Lok Sabha Election 2024: ಡಿಕೆ ಬದ್ರರ್ಸ್ ವಿರುದ್ಧ ʼಕುಕ್ಕರ್ʼ ಹಂಚಿಕೆ ಆರೋಪ ಮಾಡಿದ ನಿಖಿಲ್!
Lok Sabha Election 2024: ಕಳೆದ 20 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕುಕ್ಕರ್ ಆರ್ಡ್ ಮಾಡಲಾಗಿದ್ದು, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿಕೆ ಮಾಡಲಾಗಿದೆ ಎಂದು ಡಿಕೆ ಸಹೋದರರ ವಿರುದ್ದ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
Lok Sabha Election 2024: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಮತದಾರರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ನಗದು ಸೇರಿದಂತೆ ವಿವಿಧ ರೀತಿಯ ಬೆಲೆಬಾಳುವ ವಸ್ತುಗಳನ್ನು ಹಂಚಿಕೆ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದ ಲಕ್ಷ ಲಕ್ಷ ಹಣವನ್ನು ಪೊಲೀಸರು ಮತ್ತು ಚುನಾವಣಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಡಿಕೆ ಬ್ರದರ್ಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಡಿಕೆ ಸಹೋದರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ನಿಖಿಲ್, ʼಕಳೆದ 20 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕುಕ್ಕರ್ ಆರ್ಡರ್ ಮಾಡಲಾಗಿದ್ದು, ಈಗಾಗಲೇ 4-5 ಲಕ್ಷ ಕುಕ್ಕರ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: “ಯದುವೀರ್ ಅವರನ್ನು ಬೀದಿಗೆ ತಂದು ನಾಟಕ ಆಡಿಸುತ್ತಿದ್ದಾರೆ”
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ನಿಖಿಲ್, ʼಕಾಂಗ್ರೆಸ್ ಪಕ್ಷವು ಮತದಾರರಿಗೆ ಆಮಿಷ ಒಡ್ಡಿ ಚುನಾವಣೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಸೀರೆ, ತವಾಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರಜ್ಞಾವಂತ ಮತದಾರರು ಈ ಬಗ್ಗೆ ಯೋಚನೆ ಮಾಡಿ ಮತ ಹಾಕಬೇಕು ಅಂತಾ ಕುಟುಕಿದ್ದಾರೆ.
ಕಾಂಗ್ರೆಸ್ನಿಂದ ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿದ ನಿಖಿಲ್, 'ನಮ್ಮ ಪಕ್ಷದ ಕಾರ್ಯಕರ್ತರು ಯಾರೂ ಸಹ ವೀಕ್ ಮೈಂಡೆಡ್ ಅಲ್ಲ, ಒಂದಷ್ಟು ಜನರು ಚುನಾವಣೆಯಲ್ಲಿ ಜೆಡಿಎಸ್ ಸವಲತ್ತು ಪಡೆದು ಅನ್ಯಾಯ ಮಾಡಿದರು. ಇದು ಚುನಾವಣೆಗಳಲ್ಲಿ ಸಹಜ. ಐದತ್ತು ಪರ್ಸೆಂಟ್ ಜೊತೆಯಲ್ಲೇ ಇದ್ದು ಮೋಸ ಮಾಡುವ ಜನರಿದ್ದಾರೆ. ಇಂತವರು ʼನಾನು ಮಂಡ್ಯದಿಂದ ಸ್ಪರ್ಧಿಸಿದ್ದ ವೇಳೆ ಕಾಂಗ್ರೆಸ್ಗೆ ಒಂದು ಹೆಜ್ಜೆ ಇಟ್ಟಿದ್ರು, ಇದೀಗ ಎರಡೂ ಕಾಲುಗಳನ್ನು ಕಾಂಗ್ರೆಸ್ಗೆ ಇಟ್ಟಿದ್ದಾರೆ. ಆದರೆ ಪಕ್ಷ ಕಟ್ಟಿ ಬೆಳೆಸಿರುವ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಜೊತೆಯಲ್ಲಿದ್ದಾರೆ. ಕಾಂಗ್ರೆಸ್ ಲಕ್ಷ ಲಕ್ಷ ಕೊಟ್ಟು ಆಮಿಷ ತೋರಿಸಿದರೂ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲವೆಂದು ಹೇಳಿದರು.
ಇದನ್ನೂ ಓದಿ: ಸಕ್ಕರೆ ನಾಡು ಮಂಡ್ಯದಲ್ಲಿ ನಿಲ್ಲದ ಕೊಂಡ ದುರಂತ ಪ್ರಕರಣ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ