ನಕ್ಸಲರ ಶರಣಾಗತಿ ಪ್ಯಾಕೇಜ್ ಗೆ ಚಾಲನೆ : ಶರಣಾಗುವ ನಕ್ಸಲರಿಗಾಗಿ ವಿಶೇಷ ನ್ಯಾಯಾಲಯಕ್ಕೆ ಮನವಿ
ಯಾವುದೋ ಸೈದ್ದಾಂತಿಕ ಸಿದ್ದಾಂತಕ್ಕೆ ಆಕರ್ಷಿತರಾಗಿ ಹಾರ್ಡ್ ಕೋರ್ ನಕ್ಸಲರಾದವರನ್ನು ಪುನಃ ಸಮಾಜದ ಮುಖ್ಯವಾಹಿನಿಗೆ ತರುವುದು ಸಮಿತಿಯ ಉದ್ದೇಶವಾಗಿದೆ.
ಶಿವಮೊಗ್ಗ : ರಾಜ್ಯದಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತುಗಳು ಮೂಡುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರ ಪುನಃ ನಕ್ಸಲರ ಶರಣಾಗತಿ ಪ್ಯಾಕೇಜ್ ಜಾರಿಗೆ ಮುಂದಾಗಿದೆ. ಅದ್ಕಕಾಗಿ ನಕ್ಸಲರು ಶರಣಾಗತಿ ಮತ್ತು ಪುನರ್ವಸತಿಯ ರಾಜ್ಯ ಮಟ್ಟದ ಸಮಿತಿಯನ್ನು ಸರ್ಕಾರ ಜಾರಿಗೆ ತಂದಿದೆ.ಯಾವುದೋ ಸೈದ್ದಾಂತಿಕ ಸಿದ್ದಾಂತಕ್ಕೆ ಆಕರ್ಷಿತರಾಗಿ ಹಾರ್ಡ್ ಕೋರ್ ನಕ್ಸಲರಾದವರನ್ನು ಪುನಃ ಸಮಾಜದ ಮುಖ್ಯವಾಹಿನಿಗೆ ತರುವುದು ಸಮಿತಿಯ ಉದ್ದೇಶವಾಗಿದೆ. ರಾಜ್ಯದಲ್ಲಿ ಈವರೆಗೆ 14 ಮಂದಿ ನಕ್ಸಲ್ ಪ್ಯಾಕೇಜ್ ನಲ್ಲಿ ಶರಣಾಗಿದ್ದು,ಈಗ ಪುನಃ ಪ್ಯಾಕೇಜ್ ಗೆ ಜೀವ ನೀಡಿದೆ.
ನಕ್ಸಲರ ಶರಣಾಗತಿ ಪ್ಯಾಕೇಜ್ ಗೆ ಚಾಲನೆ ನೀಡಿದ ಸರ್ಕಾರ :
ದಶಕದಿಂದ ನಕ್ಸಲರ ಸದ್ದಿಲ್ಲದೆ ಮೌನವಾಗಿದ್ದ ಮಲೆನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷವಾಗುವ ಮೂಲಕ ಪೊಲೀಸರ ನಿದ್ದೆಗೆಡಿಸಿದ್ದಾರೆ.ಕಳೆದ ಒಂದೂವರೆ ತಿಂಗಳಿನಿಂದ ಸುಬ್ರಮಣ್ಯ ಪೆರು ಗ್ರಾಮದ ಭಾಗಗಳಲ್ಲಿ ನಕ್ಸಲರು ಓಡಾಡುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ವಿಕ್ರಂ ಗೌಡ ಅಂಡ್ ಟೀಂ ಮಲೆನಾಡಿನಲ್ಲಿ ಮತ್ತೆ ಆಕ್ಟಿವ್ ಆಗಿದೆ ಎನ್ನಲಾಗಿದೆ.ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಕೊಲ್ಲೂರು ಸಮೀಪದ ಮುದೂರು ಬೆಳ್ಕಲ್ ಜಡ್ಕಲ್ ಉದಯ ನಗರ ಗ್ರಾಮದ ಮನೆಗಳಿಗೆ ನಕ್ಸಲರು ಭೇಟಿ ನೀಡಿದ್ರು ಎಂಬ ಸುದ್ದಿ ಹೆಚ್ಚು ಸದ್ದು ಮಾಡಿತು. ರಾಜ್ಯದಲ್ಲಿ ನಕ್ಸಲರು ಮತ್ತೆ ಕ್ರೀಯಾಶೀಲರಾಗಿರುವುದನ್ನು ಅರಿತ ಸರ್ಕಾರ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿಯ ರಾಜ್ಯ ಮಟ್ಟದ ಸಮಿತಿಯನ್ನು ಪುನರ್ ನೇಮಕ ಮಾಡಿ ಚಾಲನೆ ನೀಡಿದೆ. ಶರಣಾಗತಿಯಾಗ ಬಯಸುವ ನಕ್ಸಲರು ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದಾಗಿದೆ. ಸಮಿತಿಯ ಸದಸ್ಯರು ಸರ್ಕಾರದ ಗಮನಕ್ಕೆ ತಂದು ಸುಲಭ ಮಾರ್ಗದಲ್ಲಿ ಶರಣಾಗುವಂತೆ ಮಾಡಲಾಗುತ್ತದೆ. ವಿನಾ ಕಾರಣ ಕಾಡಿನಲ್ಲಿ ನಡೆಯುವ ಎನ್ಕೌಂಟರ್ ಸಾವು ನೋವುಗಳನ್ನು ತಪ್ಪಿಸುವುದು ಸಮಿತಿಯ ಉದ್ದೇಶವಾಗಿದೆ.ನಕ್ಸಲರು ಮತ್ತು ಎ.ಎನ್.ಎಫಅ ಪೊಲೀಸರು ಪರಸ್ಪರ ಎದುರಾದರೂ ನಕ್ಸಲರು ಶರಣಾಗಲು ಬಯಸಿದರೆ. ಅಂತವರನ್ನು ಯಾವುದೇ ಕಾರಣಕ್ಕೂ ಎನ್ಕೌಂಟರ್ ಮಾಡದಂತೆ ಸಮಿತಿ ಸರ್ಕಾರವನ್ನು ಒಪ್ಪಿಸಲಿದೆ.
ಇದನ್ನೂ ಓದಿ : ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗುತ್ತಿದೆ ನಾನು ನಂದಿನಿ, ಸ್ಕಾಟ್ಲೆಂಡ್ ಬಂದೀನಿ !
ನಕ್ಸಲರು ಶರಣಾದಾಗ ನ್ಯಾಯಾಲಯದ ಕಲಾಪಗಳು ವಿಳಂಬವಾಗಬಹುದು ಎಂಬ ಆತಂಕ ನಕ್ಸಲರಿಗಿದೆ.ಈಗಾಗಲೇ ಶರಣಾಗತಿಯಾದ 14 ನಕ್ಸಲರ ಕೇಸುಗಳು ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿದೆ.ಆದರೆ, ಈಗ ಸಮತಿ ಶರಣಾಗುವ ನಕ್ಸಲರಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ಲದೆ ಶರಣಾದ ಕ್ಸಲರ ಪರ ವಾದ ಮಂಡಿಸಲು ಸಹ ವಕೀಲರನ್ನು ನೇಮಿಸಲು ಕೂಡ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಸರ್ಕಾರಕ್ಕೆ ಸಕರಾತ್ಮಕವಾಗಿ ಸ್ಪಂಸಿದೆ ಎಂದು ಸಮಿತಿಯ ಶ್ರೀಪಾಲ್ ಹೇಳಿದ್ದಾರೆ.
ಈಗ ಭೂಗತರಾಗಿ ಹೋರಾಟದಲ್ಲಿ ತೊಡಗಿಸಿಕೊಂಡ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮಾತ್ರ ಸಮಿತಿಯ ಉದ್ದೇಶವಾಗಿದೆ. ಒಟ್ಟಿನಲ್ಲಿ ಸರ್ಕಾರ ನಕ್ಸಲ್ ಪ್ಯಾಕೇಜ್ ಗೆ ಮರು ಜೀವ ನೀಡಿದ್ದು,ಇದಕ್ಕೆ ಶಂಕಿತ ನಕ್ಸಲರಿಂದ ಯಾವ ರೀತಿಯ ಪ್ರತಿಕ್ರೀಯೆಗಳು ವ್ಯಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ :ಮುಂದಿನ ನಾಲ್ಕು ದಿನಗಳ ವರೆಗೆ ಜೋರಾಗಿರಲಿದೆ ವರುಣಾರ್ಭಟ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=O-hDphMYFMg
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.