ಬೆಂಗಳೂರು: ಪೊಲೀಸರಿಗೆ ರಾಷ್ಟ್ರೀಯ ತನಿಖಾ ದಳ ಹೊಸ ಟಾಸ್ಕ್‌ ನೀಡಿದೆ. ಬಂಧಿಸಲಾಗಿರುವ ಪಿಎಫ್ಐ ಮುಖಂಡರ ಬ್ಯಾಂಕ್‌ ಡಿಟೇಲ್ಸ್‌ ನೀಡಲು ಸೂಚಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಪಿಎಫ್ಐನಿಂದ ಎಲೆಕ್ಷನ್‌ಗೆ ನಿಲ್ಲಲು ಕೆಲವರು ತಯಾರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇವರ ಹಣದ ಮೂಲ ಏನೂ ಎಂಬ ಬಗ್ಗೆ  ಎನ್ಐಎ ಮಾಹಿತಿ ಕಲೆಹಾಕುತ್ತಿದೆ. ಹೀಗಾಗಿ ಬೆಂಗಳೂರು ಪೊಲೀಸರಿಗೂ ಮಾಹಿತಿ ಕಲೆಹಾಕುವಂತೆ ಎನ್ಐಎ ಅಧಿಕಾರಿಗಳು ಸೂಚಿಸಿದ್ದಾರೆ.  


COMMERCIAL BREAK
SCROLL TO CONTINUE READING

ಈ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಡಿಸಿಪಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪಿಎಫ್ಐ ಸದಸ್ಯರಲ್ಲಿ ಯಾರೆಲ್ಲಾ ಎಲೆಕ್ಷನ್‌ಗೆ ನಿಲ್ಲೋ ಫ್ಲ್ಯಾನ್ ಮಾಡಿದ್ರು. ಅವರ ಬ್ಯಾಗ್ರೌಂಡ್ ಏನು, ಹಣಕಾಸಿನ ಸ್ಥಿತಿ ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಸದ್ಯ ನಗರ ಪೊಲೀಸರು ನಗರದಾದ್ಯಂತ ಅಲರ್ಟ್ ಆಗಿದ್ದಾರೆ.  


ಇದನ್ನೂ ಓದಿ- ಹಿಂದುತ್ವ ಮತ್ತು ಆರ್‌ಎಸ್ಎಸ್ ʼPFIʼ ಮೇನ್‌ ಟಾರ್ಗೆಟ್‌..!


ಚುನಾವಣೆ ಗೆಲ್ಲುವ ಪ್ಲ್ಯಾನ್‌ ಮಾಡಿದ್ದ ಪಿಎಫ್ಐ:
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಹಾಗೂ ದೇಶದಲ್ಲಿ ಲೋಕಸಭಾ ಚುನಾವಣೆ ಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಅಧಿಪತ್ಯ ಸಾಧಿಸಬೇಕು ಎಂದು ಪಿಎಫ್‌ಐ ಪ್ಲ್ಯಾನ್‌ ಮಾಡಿಕೊಂಡಿತ್ತು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ರಾಜಕೀಯವಾಗಿ ಬಲಿಷ್ಠವಾಗಲು ಪಿಎಫ್‌ಐ ಖಾತೆಗೆ ಗಲ್ಫ್ ರಾಷ್ಟ್ರಗಳಿಂದ ಹಣದ ಹೊಳೆಯೇ ಹರಿದಿತ್ತು. ಅದರಲ್ಲಿ ಎಲೆಕ್ಷನ್ಗೆ ಅಂತಾ ಅಡ್ವಾನ್ಸ್ ಆಗಿ ಕೋಟಿ ಕೋಟಿ ಬಂದಿರೋ ಮಾಹಿತಿ ಲಭ್ಯವಾಗಿದೆ.  


ಇದನ್ನೂ ಓದಿ- ನೂರನೇ ವರ್ಷದ ಸ್ವಾತಂತ್ರ್ಯೋತ್ಸವ ನಿಷೇಧಿತ ಪಿಎಫ್ಐ ಟಾರ್ಗೆಟ್..!


ಕಾರ್ಪೋರೇಟ್ ಎಲೆಕ್ಷನ್ ನಿಂದ ಹಿಡಿದು ವಿಧಾನಸಭೆ ಹಾಗೂ ಲೋಕಸಭೆಗೂ ಎಲ್ಲಾ ಕ್ಷೇತ್ರದಲ್ಲೂ ಎಲೆಕ್ಷನ್ ಗೆ ನಿಲ್ಲಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಇದಕ್ಕಾಗಿ ಪಿಎಫ್ಐ ಕಡೆಯಿಂದ ಅಭ್ಯರ್ಥಿಗಳ ಲಿಸ್ಟ್ ಸಹ ತಯಾರಾಗಿತ್ತು. ಈ ಕಾರಣದಿಂದಲೇ ಇವರ ಅಕೌಂಟ್ ಡೀಟೇಲ್ಸ್‌ನ್ನು ಎನ್ಐಎ ಕೇಳಿದೆ.  ಇದರ ಜೊತೆಗೆ ಅಭ್ಯರ್ಥಿಗಳ ಕುಟುಂಬ ಹಾಗೂ ಸಂಬಂಧಿಕರ ಅಕೌಂಟ್ ಗಳ ಪರಿಶೀಲನೆಗೆ ಸಹ ಪೊಲೀಸರಿಗೆ ಸೂಚಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.