ನವದೆಹಲಿ: ದೇಶಾದ್ಯಂತ ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳ ವಿರುದ್ಧದ ರೈತರ ಪ್ರತಿಭಟನೆ ತಾರಕಕ್ಕೆ ಏರಿದೆ. ಇದೇ ಸಂದರ್ಭದಲ್ಲಿ ಕೇಂದ್ರ ಹಾಗೂ ರೈತ ಮುಖಂಡರ ಜೊತೆಗಿನ 10ನೇ ಸುತ್ತಿನ ಸಭೆ ನಡೆದು, ಕಾಯ್ದೆ ಅಮಾನತಿಗೆ ರೈತರು ಬಿಗಿ ಪಟ್ಟಿ ಹಿಡಿದಿದ್ದಾರೆ. ಆದ್ರೇ ಕೇಂದ್ರ ಸರ್ಕಾರ ಮಾತ್ರ 2 ವರ್ಷ ಕೃಷಿ ಮಸೂದೆ ಅಮಾನತಿಗೆ ಪ್ರಸ್ತಾಪ ಮಾಡಿದ್ದರಿಂದಾಗಿ, ರೈತ ಮುಖಂಡರು ಒಪ್ಪದೇ, ಇಂದಿನ ಸಭೆ ಕೂಡ ವಿಫಲವಾಗಿದೆ.


COMMERCIAL BREAK
SCROLL TO CONTINUE READING

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರೈತ(Farmers) ಮುಖಂಡರ ನಡುವಣ 10ನೇ ಸುತ್ತಿನ ಮಾತುಕತೆ ಸಭೆ ಇಂದು ನಡೆಯಿತು. ಇಂತಹ ಸಭೆಯಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ರೈತರ ಮುಂದಿಟ್ಟಿದೆ. ಆದ್ರೇ ರೈತರು ಮಾತ್ರ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂಬುದಾಗಿ ಪಟ್ಟು ಹಿಡಿದಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ 2 ವರ್ಷ ಮಸೂದೆಗಳನ್ನು ಅಮಾನತ್ತಿನಲ್ಲಿ ಇಡುವಂತ ಪ್ರಸ್ತಾಪವನ್ನು ಮುಂದಿಟ್ಟಿದೆ.


H.D.Kumaraswamy: 'ನನ್ನ ದೇಹ ಅಂತಿಮವಾಗಿ ಭೂಮಿಗೆ ಹೋಗುವುದು ರಾಮನಗರದಲ್ಲೇ'


ಈ ವೇಳೆ ಕೇಂದ್ರ ಸರ್ಕಾರ ಕಾಯ್ದೆಗಳನ್ನು ಅಮಾನತ್ತಿನಲ್ಲಿಡುವಂತ ಪ್ರಸ್ತಾಪಕ್ಕೆ ರೈತ ಮುಖಂಡರು ಸುಖಾರಾಂ ಒಪ್ಪದಿದ್ದರಿಂದ, ಇಂದು ನಡೆದಂತ 10ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ. ಜನವರಿ 22ಕ್ಕೆ ಮತ್ತೊಂದು ಸುತ್ತಿನ ಮಾತುಕತೆಗೆ ದಿನಾಂಕ ನಿಗಧಿಪಡಿಸಲಾಗಿದೆ.


Cabinet Meeting: ನಾಳೆ ಸಚಿವ ಸಂಪುಟ ಸಭೆ: ಹೊಸ ಖಾತೆ ಜೊತೆ ಬರಲಿದ್ದಾರೆ ನೂತನ ಸಚಿವರು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.