ಕೊಪ್ಪಳ: ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು, ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯ ಮೇರೆಗೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದಲ್ಲಿ ನೂತನ ಪ್ರತಿಷ್ಟಿತ ರಾತ್ರಿ ಸಾರಿಗೆಯನ್ನು (ನಾನ್ ಎಸಿ ಸ್ಲೀಪರ್) ಪ್ರಾರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಸಾರಿಗೆ ಕಾರ್ಯಾಚರಣೆ ಸಮಯ: ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದಿಂದ ನಾನ್ ಎಸಿ ಸ್ಲೀಪರ್ ವಾಹನವು ಕೊಪ್ಪಳದಿಂದ 20.30 ಗಂಟೆಗೆ ಹಾಗೂ ಗಂಗಾವತಿಯಿಂದ 4.15 ಮತ್ತು 21.45ಕ್ಕೆ ಹೊರಡಲಿದ್ದು, ಕಲಬುರಗಿಗೆ 3.45ಕ್ಕೆ & 21.30ಕ್ಕೆ, ಬೀದರ್‌ಗೆ 6.45ಕ್ಕೆ ತಲುಪಲಿದೆ. ಕಲಬುರಗಿಯಿಂದ 22 ಮತ್ತು 4 ಗಂಟೆಗೆ ಹಾಗೂ ಬೀದರ್‌ದಿಂದ 18.30ಕ್ಕೆ ಹೊರಡಲಿರುವ ವಾಹನಗಳು ಗಂಗಾವತಿಗೆ 4 ಮತ್ತು 21.30ಕ್ಕೆ, ಕೊಪ್ಪಳಕ್ಕೆ 5.15ಕ್ಕೆ ತಲುಪಲಿದೆ.


ಇದನ್ನೂ ಓದಿ: Lokasabha Election 2024: ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಭೇದಿಸುತ್ತಾ ಕೈ ಪಡೆ?


ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗದ ಸಾರಿಗೆಗೆ ಮುಂಗಡ ಟಿಕೇಟ್ ಬುಕ್ ಮಾಡಲು ಸಂಸ್ಥೆಯ ಅಧೀಕೃತ ವೆಬ್‌ಸೈಟ್ www.ksrtc.in ನಲ್ಲಿ ಹಾಗೂ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾಗಳ ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಈ ಸಾರಿಗೆ ಸೌಲಭ್ಯದ ಸದಪಯೋಗ ಪಡೆದುಕೊಳ್ಳುವಂತೆ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.