ಬೆಂಗಳೂರು : ಬಾಡಿಗೆದಾರಿಕೆ ಅಧಿನಿಯಮಕ್ಕೆ ಕುರಿತಂತೆ ರಾಜ್ಯ ಸರ್ಕಾರ ಹೊಸ ಅಧಿನಿಯಮ ತರಲು ಮುಂದಾಗಿದ್ದು ಅದರ ಪ್ರಮುಖ ಅಂಶಗಳು ಮುಂದಾಗಿದೆ. ಈ ಹೊಸಾ ಅಧಿನಿಯಮದಲ್ಲಿ ಏನೇನಿದೆ, ಏನೇನಿಲ್ಲ ಇಲ್ಲಿದೆ ಸಂಪೂರ್ಣ ಮಾಹಿತಿ.


COMMERCIAL BREAK
SCROLL TO CONTINUE READING

ಬಾಡಿಗೆದಾರರು ಹಾಗೂ ಮಾಲೀಕರು ಯಾವುದೇ ಒಪ್ಪಂದ ಮಾಡಿಕೊಂಡರು ಅದರಲ್ಲಿ ಸರ್ಕಾರ(Govt of Karnataka) ಮೂಗು ತೂರಿಸುವುದಿಲ್ಲ. ಅವರಿಬ್ಬರ ಅಗ್ರಿಮೆಂಟೇ ಫೈನಲ್​, ಇನ್ನು ಮೇಲೆ ಏನೇ ಆದರೂ ಇಬ್ಬರೆ ಕುಳಿತು ಬಗೆಹರಿಸಿಕೊಳ್ಳಬೇಕಾಗಬಹುದು.


ಇದನ್ನೂ ಓದಿ : 2nd PUC Result 2021 : ದ್ವಿತೀಯ PU ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಜು. 20ರೊಳಗೆ PU ಫಲಿತಾಂಶ ಪ್ರಕಟ


ಬಾಡಿಗೆದಾರ ಹಾಗೂ ಮಾಲೀಕರ ಕೇಸ್ ನ್ಯಾಯಾಯುತವಾಗಿ ಪರಿಹರಿಸಲು ಸಾಧ್ಯವಿರುವ ಎಲ್ಲಾ ಮಾರ್ಗಗಳನ್ನು ಸರ್ಕಾರ ಯೋಚಿಸುತ್ತಿದೆ. ಬಾಡಿಗೆ(House Rent) ಹೆಚ್ಚಳದ ಮೇಲೆ ನಿಯಂತ್ರಣ ತರಲು ಸರ್ಕಾರ ಮುಂದಾಗಿದೆ. ಏಕೆಂದರೆ ಕೆಲವು ಕಡೆ ಮೂಗಿಗಿಂತ ಮೂಗುತಿ ಮೂಗುತಿ ಬಾರ ಅನ್ನುವ ರೀತಿ ಇದೆ. ಅಲ್ಲದೆ ಅವೈಜ್ಞಾನಿಕ ಬಾಡಿಗೆ ಅದರಿಂದ ಉಂಟಾಗುತ್ತಿರುವ ತಲೆನೋವುಗಳಿಂದ ಮುಕ್ತಿ ಕೊಡಲು ಸರ್ಕಾರ ನಿರ್ಧರಿಸಿದೆ.


ಅನೌಪಚಾರಿಕ ಬಾಡಿಗೆ ಮಾರುಕಟ್ಟೆಯನ್ನು ಸೃಜಿಸು ಯೋಚನೆಯೂ ಸರ್ಕಾರದ ಮುಂದಿದೆ. ಹಾಗೂ ಬಾಡಿಗೆ ಕರಾರು ಮತ್ತು ದಸ್ತಾವೇಜುಗಳನ್ನು ಸಲ್ಲಿಸಲು ವೇದಿಕೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗಿದೆ.


ಇದನ್ನೂ ಓದಿ : Heavy Rainfall in Karnataka : ರಾಜ್ಯದಲ್ಲಿ ಇನ್ನೂ 4 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮಾಹಿತಿ 


ಯಾವುದೇ ಹಣಕಾಸಿನ ವ್ಯವಹಾರ(Financial transaction)ದಲ್ಲಿ ಗರಿಷ್ಟಮಿತಿ ಇರುವುದಿಲ್ಲ, ಒಪ್ಪಂದದ ‌ಮೇರೆಗೆ ಬಾಡಿಗೆ ನಿರ್ಧಾರ ಮಾಡಬಹುದು.ಗರಿಷ್ಠ ತಿಂಗಳ ಬಾಡಿಗೆಗೆ ಸಮನಾದ ಭದ್ರತಾ ಠೇವಣಿ ಅಂದರೆ ಅಡ್ವಾನ್ಸ್​ ಅನ್ನು ಮಾತ್ರ ಪಡೆಯಬೇಕು. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಸಾಧ್ಯತೆ ಇದೆ. ಬಾಡಿಗೆ ನ್ಯಾಯಾಧಿಕರಣದ ಸ್ಥಾಪನೆ, ಕೇಸ್ ವಿಚಾರಣೆಗೆ ಜಿಲ್ಲಾ ನ್ಯಾಯಾಧೀಶರ ನೇಮಕ ಮಾಡಲಾಗುವುದು.


ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ 60 ದಿನಗಳ ಒಳಗೆ ಕೇಸ್ ಇತ್ಯರ್ಥ ಮಾಡಬೇಕು, ಯಾವುದೇ ಕಾರಣಕ್ಕೂ ಇದನ್ನು ವಿಳಂಬ ಮಾಡುವಂತಿಲ್ಲ. ಬಾಡಿಗೆ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ, ಮಧ್ಯಕಾಲೀನ ಆದೇಶವನ್ನು ಹೊರಡಿಸುವುದಕ್ಕೆ ಅವಕಾಶವಿದೆ. 3ಕ್ಕಿಂತ ಹೆಚ್ಚು ಮುಂದೂಡಿಕೆಗಳಿಗೆ ಅವಕಾಶ ನೀಡುವಂತಿಲ್ಲ.


ಇದನ್ನೂ ಓದಿ : Bengaluru Gang Rape Case: 12 ಮಂದಿಯ ಬಂಧನ, ಶಂಕಿತರಿಂದ ವಿಡಿಯೋ ಹಂಚಿಕೆ


ಸರ್ವರಿಗೂ ವಸತಿ ಕಾರ್ಯಕ್ರಮ ಪುನರ್ ಜಾರಿಗೆ ಚಿಂತನೆ, ಬಾಡಿಗೆದಾರರು ಮತ್ತು ಭೂ ಮಾಲೀಕರಿಗೆ(Land owner) ಇದರಿಂದ ಲಾಭ ಹೆಚ್ಚಾಗುವ ನಿರೀಕ್ಷೆ. ಸ್ಪಂದನಶೀಲ, ಸುಸ್ಥಿರ, ಔಪಚಾರಿಕ ಬಾಡಿಗೆ ಮಾರುಕಟ್ಟೆ ಸೃಷ್ಟಿಗೆ ಆದ್ಯತೆ. ಈ ಕುರಿತು ಕಾನೂನು ಚೌಕಟ್ಟಿನಲ್ಲಿ ಕೂಲಂಕುಶವಾಗಿ ಪರಿಶೀಲನೆ ಮಾಡಲಾಗುವುದಾಗಿ ತಿಳಿಸಲಾಗಿದೆ.


ಬಾಡಿಗೆ ವಲಯದಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ, ಸಮಗ್ರ ಆರ್ಥಿಕ ವ್ಯವಸ್ಥೆ ಉತ್ತೇಜಿಸುವುದು. ಅನೀರಿಕ್ಷಿತ ವಿಪತ್ತು ಎದುರಾದಅಗ ಇಬ್ಬರ ಒಪ್ಪಂದಗಳ ಆಧಾರದಲ್ಲಿಯೇ ಮುಂದುವರೆಯುವುದಕ್ಕೆ ಅನುಮತಿಸಿವುದು.


ಇದನ್ನೂ ಓದಿ : Shobha Karandlaje : 'ನಾನು ರೈತನ ಮಗಳು, ರೈತರಿಗಾಗಿ ಕೆಲಸ ಮಾಡುತ್ತೇನೆ'


ಪ್ರಸ್ತುತ ಜಾರಿಯಲ್ಲಿರುವ ಕಾನೂನು(Law)ಗಳನ್ನು ತಿದ್ದುಪಡಿ ಮಾಡುವ ಅಗತ್ಯ ಹಾಗೂ ಬಾಡಿಗೆದಾರ - ಮಾಲೀಕನ ಹಿತಾಸಕ್ತಿಗಳನ್ನು ಸಮತೋಲನ ಮಾಡುವುದು. ಹೊಸ ಬಾಡಿಗೆದಾರಿಕೆಗಳಿಗೆ ಲಿಖಿತ ಒಪ್ಪಂದ ಕಡ್ಡಾಯ, ಭೂ ಮಾಲೀಕ, ಅವಶ್ಯಕ ಪೂರೈಕೆಗಳನ್ನ ತಡೆಹಿಡಿಯುವಂತಿಲ್ಲ, ಬಾಡಿಗೆ ಅವಧಿಯು ಚಾಲ್ತಿಯಲ್ಲಿರುವಾಗ ಬಾಡಿಗೆದಾರರನನ್ನು ಹೊರಹಾಕುವಂತಿಲ್ಲ, ಬಾಡಿಗೆ ಅವಧಿ ಮುಕ್ತಾಯ ನಂತರ, ಖಾಲಿ ಮಾಡದಿರುವ ಸಂಧರ್ಭದಲ್ಲಿ ಹೆಚ್ಚಿಸಲಾದ ಬಾಡಿಗೆ ಹಣವನ್ನು ಬಾಡಿಗೆದಾರ ಕೊಡಬೇಕು.


ಮೊದಲ ಎರಡು ತಿಂಗಳಿಗೆ 3 ಪಟ್ಟು, ಅನಂತರ ನಾಲ್ಕು ಪಟ್ಟು ಬಾಡಿಗೆ(Rent) ನೀಡಬೇಕಾಗುತ್ತದೆ. ವಿವಾದ ಇತ್ಯರ್ಥದಲ್ಲಿರುವಾಗ ಬಾಡಿಗೆದಾರ ಬಾಡಿಗೆ ಕಟ್ಟಬೇಕಾಗುತ್ತದೆ. ಮಾಲೀಕನ ಒಪ್ಪಿಗೆ ಇಲ್ಲದೇ, ಬಾಡಿಗೆದಾರ ಯಾವುದೇ ಬದಲಾವಣೆ ಮಾಡುವಂತಿಲ್ಲ.


ಇದನ್ನೂ ಓದಿ : Rain in Karnataka : ಇಂದಿನಿಂದ ರಾಜ್ಯದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆ 


ಈ ಎಲ್ಲಾ ಸಂಗತಿಗಳ ನಿರ್ವಹಣೆಗೆ ಡೆಪ್ಯೂಟಿ ಕಲೆಕ್ಟರ್ ನ ದರ್ಜೆಯ ಒಬ್ಬ ಅಧಿಕಾರಿ ನೇಮಕ ಹಾಗೂ ದಸ್ತಾವೇಜುಗಳ ಸಲ್ಲಿಕೆ ಸಬಲ ಹಾಗೂ ಸುಲಭಗೊಳಿಸಲು ಡಿಜಿಟಲ್ ವೇದಿಕೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ