ಹುಬ್ಬಳ್ಳಿ: ನೆರೆ ಪರಿಹಾರಕ್ಕೆ ಹಣದ ತೊಂದರೆ ಇಲ್ಲ. ಸಂತ್ರಸ್ತರ ನೆರವಿಗೆ ಧಾವಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.


COMMERCIAL BREAK
SCROLL TO CONTINUE READING

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಮನೆ ಕಟ್ಟಲು 5‌ಲಕ್ಷ ಪರಿಹಾರ ಧನ ನಿಗದಿ ಮಾಡಲಾಗಿದೆ. ಭಾಗಶಃ ಮನೆ ಹಾನಿಗೆ 1 ಲಕ್ಷ ಹಣವನ್ನು ನೀಡಲಾಗುತ್ತಿದೆ. ಇದುವರೆಗೂ ಸರ್ಕಾರದಿಂದ 1200 ಕೋಟಿ ಪರಿಹಾರ ಧನ ಬಿಡುಗಡೆ ಮಾಡಿ ನೆರೆ ಪರಿಹಾರ ಕೈಗೊಳ್ಳುಲಾಗಿದೆ ಎಂದರು.


ಇದಕ್ಕೂ ಮುನ್ನಾ ಜಿಲ್ಲಾಡಳಿತದಿಂದ ಮುಖ್ಯ ಮಂತ್ರಿಗಳಿಗೆ ಗೌರವ ರಕ್ಷೆ ನೀಡಲಾಯಿತು. 


ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ.ಪಾಟೀಲ, ಜಿಲಾಧಿಕಾರಿ ದೀಪಾ ಚೋಳನ್ , ಪೊಲೀಸ್ ಆಯುಕ್ತ ಆರ್.ದಿಲೀಪ್, ಜಿ.ಪಂ.ಸಿಇಓ ಡಾ.ಬಿ.ಸತೀಶ್, ಪೊಲೀಸ್ ವರಿಷಿಷ್ಠಾಧಿಕಾರಿ ವರ್ತಿಕಾ ಕಠಯಾರ್ ಸೇರಿದಂತೆ ಮತ್ತಿತರು ಉಪಸ್ಥಿತಿರಿದ್ದರು.