ಮಹಾರಾಷ್ಟ್ರದ ಭೀಮಾ ಪಾಟಸ್ ಕಾರ್ಖಾನೆಗೆ ಮರು ಚಾಲನೆ ನೀಡಿದ ನಿರಾಣಿ ಗ್ರೂಪ್ಸ್
ಕಳೆದ ಎರಡು ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರದ ಪಾಟಸ್ ನ ಭೀಮಾ ಸಕ್ಕರೆ ಕಾರ್ಖಾನೆಯನ್ನು ಮುರುಗೇಶ್ ನಿರಾಣಿಯವರು ಪುನಃ ಆರಂಭಿಸಿದ್ದಾರೆ.
ಬೆಂಗಳೂರು: ಕಳೆದ ಎರಡು ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಹಾರಾಷ್ಟ್ರದ ಪಾಟಸ್ ನ ಭೀಮಾ ಸಕ್ಕರೆ ಕಾರ್ಖಾನೆಯನ್ನು ಮುರುಗೇಶ್ ನಿರಾಣಿಯವರು ಪುನಃ ಆರಂಭಿಸಿದ್ದಾರೆ.
ಇದನ್ನೂ ಓದಿ : R Ashok : 'ಡಿಕೆ ಶಿವಕುಮಾರ್ ಮೊದಲು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು'
ದೂರದ ಮಹಾರಾಷ್ಟ್ರದ ಪುಣೆ ಬಳಿಯ ಪಾಟಸ್ ನ ಭಿಮಾ ಸಹಕಾರಿ ಸಕ್ಕರೆ ಕಾರ್ಖಾನೆ ಕಳೆದ ಕೆಲ ವರ್ಷಗಳ ಹಿಂದೆ ಸ್ಥಗಿತಗೊಂಡಿತ್ತು.ಇದನ್ನು ಪುನಃ ಆರಂಭಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಜೀ ಹಾಗೂ ಸ್ಥಳೀಯ ದೌಂಡ್ ಶಾಸಕರಾದ ರಾಹುಲ್ ಕೂಲ್ ಸೇರಿದಂತೆ ಆ ಭಾಗದ ಪ್ರಮುಖ ರೈತ ಮುಖಂಡರು ಬೇಡಿಕೆಯನ್ನು ಇಟ್ಟಿದ್ದರು.
ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟದ ಅನುಮಾನ, ಅಲ್ಪಸಂಖ್ಯಾತರ ಓಟಿಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ'
ಈಗ ಬೇಡಿಕೆಗೆ ಸ್ಪಂಧಿಸಿರುವ ಮುರುಗೇಶ್ ನಿರಾಣಿಯವರು ಭೀಮಾ ತೀರದ ರೈತರಿಗಾಗಿ ಈ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿ ರೈತರಿಗಾಗಿ ಸಮರ್ಪಿಸಿದ್ದಾರೆ.ಇದರಿಂದ ಈ ಭಾಗದ ರೈತರಿಗೆ ಮತ್ತು ಕಾರ್ಮಿಕರಿಗೆ ನೆರವಾಗಲಿವೆ ಎನ್ನಲಾಗುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.