ಬೆಂಗಳೂರು: ಪಿಎಸ್ ಐ ಅಕ್ರಮದಲ್ಲಿ ಜೈಲು ಸೇರಿರೋ ಎಡಿಜಿಪಿ ಅಮೃತ್ ಪೌಲ್ ಕುಟುಂಬಸ್ಥರು ಮೊದಲ ಬಾರಿಗೆ ತಂದೆ ಬಂಧನ ಕುರಿತು  ಪತ್ರ ಬರೆದಿದ್ದಾರೆ.ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ, ಈ ಕೇಸ್ ನಲ್ಲಿ ನನ್ನ ತಂದೆ ನಿರಪರಾಧಿ ಎಂದು ಅಮೃತ್ ಪೌಲ್  ಪುತ್ರಿ ನುಹಾರ್ ಬನ್ಸಾಲ್ ಮಾಧ್ಯಮಗಳಿಗೆ ಪತ್ರ ಬರೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KL Rahul : ಔಟಾಗಿದ್ದಕ್ಕೆ ಕೋಪಗೊಂಡ ಕೆಎಲ್ ರಾಹುಲ್ ಮಾಡಿದ್ದು ಹೀಗೆ : Video ಸಖತ್ ವೈರಲ್


ನನ್ನ ತಂದೆ ಐದು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಕೋರ್ಟ್ ನಲ್ಲಿ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದ್ದು, ಅಮೃತ್ ಪೌಲ್ ಒಬ್ಬ ಪ್ರಾಮಾಣಿಕ ಮತ್ತು ದಕ್ಷ ಐಪಿಎಸ್ ಅಧಿಕಾರಿ ಆದರೆ ನನ್ನ ತಂದೆಯನ್ನ ಯಾಕಾಗಿ ಜೈಲಿನಲ್ಲಿ ಹಾಕಿದ್ದಾರೊ ಗೊತ್ತಿಲ್ಲ,ಅವರು ಅಮಾಯಕ ಮಾನಸಿಕ ಹಾಗೂ ದೈಹಿಕವಾಗಿ ಕುಟುಂಬಸ್ಥರು ನೋವು ಅನುಭವಿಸುತ್ತಿದ್ದೇವೆ. ಅವರು ಜೈಲಿನಲ್ಲಿರೋದರಿಂದ ಆರ್ಥಿಕವಾಗಿಯೂ ಕುಟುಂಬಸ್ಥರಿಗೆ ಸಮಸ್ಯೆಯಾಗುತ್ತಿದೆ.ಜುಲೈ 22 ರಿಂದ ತಂದೆಯವರು ಬ್ಯಾಂಕ್ ಖಾತೆಯನ್ನೂ ಫ್ರೀಜ್ ಮಾಡಲಾಗಿದೆ.ಇಎಂಐ ಕಟ್ಟಲಾಗದೇ ಸಾಕಷ್ಟು ದಂಡ ಕೂಡ ವಿಧಿಸಲಾಗುತ್ತಿದೆ.


ಇದನ್ನೂ ಓದಿ: India vs Bangladesh 1st Test: ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಂತ್


ತಂದೆ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ಲೂಪ್ ಹೋಲ್ಸ್ ಗಳಿವೆ.ಸಂಬಂಧ ಪಟ್ಟ ಇಲಾಖೆ ಗಮನಕ್ಕೆ ಇದನ್ನು ತನ್ನಿ ನಮಗೆ ನ್ಯಾಯ ಕೊಡಿಸಿ ಎಂದು ಎಡಿಜಿಪಿ ಅಮೃತಪ್ ಪೌಲ್ ಪುತ್ರಿ ಪತ್ರ ಬರೆದಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.