ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಕುರಿತು ತೀರ್ಪು ಕಾಯ್ದಿರಿಸಿದ ಎನ್ ಜಿ ಟಿ
ವಿವಾದಿತ ಎತ್ತಿನಹೊಳೆ ನೀರಾವರಿ ಯೋಜನೆಯ ತೀರ್ಪನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಾಯ್ದಿರಿಸಿದೆ.
ನವದೆಹಲಿ: ಕರ್ನಾಟಕ ಸರ್ಕಾರ ಮಾಡಲು ಹೊರಟಿರುವ ವಿವಾದಿತ ಎತ್ತಿನಹೊಳೆ ನೀರಾವರಿ ಯೋಜನೆ ಪ್ರಕರಣವನ್ನು ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಗುರುವಾರ ತೀರ್ಪನ್ನು ಕಾಯ್ದಿರಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಜಾವೇದ್ ರಹೀಮ್ ಮತ್ತು ನ್ಯಾಯಮೂರ್ತಿ ರಂಜಿತ ಚಟರ್ಜಿ ಅವರ ಪೀಠದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆ ನಡೆಸಲಾಗಿತ್ತು. ಕರ್ನಾಟಕ ಸರ್ಕಾರ ಮತ್ತು ಅರ್ಜಿದಾರರಾದ ಕೆ.ಎನ್. ಸೋಮಶೇಖರ್ ಪರ ವಕೀಲರು ಗುರುವಾರ ವಾದವನ್ನು ಅಂತ್ಯಗೊಳಿಸಿದರು. ನಂತರ ನ್ಯಾಯಮೂರ್ತಿಗಳು ತೀರ್ಪನ್ನು ಕಾಯ್ದಿರಿಸಿದರು.