ಕೊನೆಗೂ ಬಿಡುಗಡೆ ಆಯ್ತು ನೂತನ ಸಚಿವರ ಪಟ್ಟಿ: ಇಂದು 17 ಸಚಿವರ ಪ್ರಮಾಣ ವಚನ
ಒಬ್ಬ ಪಕ್ಷೇತರ ಸೇರಿದಂತೆ ಒಟ್ಟು 17 ಶಾಸಕರು ನೂತನ ಸಚಿವರಾಗಿ ಇಂದು ಬೆಳಿಗ್ಗೆ 10:30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 25 ದಿನಗಳ ಬಳಿಕ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಬಿಜೆಪಿ ಹೈಕಮಾಂಡ್ ಕೊನೆಗೂ ಬಿಎಸ್ವೈ ಸಚಿವ ಸಂಪುಟಕ್ಕೆ ಸೇರುವ 17 ಶಾಸಕರ ಹೆಸರನ್ನು ಅಂತಿಮಗೊಳಿಸಿದ್ದು, ಸಚಿವರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಇಂದು ಬೆಳಗ್ಗೆ 10.30ರಿಂದ 11.30ರೊಳಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಸಂಪುಟದ 17 ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಮೊದಲ ಹಂತದಲ್ಲಿ ಒಬ್ಬ ಪಕ್ಷೇತರ ಸೇರಿದಂತೆ ಒಟ್ಟು 17 ಶಾಸಕರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದು, ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಬಿಜೆಪಿ ಸರ್ಕಾರ ರಚನೆಗೆ ಅನುವು ಮಾಡಿಕೊಟ್ಟ ಅನರ್ಹ ಶಾಸಕರಿಗೆ ಎರಡನೇ ಹಂತದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೇ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ರವಾನಿಸಿದ್ದು, ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿ ಇಂತಿದೆ...
ಗೋವಿಂದ ಕಾರಜೋಳ
ಡಾ. ಅಶ್ವತ್ಥ್ ನಾರಾಯಣ ಸಿ.ಎನ್.
ಲಕ್ಷ್ಮಣ್ ಸಂಗಪ್ಪ ಸವದಿ
ಕೆ.ಎಸ್. ಈಶ್ವರಪ್ಪ
ಆರ್. ಅಶೋಕ
ಜಗದೀಶ್ ಶೆಟ್ಟರ್
ಬಿ. ಶ್ರೀರಾಮುಲು
ಎಸ್. ಸುರೇಶ ಕುಮಾರ್
ವಿ. ಸೋಮಣ್ಣ
ಸಿ.ಟಿ. ರವಿ
ಬಸವರಾಜ್ ಬೊಮ್ಮಾಯಿ
ಕೋಟ ಶ್ರೀನಿವಾಸ್ ಪೂಜಾರಿ
ಜೆ.ಸಿ. ಮಾಧುಸ್ವಾಮಿ
ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್
ಎಚ್. ನಾಗೇಶ್
ಪ್ರಭು ಚೌಹ್ಹಾಣ್
ಜೊಲ್ಲೆ ಶಶಿಕಲ ಅಣ್ಣಾ ಸಾಹೇಬ್