ಚಿತ್ರದುರ್ಗ:   ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವ ವ್ಯವಸ್ಥೆಯಲ್ಲಿ ಯಾವುದೇ ಚೆಕ್‌ಫೋಸ್ಟ್ಗಳಲ್ಲಿ ಹಾಗೂ ಪೊಲೀಸರಿಂದ ಅಡೆತಡೆಗಳಿಲ್ಲ. ರೈತರು ಬೆಳೆದಂತಹ ಬೆಳೆಯನ್ನು ಎಪಿಎಂಸಿ, ಇನ್ನಿತರೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬಹುದಾಗಿದೆ  ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (ST Somashekhar)   ತಿಳಿಸಿದರು.


COMMERCIAL BREAK
SCROLL TO CONTINUE READING

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹತ್ತಿ ಮಾರುಕಟ್ಟೆ, ಕಡಲೆ ಖರೀದಿ ಕೇಂದ್ರ ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ವೇಳೆ ಮಾತನಾಡಿದ ಸಚಿವ ಎಸ್. ಟಿ. ಸೋಮಶೇಖರ್  ರೈತರು ಯಾವುದೇ ಬೆಳೆ ಬೆಳೆಯಲಿ, ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಂದು ಹೇಳಿದರು. ಮಾರುಕಟ್ಟೆಗೆ ಆಗಮಿಸುವ ಸಿಬ್ಬಂದಿ ಮಾಸ್ಕ್, ಸ್ಯಾನಿಟೇಸರ್ ಸೇರಿದಂತೆ ಪ್ರತಿಯೊಬ್ಬರು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹಾರ ನಡೆಸಬೇಕು ಎಂದರು.


ಊಟೋಪಚಾರ ವ್ಯವಸ್ಥೆ; ಎಪಿಎಂಸಿ ಬರುವ ರೈತರು (Farmers) ಹಾಗೂ ಹಮಾಲರಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಬೇಕು. ಕ್ಯಾಂಟಿನ್ ತೆರೆದು ಇಲ್ಲಿ ಪಾರ್ಸಲ್ ವ್ಯವಸ್ಥೆ ಮಾಡಿ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ತಿಳಿಸಿ ಕ್ಯಾಂಟಿನ್ ತೆರೆಯದಿದ್ದಲ್ಲಿ ಸಮಿತಿಯಿಂದ ಪಾರ್ಸಲ್ ವ್ಯವಸ್ಥೆ ಮಾಡಲು ಸೂಚಿಸಿದರು.


ಹೂವು, ಹಣ್ಣುಗಳು ಹಾಗೂ ತರಕಾರಿಗಳ ಬೆಳೆ ನಷ್ಟ ಪರಿಹಾರ ಅಂದಾಜಿಗೆ ಸಚಿವ ಸೋಮಶೇಖರ್ ಸೂಚನೆ


ಜಿಲ್ಲೆಗೆ ಮೂರು ಕೋಲ್ಡ್ ಸ್ಟೋರೇಜ್: ಚಿತ್ರದುರ್ಗ ಎಪಿಎಂಸಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಕೋಲ್ಡ್ ಸ್ಟೋರೇಜ್ ಸಿಸ್ಟಂ ಅಳವಡಿಕೆಗೆ ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಚಿತ್ರದುರ್ಗ ಎಪಿಎಂಸಿಗೆ 02 ಕೋಲ್ಡ್ ಸ್ಟೋರೆಜ್ ಹಾಗೂ ಶಾಸಕ ಟಿ.ರಘುಮೂರ್ತಿ ಅವರು ಚಳ್ಳಕೆರೆಗೆ 01 ಕೋಲ್ಡ್ ಸ್ಟೋರೇಜ್ ಅಳವಡಿಕೆ ಮಾಡುವಂತೆ ಮನವಿ ಮಾಡಿದ್ದು, ಅಗತ್ಯವಿರುವ ಕಡೆ ಕೋಲ್ಡ್ ಸ್ಟೋರೇಜ್ ಅಳವಡಿಕೆಗೆ ಪ್ರಸ್ತಾವನೆ ಕಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಕೋಲ್ಡ್ ಸ್ಟೋರೇಜ್ ಅಳವಡಿಕೆಯಿಂದ ತರಕಾರಿ ಶೇಖರಿಸಿ ಮಾರಾಟ ಮಾಡಲು ಅನುಕೂಲವಾಗಲಿದ್ದು, ತರಕಾರಿ ಕೊಳೆಯುವಿಕೆಯನ್ನು ತಪ್ಪಿಸಬಹುದಾಗಿದೆ ಎಂದರು.


ಏ. 20ರ ಬಳಿಕ ಷರತ್ತುಗಳೊಂದಿಗೆ ನಿರ್ಮಾಣ ಕಾಮಗಾರಿಗಳ ಆರಂಭಕ್ಕೆ ಅನುಮತಿ - ಸಚಿವ ಜಗದೀಶ ಶೆಟ್ಟರ್


ಹೊಸ ಸಾಲ ವಿತರಣೆಗೆ ಕ್ರಮ:
ಪೂರ್ವ ಮುಂಗಾರು ಹಂಗಾಮು ಆರಂಭವಾಗಿದ್ದು ಬಿತ್ತನೆ ಚಟುವಟಿಕೆಗಳು ಆರಂಭಿಕ ಹಂತದಲ್ಲಿರುವುದರಿAದ ಏಪ್ರಿಲ್ ತಿಂಗಳಿAದನಿAದಲೇ ನಿಯಾಮಾನುಸಾರ ಹೊಸ ಸಾಲ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಸಹಕಾರ ಸಂಸ್ಥೆಗಳ ಮೂಲಕ ಕಳೆದ ವರ್ಷ 13 ಸಾವಿರ ಕೋಟಿ ಸಾಲ ನೀಡಲಾಗಿದ್ದು ಈ ಬಾರಿಯು ಅಷ್ಟೇ ಪ್ರಮಾಣದ ಸಾಲವನ್ನು ನೀಡಲು ತೀರ್ಮಾನಿಸಲಾಗಿದೆ. ಲಾಕ್ ಡೌನ್ ಇರುವ ಕಾರಣದಿಂದಾಗಿ ಜೂನ್ ವರೆಗೆ ಹಳೆ ಸಾಲ ಕಟ್ಟಲು ಸಮಯ ನಿಗಧಿಪಡಿಸಲಾಗಿದೆ.  ಜೂನ್ ತಿಂಗಳಿಗಿAತ ಮುಂಚಿತವಾಗಿ ಯಾರು ಮೊದಲು ಸಾಲ ಕಟ್ಟುತ್ತಾರೋ ಅವರಿಗೆ ಸಾಲದ ನವೀಕರಣ, ಹೊಸ ಸಾಲ ನೀಡಲಾಗುವುದು ಎಂದರು.


ಈ ಸಂದರ್ಭದಲ್ಲಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಟಿ.ರಘುಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಸಹಕಾರ ಸಂಘದ ನಿರ್ದೇಶಕ ಎಸ್.ಆರ್.ಗಿರೀಶ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಟಿ.ಎ.ಮಹೇಶ್ ಸಿಬ್ಬಂದಿ ಸೇರಿದಂತೆ ಮತ್ತಿತರರು ಇದ್ದರು.