ಬೆಂಗಳೂರು: ಕರ್ನಾಟಕ ಏಕೀಕರಣದ ನಂತರದ ಮೊದಲ ಮುಖ್ಯಮಂತ್ರಿ ಹಾಗೂ ಭಾರತೀಯ ಕಾಂಗ್ರೆಸ ನ ಮಾಜಿ ಅಧ್ಯಕ್ಷರು ಆಗಿದ್ದ ಗಾಂಧಿವಾದಿ ಎಸ್ ನಿಜಲಿಂಗಪ್ಪ ನವರಿಗೆ ಭಾರತ ರತ್ನ ನೀಡಲು ಅವರ ಹೆಸರನ್ನು ರಾಜ್ಯದಿಂದ ಶಿಫಾರಸ್ಸು ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದ ಬಳಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ  ನಿಜಲಿಂಗಪ್ಪನವರು ಕೈ-ಬಾಯಿ ಶುದ್ದವಾಗಿಟ್ಟುಕೊಂಡಿದ್ದ ಮಹಾನ್ ನಾಯಕ ಎಂದರು.
ಇದೆ ಸಂಧರ್ಭದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ರವರು ವಿಧಾನಸೌಧದ ಹತ್ತಿರವಿರುವ  ನಿಜಲಿಂಗಪ್ಪನವರ ಮೂರ್ತಿಯು ಅವರ ಪ್ರತಿರೂಪದಂತಿಲ್ಲ  ಎನ್ನುವ ಮಾತಿಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು ಅದರಂತೆ ಬೇರೆ ರೀತಿಯ ಹೊಸ ಮೂರ್ತಿಯನ್ನು  ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.