತಿನ್ನೋದಕ್ಕೂ ಬಿಡೋದಿಲ್ಲವೆಂದು ಹೇಳುತ್ತಾರೆ. ಈಗ ತನಿಖೆಗೆ ಆದೇಶವಾಗಿದ್ದು, ನಮ್ಮದು ಭ್ರಷ್ಟಾಚಾರದ ವಿರುದ್ಧವೆಂದು ಬಿಜೆಪಿಯವರು ಟಾಂ ಟಾಂ ಮಾಡುವ ಬದಲು ಯಡಿಯೂರಪ್ಪ ಅವರ ರಾಜೀನಾಮೆ ಪಡೆಯಬೇಕು,’ ಎಂದು ಆಗ್ರಹಿಸಿದರು.
'ಮೂರು ಬೈ ಎಲೆಕ್ಷನ್' ಗೆಲ್ಲಲು ಅಭ್ಯರ್ಥಿಗಳಿಗಾಗಿ ಶೋಧ ನಡೆಸಿದ ಕಾಂಗ್ರೆಸ್!