ಮಂಗಳೂರು: Nipah Virus In Karnataka- ನೆರೆಯ ರಾಜ್ಯ ಕೇರಳದಲ್ಲಿ ಹೆಚ್ಚಾಗುತ್ತಿರುವ ನಿಫಾ ವೈರಸ್ ಸೋಂಕು ಕರ್ನಾಟಕದಲ್ಲೂ ಆತಂಕ ಉಂಟುಮಾಡಿದೆ.  ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ನಿಫಾ ವೈರಸ್ ಗೆ ಬಲಿಯಾದ ಒಂದು ವಾರದ ನಂತರ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಸೋಂಕು ಇರುವುದಾಗಿ ಶಂಕಿಸಲಾಗಿದೆ ಮತ್ತು ಆತನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.


COMMERCIAL BREAK
SCROLL TO CONTINUE READING

ಆರೋಗ್ಯ ಆಯುಕ್ತ ಕೆ.ವಿ. ತ್ರಿಲೋಕ್ ಚಂದ್ರ ಅವರ ಪ್ರಕಾರ, ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುವ ವ್ಯಕ್ತಿ ಸ್ಯಾಂಪಲ್ ಅನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ (ಎನ್ಐವಿ) ಪರೀಕ್ಷೆಗೆ ಕಳುಹಿಸುವವರೆಗೂ ಅವರಲ್ಲಿ ಯಾವುದೇ ತೀವ್ರ ಲಕ್ಷಣಗಳು ಕಂಡು ಬಂದಿರಲಿಲ್ಲ ಎನ್ನಲಾಗಿದೆ. ನಾವು ಜಾಗರೂಕರಾಗಿರಬೇಕು ಆದರೆ ಭಯಪಡುವ ಅಗತ್ಯವಿಲ್ಲ. ವ್ಯಕ್ತಿಯು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ವರದಿ ಮಾಡಿಲ್ಲ ಎಂದು ಅವರು ಹೇಳಿದರು.


ಇದನ್ನೂ ಓದಿ- Nipah Virus: ನಿಫಾ ವೈರಸ್ Vs ಕರೋನಾ ವೈರಸ್, ಯಾವ ವೈರಸ್ ಹೆಚ್ಚು ಅಪಾಯಕಾರಿ ಎಂದು ತಿಳಿದಿದೆಯೇ?


ದಕ್ಷಿಣ ಕನ್ನಡ (Dakshina Kannada) ಉಪ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಅವರು ಮಂಗಳವಾರ (ಸೆಪ್ಟೆಂಬರ್ 14) ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕೇವಲ ಶಂಕಿತ ಪ್ರಕರಣ, ಆದರೆ ನಿರ್ಲಕ್ಷಿಸಲಾಗದು ಎಂದು ತಿಳಿಸಿದ್ದಾರೆ. 


ಶಂಕಿತ ವ್ಯಕ್ತಿಯು ಕಾರವಾರ ಮೂಲದವರಾಗಿದ್ದು ಅವರು ಗೋವಾದ ಆರ್‌ಟಿ-ಪಿಸಿಆರ್ ಪರೀಕ್ಷಾ ಕಿಟ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ವ್ಯಕ್ತಿ ಸೆಪ್ಟೆಂಬರ್ 8 ರಂದು ಮಳೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಗೋವಾದಿಂದ ತನ್ನ ಊರಾದ ಕಾರವಾರಕ್ಕೆ ಬಂದಿದ್ದರು. ಅಂತರ್ಜಾಲದಲ್ಲಿ ಹುಡುಕಿದ ನಂತರ ಅವರಲ್ಲಿ ಮೂಡಿರುವ ಆತಂಕವೇ ನಿಫಾ ಸೋಂಕಿನ (Nipha Virus) ಅನುಮಾನಕ್ಕೆ ಕಾರಣವಾಯಿತು. ಅವರು ಕೇವಲ ಜ್ವರ ಮತ್ತು ತಲೆನೋವಿನಿಂದ ಬಳಲುತ್ತಿದ್ದರು ಎಂದು ದಕ್ಷಿಣ ಕನ್ನಡ ಉಪ ಆಯುಕ್ತ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ- Deadly Virus: ನಿಫಾ ವೈರಸ್ ವಕ್ಕರಿಸಿದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ..!


ಆದಾಗ್ಯೂ, ಮುನ್ನೆಚ್ಚರಿಕೆಯ ಕ್ರಮವಾಗಿ, ಆರೋಗ್ಯ ಅಧಿಕಾರಿಗಳು ಆತನ ತಂದೆಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳೊಂದಿಗೆ ನಿರ್ದೇಶನ ನೀಡಿದ್ದಾರೆ ಮತ್ತು ಅವರ ಎಲ್ಲಾ ಸಂಪರ್ಕಗಳನ್ನು ಗುರುತಿಸಿ ಮತ್ತು NIV ಪುಣೆಯಿಂದ ಫಲಿತಾಂಶಗಳನ್ನು ಪಡೆಯುವವರೆಗೆ ಅವರನ್ನು ಪ್ರತ್ಯೇಕಿಸುವಂತೆ ಸೂಚಿಸಿದ್ದಾರೆ.


ವಾಸ್ತವವಾಗಿ, ಕೇರಳದಲ್ಲಿ ನಿಫಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಿಂದ ಬರುವವರ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ಈ ಹಿಂದೆ, ಕೇರಳದ ಗಡಿ ಜಿಲ್ಲೆಗಳಲ್ಲಿ ನಿಫಾ ಏಕಾಏಕಿ ವಿರುದ್ಧ ಕರ್ನಾಟಕ ಆರೋಗ್ಯ ಇಲಾಖೆ ತನ್ನ ಕಣ್ಗಾವಲು ಮತ್ತು ಸನ್ನದ್ಧತೆಯನ್ನು ಬಲಪಡಿಸಿತ್ತು. ಅದರಲ್ಲೂ ಮುಖ್ಯವಾಗಿ ಸರ್ಕಾರವು ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.