ಚಪ್ಪಲಿ ಸ್ಟಾಂಡ್ ಬೀಳಿಸಿ ಕಿರಿಕಿರಿ.. ರಂಗೋಲಿ ಅಳಿಸಿ ವಿಕೃತಿ : ಪೊಲೀಸ್ ಠಾಣೆ ಮೆಟ್ಟಿಲೇರಿದ ನೆರೆಹೊರೆಯವರ ಕಿರಿಕ್
ಗಾಲಾಟೆ ದೊಡ್ಡ ಮಟ್ಟಕ್ಕೆ ತಲುಪಿ ದೂರು ಪ್ರತಿ ದೂರು ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ. ಎರಡು ವರ್ಷದ ಹಿಂದೆ ನೇಹಾ ಗೆ ಮನೆ ಮುಂದೆ ಚಪ್ಪಲಿ ಸ್ಟಾಂಡ್ ಇಡದಂತೆ ಮಂಜುನಾಥ್ ದಂಪತಿ ಹೇಳಿದ್ರು. ಆದ್ರೆ ಜಾಗ ಇರೋದೆ ಅಷ್ಟು ಇನ್ನೆಲ್ಲಿ ಇಡೋದು ಅಂತಾ ಕಿರಿಕ್ ಆಗಿದೆ.
ಬೆಂಗಳೂರು : ನೆರೆಹೊರೆಯವರು ಸರಿ ಇಲ್ಲ ಅಂದ್ರೆ ಎಷ್ಟೆಲ್ಲ ಕಷ್ಟ ಗೊತ್ತಾ? ಮಾನಸಿಕ ಕಿರಿ ಕಿರಿ ಮಾತ್ರ ತಪ್ಪಿದ್ದಲ್ಲ. ಅದೇ ರೀತಿ ಇಲ್ಲೋರ್ವ ಮಹಿಳೆ ಹೋಗ್ತಾ ಬರ್ತಾ ಸುಮ್ಮನಿರೋದಿಲ್ಲ. ಪಕ್ಕದ ಮನೆಯವ್ರಿಗೆ ಕಾಟ ಕೊಡೋದನ್ನೆ ಕಾಯಕ ಮಾಡಿಕೊಂಡಿದ್ದಾಳೆ. ನೊಂದ ದಂಪತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ ಕೂತಿದ್ದಾರೆ.
ನೋಡಿ ಮನೆಯಿಂದ ಹೋಗ್ತಾ ಚಪ್ಪಲಿ ಸ್ಟಾಂಡ್ ಅನ್ನ ಅದ್ಹೇಗೆ ಬೀಳಿಸಿ ಹೋಗ್ತಾಳೆ ಅಂತಾ. ಹೋಗ್ತಾ ಬರ್ತಾ ರಂಗೋಲಿಯನ್ನ ಕಾಲಿಂದ ಅಳಿಸಿ ಹಾಕ್ತಾಳೆ. ಇದೇ ಮಹಿಳೆಯ ಕಾಟಕ್ಕೆ ಎದುರು ಮನೆಯವ್ರು ರೋಸಿಹೋಗಿದ್ದಾರೆ. ಪೊಲೀಸ್ ಠಾಣೆಗೆ ಹೋದ್ರು ನ್ಯಾಯ ಸಿಕ್ತಿಲ್ಲ ಅಂತಾ ರಾತ್ರಿ ಇಡೀ ಅಹೋರಾತ್ರಿ ಧರಣಿ ಕೂತಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 2 ರಂದು ಮಂಡ್ಯದಲ್ಲಿ ಸಭೆ ಕರೆದ ಸಂಸದೆ ಸುಮಲತಾ
ಹೌದು.. ಇದು ಕೋಡಿಚಿಕ್ಕನಹಳ್ಳಿಯಲ್ಲಿರುವ ಚೈತನ್ಯ ಪ್ಯಾರಡೈಸ್ ಅಪಾರ್ಟ್ ಮೆಂಟ್. ಇದೇ ಅಪಾರ್ಟ್ ಮೆಂಟ್ ನ ಮೂರನೇ ಫ್ಲೋರ್ ನಲ್ಲಿ ಮಂಜುನಾಥ್ ಮತ್ತು ಸರಿತಾ ದಂಪತಿ ಹಾಗೂ ನೇಹಾ ಪ್ರಣಬ್ ಜ್ಯೋತಿ ಸಿಂಗ್ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದಾರೆ..ಇಬ್ಬರು ಅನುಸರಿಸಿಕೊಂಡು ಹೋಗಿದ್ದಿದ್ರೆ ಏನು ಸಮಸ್ಯೆ ಆಗ್ತಿರ್ಲಿಲ್ಲ. ಮನೆ ಮುಂದೆ ಇರೊ ಸಣ್ಣ ಜಾಗದಲ್ಲಿ ಚಪ್ಪಲಿ ಸ್ಟಾಂಡ್ ಇರಿಸುವ ವಿಚಾರಕ್ಕೆ ಕಿರಿಕ್ ಆಗಿದೆ.
ಅದೆ ಗಾಲಾಟೆ ದೊಡ್ಡ ಮಟ್ಟಕ್ಕೆ ತಲುಪಿ ದೂರು ಪ್ರತಿ ದೂರು ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ. ಎರಡು ವರ್ಷದ ಹಿಂದೆ ನೇಹಾ ಗೆ ಮನೆ ಮುಂದೆ ಚಪ್ಪಲಿ ಸ್ಟಾಂಡ್ ಇಡದಂತೆ ಮಂಜುನಾಥ್ ದಂಪತಿ ಹೇಳಿದ್ರು. ಆದ್ರೆ ಜಾಗ ಇರೋದೆ ಅಷ್ಟು ಇನ್ನೆಲ್ಲಿ ಇಡೋದು ಅಂತಾ ಕಿರಿಕ್ ಆಗಿದೆ. ಅದೇ ವಿಚಾರ ಮುಂದುವರೆದು ಮಂಜುನಾಥ್ ಮನೆಯವರಿಗೆ ನೇಹಾ ದಿನನಿತ್ಯ ಕಿರುಕುಳ ನೀಡ್ತಿದ್ದಾರಂತೆ..
ಇದನ್ನೂ ಓದಿ:ಕೆಪಿಎಸ್ಸಿಯಿಂದ ಮತ್ತೊಂದು ಕರ್ಮಕಾಂಡ ಬಯಲು
ನೇಹಾ ಮನೆಯಿಂದ ಹೋಗ್ತಾ ಬರ್ತಾ. ಮಂಜುನಾಥ್ ಅವ್ರ ಚಪ್ಪಲಿ ಸ್ಟಾಂಡ್ ಬೀಳಿಸಿಕೊಂಡು ಹೋಗೋದು. ಮನೆ ಮುಂದೆ ಬಿಡಿಸಿದ್ದ ರಂಗೋಲಿಯನ್ನ ಕಾಲಿಂದ ಅಳಿಸಿ ಹಾಕೊ ಕೆಲಸ ಮಾಡ್ತಿದ್ದಾಳೆ. ಅದರ ಸಿಸಿಟಿವಿ ಫೂಟೆಜ್ ಜೊತೆಗೆ ಪೊಲೀಸ್ ಠಾಣೆಗೆ ಹೋದ್ರು ಪ್ರಯೋಜನವಾಗಿಲ್ಲ. ನೇಹಾ ಕೊಟ್ಟ ಪ್ರತಿ ದೂರಿನ ಮೇಲೆ ಬೊಮ್ಮನಹಳ್ಳಿ ಪೊಲೀಸರು ಕಳೆದ ಡಿಸಂಬರ್ ನಲ್ಲಿ ಮಂಜುನಾಥ್ ಮೇಲೆ 354A ಅಂದರೆ ಲೈಂಗಿಕ ದೌರ್ಜನ್ಯ ಆರೋಪದಡಿ ಎಫ್ಐಆರ್ ದಾಖಲಿಸಿ ಕಿರುಕುಳ ನೀಡಿದ್ದಾರೆ.
ಈಗ ಮತ್ತೆ ನೇಹಾ ತನ್ನ ಆಟ ಮುಂದುವರೆಸಿದ್ದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಹೋದ್ರೆ ಇದು ಸಿಲ್ಲಿ ವಿಚಾರ ಎಂದು ಬೇಜವಾಬ್ದಾರಿ ಉತ್ತರ ಕೊಡ್ತಿದ್ದಾರಂತೆ..ಇದರಿಂದ ನೊಂದ ದಂಪತಿ ನಿನ್ನೆ ಸಂಜೆ 6 ಗಂಟೆಯಿಂದಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಎದುರು ಧರಣಿ ಕುಜತಿದ್ದಾರೆ. ಇದಕ್ಕೂ ಕ್ಯಾರೆ ಅನ್ನದ ಇನ್ಸ್ ಪೆಕ್ಟರ್ ಮೊಂಡುತನ ಪ್ರದರ್ಶನ ಮಾಡ್ತಿದ್ದಾರಂತೆ.
ಅದೇನೇ ಹೇಳಿ. ಸಣ್ಣ ಪುಟ್ಟ ವಿಚಾರಕ್ಕೆ ಅಕ್ಕಪಕ್ಕದ ಮನೆಯವರು ಅನುಸರಿಸಿಕೊಂಡು ಹೋಗ್ಬೇಕು. ಹೋಗ್ಲಿ ಠಾಣೆಗೆ ಬಂದಾಗ ಪೊಲೀಸರು ಇಬ್ಬರನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸೊ ಕೆಲಸ ಮಾಡ್ಬೇಕು ಅದೆಲ್ಲವನ್ನು ಬಿಟ್ಟು ಸಿಲ್ಲಿ ಕಾರಣ ಎಂದು ಸಬೂಬು ಹೇಳೋದು ನಿಜಕ್ಕೂ ಖಂಡನೀಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.